ಹಣಕ್ಕಾಗಿ ಪತ್ನಿಗೆ ಎಸ್‌ಐ ಚಿತ್ರಹಿಂಸೆ

psi (3)
Published on

ಬೆಂಗಳೂರು: ವರ್ಗಾವಣೆಗೆ ತಂದೆಯಿಂದ ಹಣ ತೆಗೆದುಕೊಂಡು ಬರುವಂತೆ ಪತ್ನಿಗೆ ಚಿತ್ರಹಿಂಸೆ ಕೊಟ್ಟ ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಚಂದ್ರಾ ಲೇಔಟ್ ಠಾಣೆಲ್ಲಿ ಪ್ರಕರಣ ದಾಖಲಾಗಿದೆ.

ನಾಗರಬಾವಿ ಟೀಚರ್ ಕಾಲನಿ ನಿವಾಸಿ ಆರ್. ವರ್ಷ (27) ನೊಂದ ಗೃಹಿಣಿ. ಈಕೆ ಕೊಟ್ಟ ದೂರಿನ ಮೇರೆಗೆ ಸಬ್ ಇನ್‌ಸ್ಪೆಕ್ಟರ್ ಪಿ. ಕಿಶೋರ್, ಮಾವ ಪುಟ್ಟಚೆನ್ನಪ್ಪ, ಅತ್ತೆ ಸರಸ್ವತಮ್ಮ ಮತ್ತು ಮೈದುನ ಪಿ. ಚಂದನ್ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೆಲಮಂಗಲ ಮೂಲದ ಕಿಶೋರ್, ಧರ್ಮಸ್ಥಳ ಠಾಣೆಯಲ್ಲಿ ಪಿಎಸ್‌ಐ ಆಗಿದ್ದಾರೆ. 2024ರ ೆ.21ರಂದು ಸೊಂಡೆಕೊಪ್ಪದಲ್ಲಿ ವಧುವಿನ ಕಡೆಯವರು ಅದ್ದೂರಿಯಾಗಿ ಮದುವೆ ಮಾಡಿದ್ದರು.

ವರದಕ್ಷಿಣೆಗಾಗಿ 10 ಲಕ್ಷ ರೂ. ನಗದು, 22 ಲಕ್ಷ ರೂ. ಮೌಲ್ಯದ ಕ್ರೇಟಾ ಕಾರ್ , 135 ಗ್ರಾಂ ಚಿನ್ನಾಭರಣ ಕೊಟ್ಟಿದ್ದರು. ವರ್ಷಗೆ 900 ಗ್ರಾಂ ಚಿನ್ನಾಭರಣ ಮಾಡಿಸಿಕೊಟ್ಟಿದ್ದರು. ಮದುವೆಗಾಗಿ 1 ಕೋಟಿ ರೂ. ವೆಚ್ಚ ಮಾಡಿದ್ದರು. ಇದಾದ ಮೇಲೆ ಮೂಡಿಗೆರೆ ಠಾಣೆಯಿಂದ ಬೇರೆಡೆ ವರ್ಗಾವಣೆ ಮಾಡಿಸಿಕೊಳ್ಳಲು ಲಂಚ ಕೊಡಲು 10 ಲಕ್ಷ ರೂ.ಗಳನ್ನು ತವರು ಮನೆಯಿಂದ ತೆಗೆದುಕೊಂಡು ಬರುವಂತೆ ್ಕ ಕಿಶೋರ್ ಕೇಳಿದ್ದಾನೆ.

ಆಗುವುದಿಲ್ಲ ಎಂದಾಗ ವರ್ಷಗೆ ಚಿತ್ರಹಿಂಸೆ ಕೊಡಲು ಶುರು ಮಾಡಿದ್ದಾನೆ. ಪ್ರತಿದಿನ ಹಲ್ಲೆ ಮಾಡಲು ಆರಂಭಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದರು. ಕಾಲು ಜಾರಿ ಬಿದ್ದಿರುವಂತೆ ವೈದ್ಯರಿಗೆ ಹೇಳಿಕೆ ಕೊಡಿಸಿದ್ದರು. ಇತ್ತೀಚೆಗೆ ಪತಿ ಮತ್ತು ಅತ್ತೆ, ಮಾವನ ಕಡೆಯಿಂದ ಚಿತ್ರಹಿಂಸೆ ಹೆಚ್ಚಾಗಿ ಪ್ರಾಣ ಭಯದಿಂದ ಪಾಲಕರಿಗೆ ವರ್ಷ ಕರೆ ಮಾಡಿದ್ದಾರೆ. ಪಾಲಕರಿಗೆ ಮಗಳನ್ನು ಕರೆತಂದು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಂದ್ರಾ ಲೇಔಟ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net