"ಅಗ್ನಿಸಾಕ್ಷಿ" ನಟಿ ಶೋಭಾ ಶೆಟ್ಟಿ ಎಂಗೇಜ್ಮೆಂಟ್; ವಿಡಿಯೋ ವೈರಲ್​​

shobhashetty
Published on

ಬೆಂಗಳೂರು: ಕನ್ನಡ ಅಗ್ನಿಸಾಕ್ಷಿ ಧಾರಾವಾಹಿಯ ತನು ಪಾತ್ರದ ಮೂಲಕ ಖ್ಯಾತಿಗಳಿಸಿದ್ದ ಶೋಭಾ ಶೆಟ್ಟಿ. ನಟಿ ಬಹುಕಾಲದ ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಎಂಗೇಜ್​ಮೆಂಟ್​​ ವಿಡಿಯೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟು ಇಂದು ಪರಭಾಷೆಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ನಟನೆಯ ಜೊತೆಗೆ ನಿರೂಪಣೆಯನ್ನು ಕೂಡ ಮಾಡಿದ್ದಾರೆ. ಕಾಫಿ ವಿತ್ ಶೋಭಾ ಶೆಟ್ಟಿ ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ. ರಿಯಾಲಿಟಿ ಶೋ, ಹಾಗೆ ಕಳೆದ ವರ್ಷ ತೆಲುಗು ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಎಂಟ್ರಿ ನೀಡಿದ್ದಳು. ಆ ಕಾರ್ಯಕ್ರಮದಲ್ಲಿ ಎಲ್ಲರಿಗೂ ತನ್ನ ಗೆಳೆಯನನ್ನು ಪರಿಚಯಿಸಿದಳು. ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಪ್ರಿಯಕರ ಯಶವಂತ್ ರೆಡ್ಡಿಯವರೊಂದಿಗೆ ತಾಂಬೂಲವನ್ನು ಬದಲಾಯಿಸಿಕೊಂಡಿದ್ದರು.

ಇಬ್ಬರೂ ಕೆಲವು ಕಿರುಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಬಿಗ್ ಬಾಸ್ ಮುಗಿದ ತಕ್ಷಣ ಮದುವೆ ತಯಾರಿಗೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾಳೆ. ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನೋಡುತ್ತಲೇ ಇದ್ದೇವೆ. ಅಲ್ಲದೇ ಜನವರಿಯಲ್ಲಿ ಇವರಿಬ್ಬರ ಫೋಟೋ ನೋಡಿ ಎಂಗೇಜ್ ಆಗಿದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ನಟಿ ಈಗ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಆದರೆ ಇತ್ತೀಚೆಗಷ್ಟೇ ಅವರ ಇನ್ನೂ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಎಂದು ನೆಟ್ಟಿಗರು ವಿಚಾರಿಸಿದಾಗ, ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಶೋಭಾ ಶೆಟ್ಟಿ ಯೂಟ್ಯೂಬ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕಾರಣದಿಂದಾಗಿ ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಯಾವುದೇ ವಿಷಯ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದು ಗೊತ್ತೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net