More

    ಕ್ರಿಕೆಟ್​ ಇತಿಹಾಸದಲ್ಲೇ ಅತ್ಯದ್ಭುತ ಕ್ಯಾಚ್​ ಹಿಡಿದ ಆಟಗಾರ; ವಿಡಿಯೋ ವೈರಲ್

    ನವದೆಹಲಿ: ಕ್ರಿಕೆಟ್ ಒಂದು ಅತ್ಯದ್ಭುತ ಕ್ರೀಡೆಯಾಗಿದ್ದು, ಸದಾ ಒಂದಿಲ್ಲೊಂದು ವಿಚಾರಗಳಿಗೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿರುತ್ತದೆ. ಇದೀಗ ಅದೇ ರೀತಿಯ ಘಟನೆಯೊಂದು ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ ಸೂಪರ್​ ಸ್ಮ್ಯಾಶ್​ ಲೀಗ್​ನಲ್ಲಿ ನಡೆದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

    ಕ್ರಿಕೆಟ್​ನಲ್ಲಿ ಕ್ಯಾಚಸ್​ ವಿನ್ಸ್​ ಮ್ಯಾಚಸ್​ ಎಂಬ ಪ್ರಸಿದ್ದ ನಾಣುಡಿ ಇದೇ. ಅದೇ ರೀತಿ ವೆಲ್ಲಿಂಗ್ಟನ್ ಹಾಗೂ ಸೆಂಟ್ರಲ್ ಡಿಸ್ಟ್ರಿಕ್ಟ್ಸ್​ ನಡುವಿನ ಪಂದ್ಯದಲ್ಲಿ ಆಟಗಾರನೊಬ್ಬ ಹಿಡಿದಿರುವ ಕ್ಯಾಚ್​ ಕ್ರಿಕೆಟ್​ ಇತಿಹಾಸದಲ್ಲೇ ಅತ್ಯದ್ಭುತ​ ಕ್ಯಾಚ್ ಎಂದು ಹಲವರು ಬಣ್ಣಿಸಿದ್ದಾರೆ.

    ಟಾಸ್ ಗೆದ್ದ ವೆಲ್ಲಿಂಗ್ಟನ್ ತಂಡವು ಮೊದಲು ಬ್ಯಾಟ್ ಮಾಡಿತು. ಅದರಂತೆ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು. 148 ರನ್​ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಪರ ವಿಲ್ ಯಂಗ್ ಹಾಗೂ ಜಾಕ್ ಬೊಯೆಲ್ ಇನಿಂಗ್ಸ್ ಆರಂಭಿಸಿದರು. ಮೈಕೆಲ್ ಸ್ನೆಡೆನ್ ಎಸೆದ ಪಂದ್ಯದ 6ನೇ ಓವರ್​ನ 2ನೇ ಎಸೆತವನ್ನು ವಿಲ್ ಯಂಗ್ ನೇರವಾಗಿ ಬಾರಿಸಿದ್ದಾರೆ.

    ಇದನ್ನೂ ಓದಿ: ಎಲಿಮಿನೇಷನ್​ ಕೆನ್ನಾಲಿಗೆಯಲ್ಲಿ ಸಂತು-ಪಂತು; ಬಿಕ್ಕಿಬಿಕ್ಕಿ ಅತ್ತ ವರ್ತೂರ್

    ಬ್ಯಾಟ್ಸ್​ಮನ್​ ಚೆಂಡನ್ನು ಸಿಕ್ಸರ್​ಗೆ ಅಟ್ಟಿದ್ದಾರ ಎಂದು ಎಲ್ಲರೂ ಭಾವಿಸಿದ್ದರು. ಆದರೆ,  30 ಯಾರ್ಡ್ ಸರ್ಕಲ್​ನಿಂದ ಓಡಿ ಬಂದ ಟ್ರಾಯ್ ಜಾನ್ಸನ್ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಆಕಾಶದತ್ತ ಚಿಮ್ಮಿದ ಚೆಂಡು ಇನ್ನೇನು ಬೌಂಡರಿ ಲೈನ್ ಬಳಿ ಬೀಳಲಿದೆ ಅನ್ನುವಷ್ಟರಲ್ಲಿ ಟ್ರಾಯ್ ಜಾನ್ಸನ್ ಅದ್ಭುತವಾಗಿ ಡೈವ್ ಹೊಡೆದರು. ಅಲ್ಲದೆ ಚೆಂಡನ್ನು ಬಂಧಿಸಿದರು. ಆದರೆ ಕ್ಷಣಾರ್ಧದಲ್ಲೇ ಅವರು ಬೌಂಡರಿ ಗೆರೆಯನ್ನು ದಾಟಲಿದ್ದೇನೆ ಎಂದರಿತು ಅವರು ಚೆಂಡನ್ನು ನಿಕ್ ಕೆಲ್ಲಿಗೆ ಎಸೆದರು. ಇತ್ತ ನಿಕ್ ಚೆಂಡನ್ನು ಹಿಡಿಯುವ ಮೂಲಕ ಕ್ಯಾಚ್ ಅನ್ನು ಪೂರ್ಣಗೊಳಿಸಿ ವಿಲ್ ಯಂಗ್​ ಅವರನ್ನು ಔಟ್​ ಮಾಡಿದ್ದಾರೆ.

    ಈ ಅದ್ಭುತ ಕ್ಯಾಚ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಟ್ರಾಯ್ ಜಾನ್ಸನ್ ಹಿಡಿದ ಈ ಕ್ಯಾಚ್ಅನ್ನು ಕ್ರಿಕೆಟ್ ಇತಿಹಾಸದ ಅತ್ಯದ್ಭುತ ಕ್ಯಾಚ್​ಗಳಲ್ಲಿ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಕ್ರಿಕೆಟ್ ಅಂಗಳದಲ್ಲಿ ಈ ಕ್ಯಾಚ್​ ಹೊಸ ಸಂಚಲನ ಸೃಷ್ಟಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts