More

    ರಾಜ್ಯಮಟ್ಟದ ಹಾಲು ಕರೆಯುವ ಸ್ಫರ್ಧೆ; 80 ಲೀಟರ್​ ಹಾಲು ನೀಡಿ ದಾಖಲೆ ಸೃಷ್ಟಿಸಿದ ಹಸು

    ನವದೆಹಲಿ: ಹಸುವಿನ ಹಾಲು ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿದ್ದು, ಅಂಶಗಳು ಬೇರೆಬೇರೆ ಪ್ರಾಣಿಗಳಲ್ಲಿ ವಿಭಿನ್ನವಾಗಿರುತ್ತವೆ. ನಾವು ಸಾಕಿರುವ ಹಸುವಿಗೆ ಉತ್ತಮ ಪೌಷ್ಠಿಕಾಂಶವಿರುವ ಆಹಾರವನ್ನು ನೀಡಿದರೆ ಹೆಚ್ಚೆಂದರೆ ದಿನಕ್ಕೆ 40 ಲೀಟರ್​ ಹಾಲು ಕೊಡಬಹುದೆಂದು ಕೇಳಿದ್ದೇವೆ. ಆದರೆ, ಇಲ್ಲೊಂದು ಹಸು ದಿನಕ್ಕೆ 80 ಲೀಟರ್​ ಹಾಲು ಕೊಡುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.

    ಹರಿಯಾಣದ ಕರ್ನಾಲ್​ ಜಿಲ್ಲೆಯಲ್ಲಿ ನಡೆದ ಹಾಲು ಕರೆಯುವ ಸ್ಫರ್ಧೆ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಶಕೀರಾ ಎಂಬ ಹೆಸರಿನ ಹಸು ಹೊತ್ತಿಗೆ 40 ಲೀಟರ್​ ಅಂದರೆ, ದಿನಕ್ಕೆ 80 ಲೀಟರ್​ ಹಾಲು ಕೊಡುವ ಮೂಲಕ ಎಲ್ಲರ ಹುಬ್ಬೇರಿಸಿದೆ.

    ಹರಿಯಾಣದ ಕರ್ನಾಲ್​ ಜಿಲ್ಲೆಯಲ್ಲಿ ಇತ್ತೀಚಿಗೆ ಹಾಲು ಕರೆಯುವ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು. . ಈ ಸ್ಪರ್ಧೆಯಲ್ಲಿ ‘ಶಕೀರಾ’ ಎಂಬ ಹಸು 24ಗಂಟೆಗಳಲ್ಲಿ 80 ಲೀಟರ್​​​ ಹಾಲು ನೀಡುವ ಮೂಲಕ ಎಷ್ಯಾದಲ್ಲೇ  ಅತಿ ಹೆಚ್ಚು ಹಾಲು ನೀಡಿದ ಹಸು ಎಂಬ ಖ್ಯಾತಿಗೆ ಪಾತ್ರವಾಗಿದೆ. ಸುನೀಲ್​ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಶಕೀರಾ ಅನೇಕ ಸ್ಫರ್ಧೆಗಳಲ್ಲಿ ಬಹುಮಾನ ಗೆದ್ದಿರುವುದಾಗಿ ಅದರ ಮಾಲೀಕ ಸುನೀಲ್​ ತಿಳಿಸಿದ್ದಾರೆ.

    Shakeera

    ಇದನ್ನೂ ಓದಿ: ಬಾಲರಾಮನ ಪ್ರತಿಷ್ಠಾಪನೆ ವೇಳೆ ರಾಮನಾಮ ಜಪಿಸುವಂತೆ ಕರೆ; ಗಾಯಕಿ ಕೆ.ಎಸ್​. ಚಿತ್ರಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ

    ಈ ಕುರಿತು ಮಾತನಾಡಿರುವ ಮಾಲೀಕ ಸುನೀಲ್​, ಕಳೆದ 12 ವರ್ಷದಿಂದ ನಾವು ಡೈರಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಶಕೀರಾ ಹಾಲು ಕರೆಯುವ ಸ್ಫರ್ಧೆಯಲ್ಲಿ ಜಯಿಸುವ ಮೂಲಕ ಹೆಸರುವಾಸಿಯಾಗಿದ್ದಾಳೆ. ಡಿಎಫ್ಐ ಇದುವರೆಗೆ ಐದು ಬಾರಿ ಸ್ಪರ್ಧೆ ಆಯೋಜಿಸಿದ್ದು, ಪ್ರತೀ ಬಾರಿಯೂ ಶಕೀರ ಗೆದ್ದುಕೊಂಡಿದೆ.

    HF ಥಳಿಯ ಶಕೀರಾಗೆ ಈಗ ಆರೂವರೆ ವರ್ಷವಾಗಿದ್ದು, ಈ ಹಸು 145ಸೆಂ.ಮೀ ಎತ್ತರ ಹಾಗೂ 165ಸೆಂ.ಮೀ ಉದ್ದವಿದೆ. ಶಕೀರಾ ಸೇರಿದಂತೆ ನಮ್ಮ ಡೈರಿಯಲ್ಲಿರುವ ಬೇರೆ ಹಸುಗಳಿಗೆ ಪ್ರತ್ಯೇಕ ಆಹಾರಕ್ರಮವನ್ನು ಅನುಸರಿಸಲಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಕುಡಿಯಲು ಎಳನೀರು ಹಾಗೂ ಪೌಷ್ಠಿಕಾಂಶವುಳ್ಳ ಆಹಾರವನ್ನು ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಬಗ್ಗೆಯೂ ವಿಶೇಷ ಕಾಳಜಿ ವಹಿಸಲಾಗಿದೆ.

    ಇದಕ್ಕೂ ಮುನ್ನ ದಿನಕ್ಕೆ 72 ಲೀಟರ್ ಹಾಲು ಕರೆಯುವ ಮೂಲಕ ಈ ಹಸು ದಾಖಲೆ ಬರೆದಿತ್ತು. ಈಗ 80 ಲೀಟರ್​ ಕರೆಯುವ ಮೂಲಕ ತನ್ನದೇ ದಾಖಲೆಯನ್ನು ಸರಿಗಟ್ಟಿದೆ ಹಾಗೂ ಹಂಟರ್​ ಬೈಕ್​ ಗೆದ್ದುಕೊಟ್ಟಿದೆ ಎಂದು ಮಾಲೀಕ ಸುನೀಲ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts