More

    ಕರೊನಾ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಬಾಧಿಸಲಿದೆ; ಅಳಿನಂಚಿನಲ್ಲಿರುವ ಪ್ರಭೇದಗಳು ಅಪಾಯದಲ್ಲಿ

    ಕೊವಿಡ್​-19 ಕೇವಲ ಮಾನವರಿಗಷ್ಟೇ ಅಲ್ಲ, ಕೆಲವು ಪ್ರಬೇಧದ ಪ್ರಾಣಿಗಳಿಗೂ ಅಪಾಯವನ್ನುಂಟುಮಾಡಬಹುದು ಎಂದು ಹೊಸ ಅಧ್ಯಯನವೊಂದು ಹೇಳಿದೆ.

    ಈಗಾಗಲೇ ವಿನಾಶದ ಅಂಚಿನಲ್ಲಿವೆ ಎಂದು ಹೇಳಲಾಗುತ್ತಿರುವ ಪಶ್ಚಿಮ ತಗ್ಗು ಪ್ರದೇಶಗಳ ಗೋರಿಲ್ಲಾ, ಸುಮಾತ್ರನ್ ತಳಿಯ ಒರಾಂಗುಟೂನ್ ಮತ್ತು ಬಿಳಿ ಕೆನ್ನೆಯ ಗಿಬ್ಬನ್​​ಗಳಿಗೆ ಕರೊನಾ ವೈರಸ್​ ತಗುಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಯುಎಸ್​ನ ಕ್ಯಾಲಿಫೋರ್ನಿಯಾ ಯೂನಿರ್ಸಿಟಿಯ ವಿಜ್ಞಾನಿಗಳು ಈ ವಿಶ್ಲೇಷಣೆಯನ್ನು ಪ್ರಸ್ತುತಪಡಿಸಿದ್ದಾರೆ.

    ಕರೊನಾ ವೈರಸ್​ ದೇಹವನ್ನು ಪ್ರವೇಶಿಸಲು ಕಾರಣವಾಗುವ ಎಸಿಇ2 ( ಆಂಜಿಯೋಟೆನ್ಸಿನ್ ಪರಿವರ್ತಿಸುವ ಕಿಣ್ವ 2) ಗ್ರಾಹಕ ಪ್ರೋಟಿನ್​ ಸುಮಾರು 410 ಪ್ರಬೇಧಗಳಲ್ಲಿ ಕಂಡು ಬಂದಿದೆ ಎಂದು ವೈದ್ಯಕೀಯ ಜರ್ನಲ್​ವೊಂದು ಪ್ರಕಟಿಸಿದೆ. ಈ ಎಸಿಇ2 ಎಂಬುದು ಮೂಗು, ಬಾಯಿ, ಶ್ವಾಸಕೋಶಗಳ ಹೊರವಲಯ ಸೇರಿ ವಿವಿಧ ಬಗೆಯ ಜೀವಕೋಶ, ಅಂಗಾಂಶಗಳಲ್ಲಿ ಕಂಡುಬಂದಿದೆ.
    ಮನುಷ್ಯನ ದೇಹದಲ್ಲಿರುವ 25 ಅಮಿನೋ ಆ್ಯಸಿಡ್​​ಗಳಿಗೆ ಹೋಲಿಕೆಯಾಗುವ ಅಷ್ಟೇ ಅಮಿನೋ ಆ್ಯಸಿಡ್​ಗಳನ್ನು ಹೊಂದಿರುವ ಎಲ್ಲ ಪ್ರಾಣಿ ಪ್ರಬೇಧಗಳಿಗೆ ಕರೊನಾ ವೈರಸ್​ ತಗುಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

    ಸಮುದ್ರ ಸಸ್ತನಿಗಳಾದ ಬೂದು ತಿಮಿಂಗಲಗಳು, ಬಾಟಲ್​ನೋಸ್​ ಡಾಲ್ಫಿನ್​ಗಳು, ಚೈನೀಸ್​ ಹ್ಯಾಮ್​ಸ್ಟರ್​​ಗಳಿಗೂ ಕರೊನಾ ಸೊಂಕು ತಗುಲುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಅಧ್ಯಯನ ವರದಿ ತಿಳಿಸಿದೆ.

    ಹಾಗೇ ಸಾಕು ಪ್ರಾಣಿಗಳಾದ ಬೆಕ್ಕು, ಹಸುಕರುಗಳು, ಕುರಿಗಳಿಗೆ ಕರೊನಾದಿಂದ ಮಧ್ಯಮ ಮಟ್ಟದ ಅಪಾಯವಿದೆ. ನಾಯಿಗಳು, ಕುದುರೆ, ಹಂದಿಗಳಿಗೆ ಈ ವೈರಸ್ ಅಷ್ಟೊಂದು ಬಾಧಿಸುವುದಿಲ್ಲ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಪ್ರೀತಿಸಿದವ ಬಾಳು ನೀಡುವ ಬದಲು ಸಾವಿನ ಮನೆಗೆ ದೂಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts