ಶ್ಯಾಮ್ಕೋಸ್ ಅಧ್ಯಕ್ಷರಾಗಿ ಸಿದ್ದಪ್ಪ ಆಯ್ಕೆ

skp shamcos
ಶ್ಯಾಮ್ಕೋಸ್ ನೂತನ ಅಧ್ಯಕ್ಷ, ಉಪಾಧ್ಯಕ್ಷರಾದ ಬಿ.ಸಿದ್ದಪ್ಪ, ಬಸವನ ಗೌಡ ಅವರನ್ನು ನಿರ್ದೇಶಕರು ಸನ್ಮಾನಿಸಿದರು. ಸತೀಶ್, ಆರ್.ಕೆ.ಶಂಭು, ರಮೇಶ್, ಚಂದ್ರೇಗೌಡ ಇತರರಿದ್ದರು.
Published on

ಶಿಕಾರಿಪುರ: ಶಿಕಾರಿಪುರ ತಾಲೂಕು ಅಡಕೆ ಪರಿಷ್ಕರಣೆ, ಅಭಿವೃದ್ಧಿ ಮತ್ತು ಮಾರಾಟ ಸಹಕಾರ ಸಂಘ(ಶ್ಯಾಮ್ಕೋಸ್) ಅಧ್ಯಕ್ಷರಾಗಿ ತಾಳಗುಂದದ ಬಿ.ಸಿದ್ದಪ್ಪ, ಉಪಾಧ್ಯಕ್ಷರಾಗಿ ಕೊರಲಹಳ್ಳಿ ಬಸವನ ಗೌಡ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷ ಬಿ.ಸಿದ್ದಪ್ಪ ಮಾತನಾಡಿ, ವರ್ಷದಿಂದ ವರ್ಷಕ್ಕೆ ಅಡಕೆ ತೋಟಗಳ ನಿರ್ಮಾಣ ಹೆಚ್ಚಾಗುತ್ತಿದೆ. ಮಾರುಕಟ್ಟೆಗೆ ಬರುವ ಅಡಕೆ ಆವಕ ಕೂಡ ಜಾಸ್ತಿಯಾಗುತ್ತಿದೆ. ಇದರಿಂದ ಶ್ಯಾಮ್ಕೋಸ್ ಉತ್ತಮವಾಗಿ ಬೆಳೆಯುವ ನಿರೀಕ್ಷೆ ಇದೆ. ಸಣ್ಣ ರೈತರಿಂದ ಹಿಡಿದು ಎಲ್ಲರಿಗೂ ಅನುಕೂಲವಾಗಿದೆ ಎಂದರು. ಶ್ಯಾಮ್ಕೋಸ್ ಮೂಲಕ ಅಡಕೆ ಖರೀದಿ ಕೇಂದ್ರ ಆರಂಭಿಸಿದ ಫಲವಾಗಿ ಇಂದು ಸಂಸ್ಥೆ ಉತ್ತಮವಾಗಿ ಬೆಳೆದಿದೆ. ಮೊದಲು ಸಾವಿರ ಕ್ವಿಂಟಾಲ್ ಅಡಕೆ ಬರುತ್ತಿರಲಿಲ್ಲ. ಈಗ ವ್ಯವಹಾರ ವಿಸ್ತಾರವಾಗಿದೆ ಎಂದು ಹೇಳಿದರು. ಚುನಾವಣಾಧಿಕಾರಿಯಾಗಿ ಅರವಿಂದ್ ಕಾರ್ಯ ನಿರ್ವಹಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್, ತಾಪಂ ಮಾಜಿ ಅಧ್ಯಕ್ಷ ಆರ್.ಕೆ.ಶಂಭು, ಮೃತ್ಯುಂಜಯ ನಾಯಕ್, ರಮೇಶ್, ಚಂದ್ರೇಗೌಡ, ಲಕ್ಷ್ಮಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net