ಬಾಕಿನಕೆರೆಗೆ ಶ್ರೀಸತ್ಯ ಗಣಪತಿ ವಿಸರ್ಜನೆ

bakinakere
ಬೀರೂರಿನ ಹಳೇಪೇಟೆಯ ವೀರಭದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಸತ್ಯ ಗಣಪತಿಯನ್ನು ಬಾಕಿನಕೆರೆಯಲ್ಲಿ ವಿಸರ್ಜಿಸಲಾಯಿತು.
Published on

ಬೀರೂರು: ಹಳೇಪೇಟೆಯ ವೀರಭದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಸತ್ಯ ಗಣಪತಿಯನ್ನು ಶನಿವಾರ ರಾತ್ರಿ ಸಮೀಪದ ಬಾಕಿನಕೆರೆಯಲ್ಲಿ ವಿಸರ್ಜಿಸಲಾಯಿತು.
ಕಳೆದ 13 ದಿನಗಳಿಂದ ಗಣಪತಿಗೆ ವಿಶೇಷ ಪೂಜೆ, ಗಣಪತಿ ಹೋಮ, ಅಲಂಕಾರ, ಅನ್ನಸಂತರ್ಪಣೆ ನಡೆಯಿತು. ಶನಿವಾರ ವಿಶೇಷ ಪುಷ್ಪಾಲಂಕಾರದ ವಾಹನದಲ್ಲಿ ಗಣಪತಿ ಸ್ಥಾಪಿಸಿ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಡಿಜೆ ಶಬ್ದಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಮಹಾತ್ಮ ಗಾಂಧಿ ವೃತ್ತದಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಲಿಂಗದಹಳ್ಳಿ ರಸ್ತೆಯ ಮೂಲಕ ಬಾಕಿನಕೆರೆಗೆ ಕೊಂಡೊಯ್ದು ವಿಸರ್ಜಿಸಲಾಯಿತು.
ಮಾರ್ಗದ ಮಧು, ಅಶೋಕ, ಶಿವಮೂರ್ತಿ, ಮಹೇಂದ್ರ, ವಸಂತಕುಮಾರ್, ಮಂಜುನಾಥ, ಪ್ರದೀಪ, ನಾಗೇಂದ್ರ ಪ್ರಸಾದ್, ದಯಾನಂದ, ಹರೀಶ ಮುಂತಾದವರು ಇದ್ದರು. ಬೀರೂರು ಪೊಲೀಸರು ಭದ್ರತೆ ಒದಗಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net