ನೆಪೊಟಿಸಂ ವಿಚಾರದಲ್ಲಿ ರಾಕೇಶ್​ ರೋಷನ್​ ​& ಹೃತಿಕ್​ ​ ಇತರರಂತಲ್ಲ; ಪಿಗ್ಗಿ ಹೀಗೇಳಿದ್ದೇಕೆ? | Priyanka Chopra

Untitled design - 2025-01-18T182522.801
Published on

ಮುಂಬೈ: ಬಾಲಿವುಡ್‌ನಿಂದ ಹಾಲಿವುಡ್‌ಗೆ ಪ್ರಯಾಣ ಬೆಳೆಸಿದ ಪ್ರಿಯಾಂಕಾ ಚೋಪ್ರಾ(Priyanka Chopra) ಬಿಟೌನ್​ನಲ್ಲಿನ ನೆಪೊಟಿಸಂ ಕುರಿತು ತನ್ನ ಹೋರಾಟಗಳನ್ನು ಹಂಚಿಕೊಳ್ಳಲು ಎಂದಿಗೂ ಹಿಂದೆ ಸರಿಯಲಿಲ್ಲ. ಯಾವುದೇ ಚಿತ್ರರಂಗದಲ್ಲೇ ಆದರೂ ಮನೆಯಲ್ಲಿ ಯಾರಾದರೂ ಒಬ್ಬರು ಚಿತ್ರರಂಗದಲ್ಲಿ ಬೇರೂರಿದ್ದಾರೆ ನಂತರ ಮುಂದಿನ ಪೀಳಿಗೆಯನ್ನು ಅದೇ ರಂಗದಲ್ಲಿ ಮುಂದುವರಿಸುತ್ತಾರೆ. ಅವರಿಗಷ್ಟೇ ಪ್ರಾಮುಖ್ಯತೆ ಕೊಡುವುದನ್ನು ನಾವು ನೋಡಬಹುದು. ಆದರೆ ಇದು ಉಳಿದ ಚಿತ್ರರಂಗಕ್ಕಿಂತ ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಎಂದು ಹೇಳಬಹುದು.

ನೆಪೊಟಿಸಂ ಬಗ್ಗೆ ಹೇಳುತ್ತಿದ್ದ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಹೃತಿಕ್​ ರೋಷನ್ ಮತ್ತು ಅವರ ತಂದೆ ರಾಕೇಶ್​​ ರೋಷನ್​ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಅಸಲಿಗೆ ಪ್ರಸಿದ್ಧ ಬಾಲಿವುಡ್ ನಿರ್ದೇಶಕ ಮತ್ತು ನಟ ರಾಕೇಶ್​ ರೋಷನ್​ ಅವರು ಹಿಂದಿ ಸಿನಿಮಾಗಳ ಸಂಗೀತ ನಿರ್ದೇಶಕ ರೋಷನ್ ಲಾಲ್ ನಾಗ್ರಾಮ್ ಅವರ ಮಗ. ಹೃತಿಕ್ ರೋಷನ್ ಅವರು ರಾಕೇಶ್ ರೋಷನ್ ಅವರ ಮಗ.

ರಾಕೇಶ್ ರೋಷನ್ ಮತ್ತು ಹೃತಿಕ್ ರೋಷನ್ ಸ್ವಜನಪಕ್ಷಪಾತದ ಮೂಲಕ ಬಂದಿದ್ದರೂ ಅವರು ಇತರರಂತೆ ಅಲ್ಲ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ಅವರು ನನ್ನಂತಹ ಚಿತ್ರರಂಗದ ಹಿನ್ನೆಲೆ ಇಲ್ಲದೆ ಬಂದ ಹೊರಗಿನವರಿಗೂ ಚಿತ್ರರಂಗದಲ್ಲಿ ಅವಕಾಶಗಳನ್ನು ನೀಡಿ ಅವರ ಬೆಳವಣಿಗೆಗೆ ಸಹಾಯ ಮಾಡುತ್ತಾರೆ ಎಂದು ತಿಳಿಸಿದರು.

ರಾಕೇಶ್ ರೋಷನ್ ಮತ್ತು ಹೃತಿಕ್ ರೋಷನ್ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಾರೆ. ಇದು ನೆಪೊಟಿಸಂ ಎಂದು ಹೇಳುವುದನ್ನು ನೀವು ಕೇಳಬಹುದು. ಆದರೆ ಅವರು ನನ್ನಂತಹ ಹೊರಗಿನಿಂದ ಬರುವವರಿಗೂ ಅವಕಾಶ ನೀಡುತ್ತಾರೆ. ಈ ರೀತಿ ಅವರಿಂದ ನಟ-ನಟಿಯರಿಗೂ ಪ್ರಯೋಜನವಾಗುತ್ತದೆ. ರಾಕೇಶ್​ ರೋಷನ್​ ತಮ್ಮ ವಲಯವನ್ನು ವಿಸ್ತರಿಸುತ್ತಿರುವುದು ನನಗೆ ಬಹಳ ಸಂತೋಷ ತಂದಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ರಾಕೇಶ್ ರೋಷನ್ ನಿರ್ದೇಶಿಸಿ ನಿರ್ಮಿಸಿದ ಕ್ರಿಶ್‌ ಸಿನಿಮಾದ ಫ್ರಾಂಚೈಸ್​​ನಲ್ಲಿ ಪ್ರಿಯಾಂಕಾ ಚೋಪ್ರಾ ಹೃತಿಕ್​ ರೋಷನ್​ ಅವರೊಂದಿಗೆ ಕೆಲಸ ಮಾಡಿದ್ದಾರೆ. ಕ್ರಿಶ್ (2006) ಮತ್ತು ಕ್ರಿಶ್ 3 (2013) ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಇದು ಮಾತ್ರವಲ್ಲ ಕರಣ್ ಜೋಹರ್ ನಿರ್ಮಿಸಿ ಕರಣ್ ಮಲ್ಹೋತ್ರಾ ನಿರ್ದೇಶಿಸಿದ ‘ಅಗ್ನಿಪಥ್’ ಸಿನಿಮಾದಲ್ಲೂ ಈ ಜೋಡಿ ಒಟ್ಟಿಗೆ ನಟಿಸಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net