ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾದ ಅಣ್ಣ-ತಂಗಿ! ಪರಸ್ಪರ ಕೈಕಟ್ಟಿಕೊಂಡು ದುರಂತ ಅಂತ್ಯ

ವಿಜಯವಾಣಿ - 2024-08-02T102732.112
Published on

ಚಿಕ್ಕಬಳ್ಳಾಪುರ: ಸಾವಿನಲ್ಲೇ ಮುಕ್ತಿ ಪಡೆಯುವ ಕೆಟ್ಟ ನಿರ್ಧಾರ ಕೈಗೊಂಡ ಅಣ್ಣ-ತಂಗಿ, ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಶಿಡ್ಲಘಟ್ಟ ನಗರದಲ್ಲಿ ಸಂಭವಿಸಿದೆ. ಪರಸ್ಪರ ಕೈಗಳನ್ನು ದಾರದಿಂದ ಕಟ್ಟಿಕೊಂಡು ರೈಲಿನ ಹಳಿ ಮೇಲೆ ಮಲಗಿ, ಸಾವಿಗೆ ಶರಣಾಗಿದ್ದಾರೆ.

ಶಿಡ್ಲಘಟ್ಟದ ಪ್ರೇಮ ನಗರದ ನಿವಾಸಿಗಳಾದ ಪ್ರಭು ಮತ್ತು ನವ್ಯ ಮೃತ ದುರ್ದೈವಿಗಳು. ನಗರದ ಶೆಟ್ಟಪ್ಪನವರ ತೋಪಿನ ರೈಲ್ವೆ ಹಳಿಯ ಬಳಿ ಸಹೋದರ ಮತ್ತು ಸಹೋದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಪ್ರಕರಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮಾನಸಿಕ ಖಾಯಿಲೆಯಿಂದ ತಾಯಿ ಮೃತಪಟ್ಟ ಬೆನ್ನಲ್ಲೇ ಮಕ್ಕಳು ಕೂಡ ಖಿನ್ನತೆಯಿಂದ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ತಾಯಿ ಮೃತಪಟ್ಟಿದ್ದಾರೆ. ಈ ವಿಷಯವನ್ನು ಅರಗಿಸಿಕೊಳ್ಳಲಾಗದ ಅಣ್ಣ-ತಂಗಿ, ಆತ್ಮಹತ್ಯೆ ನಿರ್ಧಾರ ಕೈಗೊಳ್ಳುವ ಮೂಲಕ ಸಾವಿಗೆ ಶರಣಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net