

ನವದೆಹಲಿ/ಚಂಡೀಗಢ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ‘ಪ್ರತೀಕಾರ’ ತೀರಿಸಿಕೊಳ್ಳುವುದಾಗಿ ನ್ಯಾಯಕ್ಕಾಗಿ ಸಿಖ್ ಸಂಘಟನೆಯ ಸಂಸ್ಥಾಪಕ, ಘೋಷಿತ ಖಲಿಸ್ತಾನಿ ಉಗ್ರ ಗುರ್ಪತ್ವಂತ್ ಸಿಂಗ್ ಪನ್ನೂನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಿದ್ದು ರಾಷ್ಟŠ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪನ್ನೂನ್ ಕೆಲವು ಪತ್ರಕರ್ತರಿಗೆ ಇಮೇಲ್ ವಿಡಿಯೋ ಕಳಿಸಿದ್ದು ನೇರವಾಗಿ ಪ್ರಧಾನಿಯನ್ನು ಗುರಿಯಾಗಿಸಿ ಮಾತಾಡಿರುವುದು ಈ ವಿಡಿಯೋದಲ್ಲಿದೆ.
‘ಮೋದಿ ಅವರೇ.. ಧೈರ್ಯವಿದ್ದರೆ ಭದ್ರತೆ ಇಲ್ಲದೆ ದೆಹಲಿಗೆ ಬನ್ನಿ. ನೀವು ಜನಪ್ರಿಯ ನಾಯಕ ಆಗಿದ್ದೇ ಆದಲ್ಲಿ ಗಣರಾಜ್ಯ ದಿನದಂದು ಭದ್ರತೆ ಇಲ್ಲದೆ ಹೊರಗೆ ಬನ್ನಿ. ಖಲಿಸ್ತಾನಿ ಧ್ವಜವನ್ನು ಹಾರಿಸುವ ಮೂಲಕ ಶಹೀದ್ ನಿಜ್ಜರ್ ಹತ್ಯೆಗೆ ಎಸ್ಎಫ್ಜೆ ಪ್ರತೀಕಾರ ತೀರಿಸಿ ಕೊಳ್ಳುತ್ತದೆ’ ಎಂದು ಪನ್ನೂನ್ ಬೆದರಿಕೆ ಹಾಕಿದ್ದಾನೆ.
ನಿಜ್ಜರ್ ಹತ್ಯೆಗೆ ‘ಪ್ರತೀಕಾರ’ ತೀರಿಸಿಕೊಳ್ಳುವು ದಾಗಿ ದೆಹಲಿಯಲ್ಲಿ ಅಂಟಿಸಲಾಗಿರುವ ಭಿತ್ತಿಪತ್ರಗಳಲ್ಲೂ ಬೆದರಿಸಲಾಗಿದ್ದು ಅವು ವೈರಲ್ ಆಗಿವೆ. ಪನ್ನೂನ್ ಹಾಕಿರುವ ಬೆದರಿಕೆಯಿಂದ ಕಳವಳ ಉಂಟಾಗಿದ್ದು ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯ ವಿವಿಧೆಡೆ ಅಂಟಿಸಲಾಗಿರುವ ಬೆದರಿಕೆ ಭಿತ್ತಿಪತ್ರಗಳ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ನಿಜ್ಜರ್ ಹತ್ಯೆಗೆ ಪ್ರತೀಕಾರ ಕೈಗೊಳ್ಳುವುದು ಎಸ್ಎಫ್ಜೆ ಗುರಿ ಎಂದು ಅವುಗಳಲ್ಲಿ ಹೇಳಲಾಗಿದೆ. ಕೆನಡಾದ ಸರ್ರೆಯಲ್ಲಿರುವ ಒಂದು ಗುರುದ್ವಾರದ ಹೊರಗೆ ಕಳೆದ ವರ್ಷ ಜೂನ್ 18ರಂದು ಕೆಲವು ಅಪರಿಚಿತರು ನಿಜ್ಜರ್ನನ್ನು ಕೊಂದಿದ್ದರು. ಪನ್ನೂನ್ ಒಬ್ಬ ‘ನಿಯೋಜಿತ ವೈಯಕ್ತಿಕ ಭಯೋತ್ಪಾದಕ’ ಎಂದು ಭಾರತ 2020ರ ಜುಲೈ ಒಂದರಂದು ಘೋಷಿಸಿತ್ತು.
ಧ್ವಜಾರೋಹಣ ತಡೆಗೆ ಕರೆ: ಎಸ್ಎಫ್ಜೆ ಸಂಘಟನೆಗೆ ಸೇರುವಂತೆ ಪಂಜಾಬ್ನ ಗ್ಯಾಂಗ್ಸ್ಟರ್ಗಳಿಗೆ ಪನ್ನೂನ್ ಕರೆ ನೀಡಿದ್ದು, ಸಿಎಂ ಭಗವಂತ್ ಮಾನ್ ಸಹಿತ ರಾಜಕಾರಣಿಗಳಿಗೆ ಗಣರಾಜ್ಯದ ದಿನ ಧ್ವಜಾರೋಹಣ ಮಾಡಲು ಬಿಡದಂತೆ ಒತ್ತಾಯಿಸಿದ್ದಾನೆ. ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ಗೂ ಪನ್ನೂನ್ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಆತ ಕೆಲ ಪತ್ರಕರ್ತರಿಗೆ ಇಮೇಲ್ ಸಂದೇಶ, ವಿಡಿಯೋ ರವಾನಿಸಿದ್ದಾನೆ. ಸಿಎಂ ಮಾನ್ರನ್ನು 1995ರ ಆ.31ರಂದು ಬಾಂಬ್ ದಾಳಿಗೆ ಬಲಿಯಾದ ಮಾಜಿ ಸಿಎಂ ಬೇಅಂತ್ ಸಿಂಗ್ಗೆ ಹೋಲಿಸಿದ್ದಾನೆ. ಡಿಜಿಪಿ ಗೌರವ್ ಯಾದವ್ ಅವರನ್ನು 1990ರಲ್ಲಿ ಬಾಂಬ್ ದಾಳಿಯಲ್ಲಿ ಹತರಾದ ಪೊಲೀಸ್ ಅಧಿಕಾರಿ ಗೋವಿಂದ್ ರಾಮ್ೆ ಹೋಲಿಸಿದ್ದಾನೆ. ಪನ್ನೂನ್ ಹಿಂದೆಯೂ ಇಂಥ ಬೆದರಿಕೆಗಳನ್ನು ಹಾಕಿದ್ದು ವಿಐಪಿಗಳ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಪಂಜಾಬ್ನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟಿŠೕಯ ತನಿಖಾ ಸಂಸ್ಥೆಯ (ಎನ್ಐಎ) ವಿಶೇಷ ಕೋರ್ಟ್, 2021ರ ಫೆ.3ರಂದು ಪನ್ನೂನ್ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದೆ.