More

    ಪ್ರೀತಿಸಿದವ ಬಾಳು ನೀಡುವ ಬದಲು ಸಾವಿನ ಮನೆಗೆ ದೂಡಿದ್ದೇಕೆ?

    ಸೂರತ್: ಹದಿನೈದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದಾತ ಪ್ರೀತಿಯೊಂದಿಗೆ ಬದುಕನ್ನು ಕಟ್ಟಿಕೊಳ್ಳುವ ಬದಲು ಕಟ್ಟಿಕೊಂಡ ಹೆಂಡತಿಯನ್ನೇ ಸಾವಿನ ಮನೆಗೆ ದೂಡಿದ ಘಟನೆ ಮಂಗಳವಾರ ನಡೆದಿದೆ.
    ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೆ ಆತನ ಹೆಂಡತಿ ತನ್ನ ಮೂರು ವರ್ಷದ ಮಗಳೊಂದಿಗೆ ಟೆರೇಸ್​​ನಿಂದ ಜಿಗಿದು ಸಾವನ್ನಪ್ಪಿದ್ದಾಳೆ.
    ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಕೋಮಲ್ ಸೋಮನಿ ಸಾವಿಗೀಡಾದವಳು.
    ವರದಕ್ಷಿಣೆಗಾಗಿ ಕೋಮಲ್ ಗೆ ಗಂಡನಮನೆಯವರಿಂದ ಕಿರುಕುಳ ನೀಡಲಾಗಿದೆ ಎಂದು ಸಂತ್ರಸ್ತೆಯ ತಂದೆ ಪ್ರಕಾಶ್ ಅಗರ್ವಾಲ್ ಆರೋಪಿಸಿದ್ದಾರೆ.
    ಮಹಿಳೆಯನ್ನು ಆತ್ಮಹತ್ಯೆಗೆ ದೂಡಿದ ಆರೋಪದಡಿ ಆಕೆಯ ಗಂಡನ ಮನೆಯ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
    ಸಂತ್ರಸ್ತೆಯ ತಂದೆ ಸಲ್ಲಿಸಿದ ಎಫ್‌ಐಆರ್‌ನಲ್ಲಿ ಐವರ ಹೆಸರನ್ನು ಹೆಸರಿಸಲಾಗಿದೆ.

    ಇದನ್ನೂ ಓದಿ:  “ಹೆತ್ತ ಮಕ್ಕಳನ್ನು ಹಸಿವಿನ ಬೆಂಕಿಗೆ ತಳ್ಳಿದೆ” ಇದು ಮಹಿಳೆಯೋರ್ವಳ ಪಶ್ಚಾತ್ತಾಪ

    ಮೃತ ಕೋಮಲ್ ಹಾಗೂ ಆಶಿಶ್ 2015 ರಲ್ಲಿ ಪ್ರೇಮ ವಿವಾಹವಾಗಿದ್ದಷ್ಟೇ ಖುಷಿ ಕ್ಷಣ. ನಂತರ ಆಕೆ ಅನುಭವಿಸಿದ್ದು ನರಕಯಾತನೆಯೇ. ಆಶೀಶ್ ಕುಟುಂಬದವರು ಕೋಮಲ್ ಗೆ ಹಲವಾರು ಬಾರಿ ಹಿಂಸಿಸಿದ್ದಾರೆ ಮತ್ತು ಆಕೆ ಹಲವು ಬಾರಿ ಮನೆಯಿಂದ ಹೊರಬಂದಿದ್ದಳೆಂದು ಆಕೆಯ ತಂದೆ ಪ್ರಕಾಶ್ ಅಗರ್​ವಾಲ್ ಹೇಳಿದ್ದಾರೆ.
    ಈ ಹಿಂದೆ ಕೋಮಲ್ ತನಗೆ ಪ್ರತ್ಯೇಕ ವಸತಿ ನೀಡುವಂತೆ ತನ್ನ ಮನೆಯವರನ್ನು ಕೇಳಿಕೊಂಡಿದ್ದಳು. ಆದರೆ ಅವರು ಆರಂಭದಲ್ಲಿ ಅವಳ ಬೇಡಿಕೆಯನ್ನು ತಿರಸ್ಕರಿಸಿದರೂ ನಂತರ ಒಪ್ಪಿ ಅವರದೇ ಒಡೆತನದ ಮತ್ತೊಂದು ಫ್ಲ್ಯಾಟ್​​ಗೆ ಹೋಗಲು ಆಕೆಗೆ ಹೇಳಿದರು. ಆದರೆ ಕೋಮಲ್ ಗೆ ಆ ಸ್ಥಳ ಸ್ಥಳ ಇಷ್ಟವಾಡದ ಕಾರಣ ಅಲ್ಲಿಗೆ ಹೋಗಲು ನಿರಾಕರಿಸಿದ್ದಳು. ಈ ವಿಷಯವು ವಿವಾದಕ್ಕೆ ಸಿಲುಕಿತು. ಕೋಮಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಸಹೋದರನಿಗೆ ಸಂದೇಶ ಕಳುಹಿಸಿದ್ದಳು.

    ಇದನ್ನೂ ಓದಿ: ಹೊಸ ಕಾರು ತಂದು ಅದರಲ್ಲೇ ವೈದ್ಯೆಯನ್ನು ಕೊಲೆ ಗೈದ ಆರೋಪಿ ವೈದ್ಯನಿಗೀಗ ಪಾಪಪ್ರಜ್ಞೆಯಂತೆ

    ಮಂಗಳವಾರ, ಸೂರತ್‌ನ ಮಾಗೋಬ್ ಪ್ರದೇಶದಲ್ಲಿ ಕೋಮಲ್ ಐದು ಅಂತಸ್ತಿನ ಕಟ್ಟಡದ ಟೆರೇಸ್‌ನಿಂದ ಮಗಳು ಮಿಸ್ತಿಯೊಂದಿಗೆ ಜಿಗಿದಿದ್ದಾಳೆ.
    “ಪ್ರಕರಣಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸುತ್ತಿದ್ದು. ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಪುಣೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಐವರು ಆರೋಪಿಗಳ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಮಕ್ಕಳಿಗೆ ಇಲಿ ಪಾಷಾಣ ನೀಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಕೋರ್ಟ್ ನೀಡಿದ ಪರಿಹಾರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts