ಎಲಿಮಿನೇಷನ್​ ಕೆನ್ನಾಲಿಗೆಯಲ್ಲಿ ಸಂತು-ಪಂತು; ಬಿಕ್ಕಿಬಿಕ್ಕಿ ಅತ್ತ ವರ್ತೂರ್

Thukali varthur
Published on

ಬೆಂಗಳೂರು: ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ಸ್ಫರ್ಧಿಗಳು ಗೆಲ್ಲಬೇಕೆಂಬ ಹಂಬಲದೊಂದಿಗೆ ಒಂದಿಲ್ಲೊಂದು ಸ್ಟ್ರಾಟರ್ಜಿ ಮಾಡುತ್ತಿದ್ದಾರೆ.

ಬಿಗ್​ಬಾಸ್​ ಶೋ ಈಗ ನೊನೆ ಹಂತ ತಲುಪಿದ್ದು, ನಾಮಿನೇಟ್​ ಆಗಿದ್ದ ಆರು ಸದಸ್ಯರ ಪೈಕಿ ಒಬ್ಬರ ಎಲಿಮಿನೇಷನ್​ ಆಗಿದ್ದು, ತುಕಾಲಿ ಸಂತೋಷ್​ ಹಾಗೂ ವರ್ತೂರ್​ ಸಂತೋಷ್​ ಪೈಕಿ ಒಬ್ಬರು ಮನೆಯಿಂದ ಹೊರಬರಲಿದ್ದಾರೆ ಎಂದು ನಿರೂಪಕ ಕಿಚ್ಚ ಸುದೀಪ್​ ಅವರು ಹೇಳಿದ್ದಾರೆ.

ಪ್ರತಿ ಬಿಗ್​ಬಾಸ್​ ಸೀಸನ್​ನಲ್ಲಿ ಇಬ್ಬರು ಸ್ಫರ್ಧಿಗಳ ನಡುವಿನ ಸ್ನೇಹ ಹಾಗೂ ಆತ್ಮೀಯತೆ ಪ್ರೇಕ್ಷಕರ ಗಮನ ಸೆಳೆದಿತ್ತು. ಅದೇ ರೀತಿ ಈ ಬಾರಿ ತುಕಾಲಿ ಸಂತೋಷ್​ ಹಾಗೂ ವರ್ತೂರು ಸಂತೋಷ್​ ಅವರು ತುಂಬಾ ಆತ್ಮೀಯವಾಗಿದ್ದರು. ಇಬ್ಬರೂ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಇಬ್ಬರ ಪೈಕಿ ಒಬ್ಬರು ಮನೆಯಿಂದ ಹೊರಬರುತ್ತಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ ಎಮೋಷನಲ್ ಆಗಿದ್ದಾರೆ.

ಬಿಗ್​ಬಾಸ್​ ಮನೆಯಲ್ಲಿ ಈವರೆಗೆ ತಾವು ಕಳೆದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ಕಣ್ಣೀರು ಹಾಕಿದ್ದನ್ನು ನೋಡಿ  ಮನೆ ಮಂದಿ ಭಾವುಕರಾಗಿದ್ದಾರೆ. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ಇಬ್ಬರ ಪೈಕಿ ಯಾರು ಮನೆಯಿಂದ ಯಾರು ಹೊರಬರಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net