ವ್ಯಕ್ತಿಯೋರ್ವನನ್ನು ಕಾರಿನ ಬ್ಯಾನೆಟ್​ ಮೇಲೆ 3 ಕಿ.ಮೀ ಹೊತ್ತೊಯ್ದ ಚಾಲಕ.. ವಿಡಿಯೋ ವೈರಲ್​

Video viral (1)
Published on

ಪುಣೆ: ಜಿಲ್ಲೆಯ ಪಿಂಪ್ರಿ- ಚಿಂಚ್​ವಾಡ್​ ಟೌನ್​ಶಿಪ್​ನಲ್ಲಿ ವ್ಯಕ್ತಿಯೋರ್ವನನ್ನು ಕಾರಿನ ಬ್ಯಾನೆಟ್​ ಮೇಲೆ ಹಾಕಿ 3 ಕಿ.ಮೀ ದೂರ ಚಾಲಕ ಹೊತ್ತೊಯ್ದ ಘಟನೆ ಇತ್ತೀಚಿಗೆ ನಡೆದಿದೆ. ಇದೀಗ ಈ ವಿಡಿಯೋ(Video viral) ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ.

ಈ ಘಟನೆಯನ್ನು ಪೊಲೀಸರು ಗುರುತಿಸಿದ್ದು, ಕಾರು ಚಾಲಕ ಕಮಲೇಶ್​ ಪಾಟೀಲ್​ (23), ಇತನ ಇಬ್ಬರು ಸಹಚಾರರಾದ ಹೇಮಂತ್​ ಮಲ್ಹಾಸ್ಕರ್(26)​ ಮತ್ತು ಪ್ರಥಮೇಶ್​ ದಾರಾಡೆ(22) ಅವರನ್ನು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ..

ಸಂತ್ರಸ್ತೆ ಝಚೇರಿಯಾ ಮ್ಯಾಥ್ಯೂ, ಬೈಕ್​ನಲ್ಲಿ ಹೋಗುತ್ತಿದ್ದಾಗ ಇಂದಿನಿಂದ ಬಂದ ಆರೋಪಿಗಳ ಅಡಿ ಕಾರ್ ಇವರ ಬೈಕ್​ಗೆ ಡಿಕ್ಕಿ ಹೊಡೆದಿದ್ದಾರೆ. ಕಾರಿನಲ್ಲಿದ್ದವರನ್ನು ಮ್ಯಾಥ್ಯೂ ಪ್ರಶ್ನಿಸಿದ್ದಾನೆ. ಇದರಿಂದ ಕುಪಿತಗೊಂಡ ಕಾರು ಚಾಲಕ ಕಮಲೇಶ್​ ಪಾಟೀಲ್, ಮ್ಯಾಥ್ಯೂ ಅವರನ್ನು ಥಳಿಸಿ ಕಾರಿನ ಬ್ಯಾನೆಟ್​ ಮೇಲೆ ಹಾಕಿ ಬರೊಬ್ಬರಿ ಮೂರು ಕಿ.ಮೀ ಹೊತ್ತೊಯ್ದಿದ್ದಾನೆ. ಕಾರಿನಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net