

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ಬಹುಭಾಷಾ ತಾರೆ ಲೀಲಾವತಿ (85)ಅವರು ಶುಕ್ರವಾರ ವಯೋಸಹಜ ಖಾಯಿಲೆಯಿಂದ ವಿಧಿವಶರಾಗಿದ್ದು, ಅವರನ್ನು ಕಳೆದುಕೊಂಡ ನೋವಿನಲ್ಲಿ ಇಡೀ ಚಿತ್ರರಂಗ ಶೋಕದ ಕಗ್ಗತ್ತಲಿನಲ್ಲಿ ಮುಳುಗಿದೆ. ತಮ್ಮ ನೆಚ್ಚಿನ ಕಲಾವಿದೆಯ ಅಗಲಿಕೆಯಿಂದ ಕಂಗಲಾದ ಅಭಿಮಾನಿಗಳು, ಅಪಾರ ಸಂಖ್ಯೆಯಲ್ಲಿ ಇಂದು ಅವರ ಪಾರ್ಥಿವ ಶರೀರ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಸ್ಯಾಂಡಲ್ವುಡ್ನ ಅಚ್ಚುಮೆಚ್ಚಿನ ಲೀಲಮ್ಮ ಜತೆಗಿನ ವಿಶೇಷ ನೆನಪನ್ನು ಮೆಲುಕು ಹಾಕಿದ ಶೂಟಿಂಗ್ ಕೃಷ್ಣ, ಭಾವುಕರಾಗಿ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
"ಲೀಲಾವತಿ ಅಮ್ಮನ ಆಶ್ರಯದಲ್ಲಿ ಬೆಳೆದವನು ನಾನು. ವಿನೋದ್ ಸರ್ ಅವರನ್ನು ಹೇಗೆ ನೋಡಿಕೊಳ್ಳುತ್ತಿದ್ದರೋ ಅದೇ ರೀತಿ ನನ್ನನ್ನು ಕೂಡ ನೋಡ್ಕೊತ್ತಿದ್ರು. ಪಾರ್ವತಮ್ಮ, ಅಪ್ಪು ಅವರನ್ನೆಲ್ಲಾ ತಾಯಿ ನನಗೆ ಪರಿಚಯ ಮಾಡಿಸಿಕೊಟ್ರು, ಸುಮಾರು 30 ವರ್ಷಗಳಿಂದ ಲೀಲಮ್ಮ ಜತೆಗೆ ಇದ್ದೇನೆ. ಅವರೊಂದಿಗೆ ಕಳೆದ ಎಲ್ಲ ನೆನಪು ಕೂಡ ನೆನಪಿದೆ" ಎಂದು ಕೃಷ್ಣ ಹೇಳಿದರು.
ಇದನ್ನೂ ಓದಿ: ಯಡ್ರಾಮಿ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಬಿಸಿಯೂಟ ಬಂದ್!
"ಅಮ್ಮ ಮಾಂಸಹಾರಿ ಅಡುಗೆ ತುಂಬ ಚೆನ್ನಾಗಿ ಮಾಡುತ್ತಿದ್ದರು. ಅದಕ್ಕೆ ತರಕಾರಿಗಳನ್ನು ಹಾಕಿ ಘಮ ಘಮ ಎನ್ನುವ ರೀತಿ ಮಾಡಿ, ನಮಗೆ ಉಣಬಡಿಸುತ್ತಿದ್ದರು. ನಾನು ಯಾವತ್ತು ಮಾಂಸಹಾರಿ ಅಡುಗೆಗೆ ಮೂಲಂಗಿ, ಕ್ಯಾರೆಟ್ ಹಾಕಿರುವುದು ನೋಡಿಯೇ ಇಲ್ಲ. ಆದ್ರೆ, ಅಮ್ಮ ಮಾಡುತ್ತಿದ್ದರು. ಲೀಲಮ್ಮ ಒಂದು ಜಾಗ ತೆಗೆದುಕೊಂಡಿದ್ದರು, ಅದರಲ್ಲಿ ನನಗೆ"......ಕೃಷ್ಣ ಅವರ ಮಾತುಗಳನ್ನು ಕೇಳಲು ಕೆಳಗಿನ ವಿಡಿಯೋ ಕ್ಲಿಕ್ ಮಾಡಿ, ವೀಕ್ಷಿಸಿ.