More

    ಒಂದೇ ಕೈಯಲ್ಲಿ ಅದ್ಭುತವಾಗಿ ಫ್ಲೈಯಿಂಗ್ ಕ್ಯಾಚ್ ಹಿಡಿದ ಆಟಗಾರ; ವಿಡಿಯೋ ವೈರಲ್

    ನವದೆಹಲಿ:  ಕ್ರಿಕೆಟ್ ಒಂದು ಅತ್ಯದ್ಭುತ ಕ್ರೀಡೆಯಾಗಿದ್ದು, ಸದಾ ಒಂದಿಲ್ಲೊಂದು ವಿಚಾರಗಳಿಗೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿರುತ್ತದೆ. ಇದೀಗ ಅದೇ ರೀತಿಯ ಘಟನೆಯೊಂದು ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ SA20​ ಲೀಗ್​ನಲ್ಲಿ ನಡೆದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

    ಕ್ರಿಕೆಟ್​ನಲ್ಲಿ ಕ್ಯಾಚಸ್​ ವಿನ್ಸ್​ ಮ್ಯಾಚಸ್​ ಎಂಬ ಪ್ರಸಿದ್ದ ನಾಣುಡಿ ಇದೇ. ಅದೇ ರೀತಿ  ಡರ್ಬನ್​ ಸೂಪರ್​ಜೈಂಟ್ಸ್​ ಹಾಘೂ ಜೋಬರ್ಗ್​ ಸೂಪರ್​ಕಿಂಗ್ಸ್​ ನಡುವಿನ ಪಂದ್ಯದಲ್ಲಿ ಆಟಗಾರನೊಬ್ಬ ಒಂದೇ ಕೈಯಲ್ಲಿ ಹಿಡಿದಿರುವ ಫ್ಲೈಯಿಂಗ್ ಕ್ಯಾಚ್​ ವೈರಲ್​ ಆಗಿದ್ದು, ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದೆ.

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಡರ್ಬನ್​ ಸೂಪರ್​ಜೈಂಟ್ಸ್​ ತಂಡದ ನಾಯಕ ಕೇಶವ್ ಮಹರಾಜ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆರಂಭಿಕ ವೈಫಲ್ಯದ ನಡುವೆ ಮ್ಯಾಥ್ಯೂ ಬ್ರೀಟ್​ಝ್ಕಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ನಾಂಡ್ರೆ ಬರ್ಗರ್ ಎಸೆತದ 4ನೇ ಓವರ್​ನ 5ನೇ ಎಸೆತದಲ್ಲಿ ಬ್ರೀಟ್​ಝ್ಕಿ ಫ್ಲಿಕ್​ ಶಾಟ್​ಗೆ ಯತ್ನಿಸಿದ್ದರು. ಈ ವೇಳೆ ಶಾರ್ಟ್ ಮಿಡ್-ವಿಕೆಟ್‌ನತ್ತ ಚಿಮ್ಮಿದ ಚೆಂಡನ್ನು ಅಲ್ಲೇ ಫೀಲ್ಡಿಂಗ್​ನಲ್ಲಿದ್ದ ರೊಮಾರಿಯೊ ಶೆಫರ್ಡ್​ ಅದ್ಭುತವಾಗಿ ಹಿಡಿಯುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.

    ಇದನ್ನೂ ಓದಿ: ಕ್ರಿಕೆಟ್​ ಇತಿಹಾಸದಲ್ಲೇ ಅತ್ಯದ್ಭುತ ಕ್ಯಾಚ್​ ಹಿಡಿದ ಆಟಗಾರ; ವಿಡಿಯೋ ವೈರಲ್

    ರೊಮೊರಿಯೊ ಶೆಫರ್ಡ್ ಹಿಡಿದ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ವಿಂಡೀಸ್ ಕ್ರಿಕೆಟಿಗನ ಅದ್ಭುತ ಫೀಲ್ಡಿಂಗ್​ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅಂತಿಮವಾಗಿ ಡರ್ಬನ್​ ಸೂಪರ್​ಜೈಂಟ್ಸ್​ ಹೆನ್ರಿಚ್​ ಕ್ಲಾಸೆನ್​ (64 ರನ್, 41 ಎಸೆತ, 7 ಬೌಂಡರಿ, 2 ಸಿಕ್ಸರ್​) ಅರ್ಧಶತಕದ ಫಲವಾಗಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 145 ರನ್​ ಗಳಿಸಿತ್ತು.

    ಈ ಸುಲಭ ಗುರಿಯನ್ನು ಬೆನ್ನತ್ತಿದ ಜೋಬರ್ಗ್ ಸೂಪರ್ ಕಿಂಗ್ಸ್​ ತಂಡವು ಡರ್ಬನ್ ಬೌಲರ್​ಗಳ ಸಂಘಟಿತ ದಾಳಿಯಿಂದ ತತ್ತರಿಸಿತು. ಪರಿಣಾಮ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 108 ರನ್​ಗಳಿಸಿ 37 ರನ್​ಗಳಿಂದ ಸೋಲೊಪ್ಪಿಕೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts