ರಕ್ಷಣೆ ಕೋರಿ ಠಾಣೆಗೆ ಭೇಟಿ ನೀಡಿದ್ರೆ ಠಾಣಾಧಿಕಾರಿಯೇ ಆಕೇನ ಬಳಸಿಕೊಂಡ!

crime
Published on

ಶಾಜಹಾನ್ಪುರ (ಉತ್ತರ ಪ್ರದೇಶ): ಕಾರಣಾಂತರಗಳಿಂದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಮಹಿಳೆಗೆ ತಿಂಗಳಾದ್ಯಂತ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಠಾಣಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು  ಈ ಹಿಂದೆ ಕಲಾನ್ ಪೊಲೀಸ್ ಠಾಣೆಯಲ್ಲಿ ನೇಮಕಗೊಂಡಿದ್ದ ಬಾಂದಾ ಠಾಣಾಧಿಕಾರಿ ಸುನಿಲ್ ಶರ್ಮಾ ತಪ್ಪಿತಸ್ಥ ಎಂದು ತಿಳಿದುಬಂದಿದ್ದು, ಅಮಾನತುಗೊಳಿಸಲಾಗಿದೆ.

ಕಾರಣಾಂತರಗಳಿಂದ ಒಂದು ತಿಂಗಳ ಹಿಂದೆ ಕಲಾನ್ ಪೊಲೀಸ್ ಠಾಣಾಧಿಕಾರಿಯನ್ನು ಮಹಿಳೆ ಭೇಟಿ ಮಾಡಿದ್ದಳು. ಆದರೆ, ಠಾಣಾಧಿಕಾರಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಶಹಜಹಾನ್ಪುರ ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ಹೇಳಿದ್ದಾರೆ. ಆರೋಪಗಳನ್ನು ಗಮನಿಸಿದ ಪೊಲೀಸರು ಈ ಬಗ್ಗೆ ತನಿಖೆ ನಡೆಸುವಂತೆ ಎಎಸ್ಪಿ (ಗ್ರಾಮೀಣ) ಅಪರ್ಣ ಗೌತಂ ಅವರಿಗೆ ತಿಳಿಸಿದ್ದಾರೆ. ಏತನ್ಮಧ್ಯೆ, ಸಿ ಪಿ ಸಿಂಗ್ ಅವರನ್ನು ಬಾಂದಾ ಪೊಲೀಸ್ ಠಾಣೆಯ ಹೊಸ ಠಾಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net