ಬಾಲರಾಮನ ಪ್ರತಿಷ್ಠಾಪನೆಗೆ ದಿನಗಣನೆ; ಲೇಪಾಕ್ಷಿ ವೀರಭದ್ರನಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

Lepakshi Temple
Published on

ಅಮರಾವತಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22, 2024ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವಾಲಯದಲ್ಲಿ ಆರತಿ ಬೆಳಗಿ, ಪ್ರಾರ್ಥನೆ ಸಲ್ಲಿಸಿದ ಬಳಿಕ ಅಲ್ಲಿಯೇ ಕುಳಿತು ರಾಮ ಭಜನೆಯನ್ನು ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ರಾಮಮಂದಿರ ಉದ್ಘಾಟನೆಗೂ ಮುನ್ನ ಆಂಧ್ರಪ್ರದೇಶ ಹಾಗೂ ಕೇರಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಬಹುಕೋಟಿ ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.  ಬುಧವಾರ ಕೇರಳದ ಗುರುವಾಯೂರು ಮತ್ತು ತ್ರಿಪ್ರಯಾರದ ಶ್ರೀ ರಾಮಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಲೇಪಾಕ್ಷಿಗೂ ರಾಮಾಯಣಕ್ಕೂ ಉಂಟು ನಂಟು

ಲೇಪಾಕ್ಷಿಗೂ ರಾಮಾಯಣಕ್ಕೂ ನಂಟಿದೆ. ವನವಾಸದಲ್ಲಿರುವ ಸಮಯದಲ್ಲಿ ಸೀತಾ ಮಾತೆಯನ್ನು ರಾವಣ ಅಪಹರಿಸುವಾಗ ಜಟಾಯುಇದೇ ಜಾಗದಲ್ಲಿ ಆತನನ್ನು ಬೆನ್ನಟ್ಟಿ ಹೋರಾಟ ನಡೆಸಿತ್ತು. ಬಳಿಕ ರಾವಣನ ದಾಳಿಯಿಂದ ನೆಲಕ್ಕೆ ಬಿದ್ದು ಸಾಯುವ ಸ್ಥಿತಿಯಲ್ಲಿದ್ದ ಜಟಾಯು ಸೀತಾ ದೇವಿಯನ್ನು ರಾವಣ ಅಪಹರಿಸಿದ ವಿಚಾರವನ್ನು ಶ್ರೀರಾಮನಿಗೆ ತಿಳಿಸಿ ಪ್ರಾಣ ಬಿಟ್ಟಿತ್ತು. ಬಳಿಕ ರಾಮ ಜಟಾಯುವಿನ ಅಂತ್ಯಕ್ರಿಯೆ ನಡೆಸಿ ಮೋಕ್ಷ ಕಲ್ಪಿಸಿದ ಜಾಗಕ್ಕೆ ಲೇಪಾಕ್ಷಿ ಎನ್ನುವ ನಂಬಿಕೆಯಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net