ಪಶ್ಚಿಮ ಬಂಗಾಳ: 1988ರಲ್ಲಿ ಭೂ ವಿವಾದ ಪ್ರಕರಣದಲ್ಲಿ ಸಹೋದರನ್ನು ಹತ್ಯೆ ಮಾಡಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬ 36 ವರ್ಷಗಳ ಬಳಿಕ ಜೈಲಿನಿಂದ(Jail) ಬಿಡುಗಡೆಯಾಗಿದ್ದಾನೆ. ಅಲ್ಲದೆ ಅವರಿಗಿಗ 104 ವರ್ಷ ಎಂದು ವರದಿಯಾಗಿದೆ.
ಇಲ್ಲಿನ ಮಾಲ್ಡಾ ಜಿಲ್ಲೆಯ ಮಾಣಿಕ್ಚಕ್ನ ನಿವಾಸಿ ಮೊಂಡಲ್(104) ಎಂಬುವ ಶತಾಯುಷಿ ಸುಪ್ರೀಂಕೋರ್ಟ್ ತೀರ್ಪಿನ ಆಧಾರದ ಮೇಲೆ ಬಿಡುಗಡೆಯಾಗಿದ್ದಾರೆ.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮೊಂಡಲ್, ಮುಂದಿನ ನನ್ನ ಪೂರ್ಣ ಸಮಯವನ್ನು ತೋಟಗಾರಿಕೆ ಮತ್ತು ಸಸಿಗಳನ್ನು ಪೋಷಿಸಲು ಮತ್ತು ಕುಟುಂಬದ ಜತೆ ಸಮಯ ಕಳೆಯಲು ಮೀಸಲಿಡುವೆ ಎಂದಿದ್ದಾರೆ. ನನಗೆ ನನ್ನ ವಯಸ್ಸಿನ ಸ್ಪಷ್ಟತೆ ಬಗ್ಗೆ ಗೊತ್ತಿಲ್ಲ. ಆದರೆ, 108 ವಯಸ್ಸು ನನಗಿದೆ ಎಂದು ಹೇಳಿದ್ದಾರೆ. ಆದರೆ, ವೃದ್ಧರಿಗೆ ಸಂಬಂಧಪಟ್ಟ ದಾಖಲೆಗಳ ಪ್ರಕಾರ ಅವರಿಗೆ 104 ವಯಸ್ಸು ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ‘ಮಹಾ’ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವಿರೋಧ ಆಯ್ಕೆ; ನಾಳೆ ಪ್ರಮಾಣವಚನ ಸ್ವೀಕಾರ | Maharashtra CM
ಮುಂದುವರೆದು ಮಾತನಾಡಿದ ಮೊಂಡಲ್, ನಾನು ಎಷ್ಟು ವರ್ಷ ಜೈಲಲ್ಲಿ ಕಳೆದಿದ್ದೇನೆ ಎಂಬುವುದು ನನಗೆ ನೆನಪಿಲ್ಲ. ನನ್ನನ್ನು ಇಲ್ಲಿಗೆ ಯಾವಾಗ ಕರೆ ತಂದಿದ್ದಾರೆ ಎಂದು ನನಗೆ ಗೊತ್ತಿಲ್ಲ. ಈಗ ಎಲ್ಲ ಮುಗಿದಿದೆ. ನಾನು ಹೊರ ಬಂದಿದ್ದೇನೆ. ನಮ್ಮ ಕುಟುಂಬಸ್ಥರ ಜತೆ ಕಾಲ ಕಳೆಯುವೆ ಎಂದು ಹೇಳಿದ್ದಾರೆ.
ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ಪ್ರತಿಯೊಬ್ಬರು ತಮಗೆ ನೀಡಿರುವ ಶಿಕ್ಷೆಯ ಅವಧಿಯಲ್ಲಿ ಯಾವುದೇ ಅನುಚಿತ ವರ್ತನೆ ಮಾಡದಿದ್ದಲ್ಲಿ ಮತ್ತು ಯಾವುದೇ ಕೃತ್ಯಗಳಲ್ಲಿ ಭಾಗವಹಿಸದಿದ್ದಲ್ಲಿ ಇಂತಹವರಿಗೆ ಬಿಡುಗಡೆಯಾಗಲು ಕೋರ್ಟ್ ಸಮ್ಮತಿಸುತ್ತದೆ. ಹೀಗಾಗಿ ಇದೇ ಆಧಾರದಲ್ಲಿ ಸಹೋದರನ್ನು ಹತ್ಯೆ ಮಾಡಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮೊಂಡಲ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಮೊಂಡಲ್ ಅವರ ಮಗ ತಿಳಿಸಿದ್ದಾನೆ.
ರಾಜ್ಯದ ಜೈಲುಗಳಲ್ಲಿ ಬಂಧಿಯಾಗಿರುವ ಶತಾಯುಷಿಗಳ ಪೈಕಿ ಇದೊಂದು ವಿಶೇಷ ಪ್ರಕರಣ ಎಂದು ಜೈಲು ಸುಧಾರಣಾ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).
ವ್ಯಕ್ತಿಯೋರ್ವನನ್ನು ಕಾರಿನ ಬ್ಯಾನೆಟ್ ಮೇಲೆ 3 ಕಿ.ಮೀ ಹೊತ್ತೊಯ್ದ ಚಾಲಕ.. ವಿಡಿಯೋ ವೈರಲ್