ಜಾಗಿಂಗ್​ಗೆ ಹೋಗಿ ಮನೆಗೆ ಮರಳಿದ ಮಗನಿಗೆ ಕಾದಿತ್ತು ಶಾಕ್​​... ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವ ದಿನದಂದೇ ನಡೆಯಿತು ಘೋರ ದುರಂತ| Shock

Murder (6)
Published on

ನವದೆಹಲಿ; ಮದುವೆ ವಾರ್ಷಿಕೋತ್ಸವ ದಿನದಂದೆ ದಂಪತಿ ಸೇರಿದಂತೆ ಮಗಳು ಹತ್ಯೆಯಾಗಿರುವ ಘಟನೆ ಇಲ್ಲಿನ ದಕ್ಷಿಣ ಪ್ರಾಂತ್ಯದಲ್ಲಿ ಬುಧವಾರ(ಡಿ.04) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೇಶ್​ ಕುಮಾರ್​(51), ಇವರ ಪತ್ನಿ ಕೋಮಲಾ(46) ಮತ್ತು ಪುತ್ರಿ ಕವಿತಾ(23) ಮೃತರು. ರಾಜೇಶ್​ ಕುಮಾರ್ ಮಗ ಅರ್ಜುನ್​ ಬೆಳಗ್ಗೆ ಜಾಗಿಂಗ್​ಗೆ ಹೋಗಿ ಮನೆಗೆ ಬಂದಾಗ(Shock) ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೇಲ್ನೋಟಕ್ಕೆ ಕೊಲೆಯ ಶಂಕೆ ವ್ಯಕ್ತವಾಗಿದ್ದು, ಮನೆಯಲ್ಲಿ ಯಾವುದೇ ದರೋಡೆ, ಕಳ್ಳತನ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕಾರ,'' ಮನೆಯಲ್ಲಿ ಅವರ ಮಗ ಅರ್ಜುನ್​ ಜೋರಾಗಿ ಕಿರುಚುವ ಶಬ್ಧದಿಂದ ನಾವೆಲ್ಲಾ ಓಡಿ ಬಂದೆವು. ಅವನ್ನು ವಿಚಾರಿಸಿದಾಗ ನಾನು ಜಾಗಿಂಗ್​ ಹೋಗಿದ್ದೆ. ಮನೆಗೆ ಬಂದಾಗ ಅಪ್ಪ, ಅಮ್ಮ ಮತ್ತು ಸಹೋದರಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ನೋಡಿ ಚಿರಿದೆ ಎಂದು ಹೇಳಿದ್ದಾನೆ. ಅಲ್ಲಿನ ಪರಿಸ್ಥಿತಿ ನೋಡಿದರೆ ಯಾರೋ ಕೊಲೆ ಮಾಡಿ ಓಡಿ ಹೋಗಿದ್ದಾರೆ'' ಎಂದು ಹೇಳಿದ್ದಾರೆ.

ಈ ಕುರಿತು ಪೊಲೀಸರು ಸಾವಿನ ನಿಖರ ಮಾಹಿತಿ ತಿಳಿಯಲು ತನಿಖೆ ಕೈಗೊಂಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net