ಈ ಒಂದು ಕಾರಣಕ್ಕೆ ತಮಿಳು ಸಿನಿಮಾ ಮಾಡಲಾಗುತ್ತಿಲ್ಲ; ನಟಿ ಶ್ರುತಿ ಹಾಸನ್​​ ಹೇಳಿದ್ದೇನು? | Shurti Haasan

Untitled design - 2025-01-19T181820.605
Published on

ಚೆನ್ನೈ: ದಕ್ಷಿಣದ ಖ್ಯಾತ ನಟಿ ಶ್ರುತಿ ಹಾಸನ್(Shurti Haasan) ನಟನೆಯ ಹಲವು ಸಿನಿಮಾಗಳನ್ನ ನೋಡಿದ್ದೀರಿ. ಅವರ ನಟನೆ ಬಗ್ಗೆ ಹೇಳುವ ಅಗತ್ಯವೆ ಇಲ್ಲ. ಅಷ್ಟು ಅದ್ಭುತವಾಗಿ ನಟಿಸುವ ಶ್ರುತಿ ಹಾಸನ್​​ ಉತ್ತಮ ಗಾಯಕಿಯು ಹೌದು. ತಮ್ಮ ವೃತ್ತಿ ಜೀವನದಲ್ಲಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿರುವ ನಟಿ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ತೆಲುಗು, ತಮಿಳು ಚಿತ್ರರಂಗದ ಬಳಿಕ ಬಾಲಿವುಡ್​ನಲ್ಲೂ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಕಮಲ್​ ಹಾಸನ್​ ಪುತ್ರಿ ತಮಿಳಿನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿಲ್ಲ ಎಂಬುದು ಅವರ ಅಭಿಮಾನಿಗಳ ಪ್ರಶ್ನೆಯಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಶ್ರುತಿ ಹಾಸನ್​​ ಈ ಕುರಿತು ಮಾತನಾಡಿದ್ದಾರೆ. ಶ್ರುತಿ ಹಾಸನ್​ ಅವರಿಗೆ ನೀವು ತೆಲುಗಿನಲ್ಲಿ ಹೆಚ್ಚು ಸಿನಿಮಾ ಮಾಡಿದ್ದೀರಿ ಆದರೆ ತಮಿಳಿನಲ್ಲಿ ಅಷ್ಟು ಸಿನಿಮಾಗಳಲ್ಲಿ ಏಕೆ ನಟಿಸಲಿಲ್ಲ ಎಂದು ಕೇಳಲಾಗಿದೆ.

ತೆಲುಗಿನಲ್ಲಿ ಸ್ಕ್ರಿಪ್ಟ್​​​ ನಿಮಗಿಷ್ಟದಂತೆ ಬರುತ್ತಿರುವುದರಿಂದಲೋ ಅಥವಾ ತೆಲುಗಿನಲ್ಲಿ ನಟಿಸಿಲು ಇಷ್ಟವೆಂದೂ ಅಷ್ಟು ಸಿನಿಮಾ ಮಾಡುತ್ತಿದ್ದೀರಾ ಎಂದು ಕೇಳಿದಾಗು ಶ್ರುತಿ ಹಾಸನ್ ಥಟ್ಟನೇ, ಆ ರೀತಿ ಏನು ಇಲ್ಲ. ನಾನು ಎಲ್ಲೆ ಇದ್ದರೂ ತಮಿಳಿನ ಹುಡಗಿಯೇ, ಚೆನ್ನೈ ನನ್ನ ಮನೆ. ಆದರೆ ತಮಿಳಿನಲ್ಲಿ ಏಕೆ ಸಿನಿಮಾ ಮಾಡುತ್ತಿಲ್ಲ ಎಂದರೆ ನನಗೆ ಬರುತ್ತಿರುವ ಕಥೆಗಳು ಅಷ್ಟಾಗಿ ಇಷ್ಟವಾಗುತ್ತಿಲ್ಲ.

ತಮಿಳಿನಲ್ಲಿ ಸಿನಿಮಾ ಮಾಡಬೇಕು ಎಂದು ಮಾಡುವುದು ಸರಿಯಲ್ಲ ಅಲ್ಲವೆ. ಸಿನಿಮಾ ಮಾಡಿದರೆ ಉತ್ತಮ ಕಥೆಯಾಗಿರಬೇಕು. ಆ ಸಿನಿಮಾ ಇಷ್ಟ ಆಗಬೇಕು ನನಗೆ ಖುಷಿಯಾಗಬೇಕು ಜತೆಗೆ ಪ್ರೇಕ್ಷಕರಿಗೂ ಆ ಸಿನಿಮಾ ಇಷ್ಟ ಆಗಬೇಕು. ಅವರೂ ಇಷ್ಟ ಪಡುವಂತ ಎಂಟರ್​ಟ್ರೈನ್​ಮೆಂಟ್​ ಮತ್ತು ಎಂಜಾಯ್​ಮೆಂಟ್ ಇರಬೇಕು. ಈ ರೀತಿ ಕಥೆ ಇದ್ದರೆ ಆ ಸಿನಿಮಾದಲ್ಲಿ ನಟಿಸುವುದರಲ್ಲಿ ಮೊದಲಿಗಳಾಗಿರುತ್ತೇನೆ. ಏಕೆಂದರೆ ತಮಿಳಿನಲ್ಲಿ ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿದ್ದೇನೆ ನಾನು. ತಮಿಳು ಸಿನಿಮಾ ಮಾಡಬೇಕು ಎಂದು ಬಹಳ ದಿನಗಳಿಂದ ಕಾಯುತ್ತಿದ್ದೇನೆ. ಆದರೆ ಅದಕ್ಕೆಂದು ಒಳ್ಳೆಯ ಅವಕಾಶ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಶ್ರುತಿ ಹಾಸನ್​ ಕೊನೆಯದಾಗಿ ಪ್ರಭಾಸ್​​ ಮುಖ್ಯಭೂಮಿಕೆಯಲ್ಲಿರುವ ಸಲಾರ್​​ 1 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ರಜನಿಕಾಂತ್​ ನಟನೆಯ ಕೂಲಿ ಸಿನಿಮಾದಲ್ಲಿ ಶ್ರುತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net