ಶ್ರೀ ದುರ್ಗಾಂಬಾ ದೇವಿ ರಥೋತ್ಸವ

kdr rathostava
ಕಡೂರು ತಾಲೂಕಿನ ಚಿಕ್ಕಿಂಗಳ ಗ್ರಾಮದ ಶ್ರೀ ದುರ್ಗಾಂಬಾ ದೇವಿ ರಥೋತ್ಸ ನಡೆಸಲಾಯಿತು.
Published on

ಕಡೂರು: ಚಿಕ್ಕಿಂಗಳದ ಗ್ರಾಮದೇವತೆ ಶ್ರೀ ದುರ್ಗಾಂಬಾ ದೇವಿ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ಗುರುವಾರ ಜಾತ್ರಾಮಹೋತ್ಸ ಆರಂಭಗೊಂಡಿದ್ದು, ಮೂರು ದಿನಗಳಿಂದ ದೇವಿಗೆ ಕೆಂಡಾರ್ಚನೆ, ಬಾನಸೇವೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಶನಿವಾರ ಸಂಜೆ ದೇವಿಯ ಉತ್ಸವಮೂರ್ತಿಯನ್ನು ಮೆರವಣಿಗೆ ನಡೆಸಿ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಭಕ್ತರು ದೇವಿಯ ರಥ ಎಳೆದು ಸಂಭ್ರಮಿಸಿದರು.
ರಥೋತ್ಸವ ಅಂಗವಾಗಿ ಶ್ರೀ ದುರ್ಗಾಂಬಾ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೆರೆದಿದ್ದ ಭಕ್ತರು ರಥದ ಕಳಶಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಪ್ರತಿ ವರ್ಷದಂತೆ ರಥೋತ್ಸವ ಮುನ್ನ ದೇವಿಯ ಬಾವುಟ ಹರಾಜು ಪ್ರಕ್ರಿಯೆ ನಡೆಸಲಾಯಿತು. ಚಿಕ್ಕಿಂಗಳ ಗ್ರಾಮದ ಪಾಂಡಣ್ಣ ಸತತ ಮೂರನೇ ಬಾರಿಗೆ 1.30 ಲಕ್ಷ ರೂ.ಗೆ ಹರಾಜು ಕೂಗಿ ಬಾವುಟವನ್ನು ತಮ್ಮದಾಗಿಸಿಕೊಂಡರು. ದೇವಾಲಯ ಸಮಿತಿ ಗೌಡರಾದ ಲಕ್ಷ್ಮಣ್, ಸಿದ್ದಪ್ಪ, ನಾಗರಾಜ್, ಕುಮಾರಣ್ಣ, ಅಣ್ಣಯ್ಯ, ಮೂಡಲಗಿರಿಯಪ್ಪ, ಮಂಜಪ್ಪ, ಮಂಜು, ಚಂದ್ರು, ಸ್ವಾಮಿ, ನವೀನ್, ರಾಮಲಿಂಗಪ್ಪ, ಶ್ರೀಕಂಠಪ್ಪ ಸೇರಿದಂತೆ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net