

ನ್ಯೂಯಾರ್ಕ್: ಧಾರ್ವಿುಕ ರೀತಿ-ರಿವಾಜಿಗೆ ನಿಯಮ ಅಡ್ಡಿಯಾಗಿ ಪೇಚಿಗೆ ಸಿಲುಕಿದ ಪ್ರಸಂಗ ಇದು. ಅಮೆರಿಕದ ನ್ಯೂಯಾರ್ಕ್ ರಾಜ್ಯದ ಪೊಲೀಸ್ ಕೈಪಿಡಿ ಪ್ರಕಾರ, ಯಾವುದೇ ಸಿಬ್ಬಂದಿ ಗಡ್ಡ ಬಿಡುವಂತಿಲ್ಲ. ಆದರೆ, ವಿವಾಹಕ್ಕಾಗಿ ತನ್ನ ಧರ್ಮದಂತೆ ಗಡ್ಡ ಬಿಟ್ಟಿದ್ದ ಸಿಖ್ ಪೊಲೀಸ್ ಈಗ ಸಿಕ್ಕಿಹಾಕಿಕೊಂಡಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ಇದೇ ಕೈಪಿಡಿಯ ವಿನಾಯಿತಿ ನಿಯಮವನ್ನು ಉಲ್ಲೇಖಿಸಿದ ಅವರು, ಧಾರ್ವಿುಕ ಆಚರಣೆಗೆ ಉದ್ಯೋಗಿಗೆ ಅವಕಾಶ ನೀಡಬೇಕು ಎಂಬ ಫೆಡರಲ್ ಕೋರ್ಟ್ನ ಆದೇಶದ ಸಾಲನ್ನು ತೋರಿಸಿದ್ದಾರೆ. ವ್ಯಾಜ್ಯದ ವಿಚಾರಣೆ ಮುಂದುವರಿದಿದೆ.
ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಸಿಬ್ಬಂದಿಯಾದ ಚರಣ್ಜೋಂತ್ ತಿವಾನಾ, ಕಳೆದ ವರ್ಷ ವಿವಾಹ ಆಗಿದ್ದರು. ಸಿಖ್ ಸಂಪ್ರದಾಯದಂತೆ ಅರ್ಧ ಇಂಚು ದಪ್ಪದ ಗಡ್ಡ ಬಿಟ್ಟಿದ್ದರು. ಇದೇ ವೇಳೆ ಕರ್ತವ್ಯದ ನಿಮಿತ್ತ ಅನಿಲದ ಮಾಸ್ಕ್ ಹಾಕಬೇಕಾದ ಪ್ರಸಂಗ ಬಂತು. ಆದರೆ, ತಿವಾನಾ ಗಡ್ಡ ಬಿಟ್ಟಿದ್ದ ಕಾರಣ ಸುರಕ್ಷತಾ ದೃಷ್ಟಿಯಿಂದ ಇದನ್ನು ಹಾಕಲು ಒಲ್ಲೆ ಎಂದರು. ಇದರಿಂದ ಕಾನೂನಿನ ಘರ್ಷಣೆಗೆ ಸಿಲುಕಿದರು.
ಪೊಲೀಸ್ ಇಲಾಖೆ ಸೇರಿ ಆರು ವರ್ಷವಾದರೂ, ತಮ್ಮ ಧರ್ವನುಸಾರ ತೊಡಬೇಕಿದ್ದ ಪಗಡಿ ಧರಿಸಲು ಅನುಮತಿ ಪಡೆದುಕೊಂಡಿಲ್ಲ. ಹೀಗಾಗಿ ಅವರಿಗೆ ಗಡ್ಡ ಬಿಡುವುದಕ್ಕೂ ಅನುಮತಿ ಇರಲಿಲ್ಲ. ಇದನ್ನೇ ಕಾರಣವಾಗಿಟ್ಟುಕೊಂಡು ತಿವಾನಾ ವಿರುದ್ಧ ಪ್ರಕರಣ ಜಡಿಯಲಾಗಿದೆ.‘ಏನೋ ಗೊತ್ತಾಗಲಿಲ್ಲ, ಮನ್ನಿಸಿಬಿಡಿ’ ಎಂದು ತಿವಾನಾ ಮಾಡಿದ ಮನವಿ ಕೂಡ ತಿರಸ್ಕಾರ ಆಗಿದೆ ಎನ್ನಲಾಗಿದೆ.
ಕಾನೂನು ಪರಿಪಾಲಕರೇ ತಪ್ಪು ಮಾಡಿದರೆ ಹೇಗೆ? ವೈವಿಧ್ಯತೆಯನ್ನು ಗೌರವಿಸುವ ಇಲಾಖೆ, ಕೆಲವು ಧರ್ವಿುಯರಿಗೆ ವಿನಾಯಿತಿ ನೀಡಿದೆ. ಅದನ್ನು ಪಡೆದುಕೊಳ್ಳಬಹುದಿತ್ತು ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ. (ಏಜೆನ್ಸೀಸ್)