More

    “ಹೆತ್ತ ಮಕ್ಕಳನ್ನು ಹಸಿವಿನ ಬೆಂಕಿಗೆ ತಳ್ಳಿದೆ” ಇದು ಮಹಿಳೆಯೋರ್ವಳ ಪಶ್ಚಾತ್ತಾಪ

    ಆಗ್ರಾ: ಉದ್ಯೋಗ ಮಾಡದೆ, ಕುಟುಂಬವನ್ನು ಸಾಕಲಾಗದೆ ತನ್ನ 5 ವರ್ಷದ ಪುಟ್ಟ ಮಗಳನ್ನು ಕಳೆದುಕೊಂಡ ಮಹಿಳೆಯೋರ್ವಳು ತನ್ನ ಅಸಹಾಯಕತೆಗೆ, ತನ್ನ ನಿರ್ಲಕ್ಷ್ಯಕ್ಕೆ ಪಶ್ಚಾತ್ತಾಪಪಡುತ್ತಿದ್ದಾಳೆ.
    ಆಗ್ರಾದ ಬರೋಲಿ ಅಹಿರ್ ಬ್ಲಾಕ್‌ನ ಮಹಿಳೆ ಆಕೆಯ ಹೆಸರು ಶೀಲಾ. ಹಸಿವಿನಿಂದ ಮಗಳನ್ನು ಕಳೆದುಕೊಂಡ ನಂತರ ತನ್ನನ್ನು ತಾನೇ ಶಪಿಸಿಕೊಂಡಿದ್ದಾಳೆ.
    ಆಗ್ರಾದ ನಾಗ್ಲಾ ವಿಧಿಚಂದ್ ಗ್ರಾಮದಲ್ಲಿ ವಾಸಿಸುವ ಕುಟುಂಬವು ಕಳೆದ ಒಂದು ತಿಂಗಳಿನಿಂದ ಜೀವನ ನಿರ್ವಹಣೆ ಸಾಧ್ಯವಾಗದೆ ಹೆಣಗಾಡುತ್ತಿತ್ತು. ಕಳೆದ ಒಂದು ವಾರದಿಂದ ಶೀಲಾ ದೇವಿ ಕುಟುಂಬಕ್ಕೆ ತಿನ್ನಲು ಆಹಾರವಿರಲಿಲ್ಲ.

    ಇದನ್ನೂ ಓದಿ:  ಮಕ್ಕಳಿಗೆ ಇಲಿ ಪಾಷಾಣ ನೀಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಕೋರ್ಟ್ ನೀಡಿದ ಪರಿಹಾರವೇನು?

    ಶೀಲಾಳ 5 ವರ್ಷದ ಮಗಳು ಸೋನಿಯಾ ಸಾವಿಗೀಡಾದಳು. ಸೋನಿಯಾ ಸಾವಿಗೆ ಪಶ್ಚಾತ್ತಾಪ ಪಡುತ್ತಿರುವ ಸಂತ್ರಸ್ತ ಮಹಿಳೆ, “ನಾನು ಅವಳಿಗೆ ಯಾವುದೇ ಪೌಷ್ಠಿಕ ಆಹಾರವನ್ನು ನೀಡಲು ಸಾಧ್ಯವಾಗಲಿಲ್ಲ. ಅವಳು ದುರ್ಬಲವಾಗಿದ್ದಳು, ಆಕೆಗೆ ಮೂರು ದಿನಗಳಿಂದ ಜ್ವರವಿತ್ತು. ಈಗ ನಾನು ಅವಳನ್ನು ಕಳೆದುಕೊಂಡಿದ್ದೇನೆ” ಎಂದು ಮರುಗುತ್ತಿದ್ದಾಳೆ.
    ಜಿಲ್ಲಾಧಿಕಾರಿಗಳು ಆಕೆಯ ಕುಟುಂಬಕ್ಕೆ ಸಹಾಯವನ್ನು ನೀಡಿಲ್ಲ. ಶನಿವಾರ, ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಆ ಕುಟುಂಬದ ನೆರೆಹೊರೆಯವರು ತಿಳಿಸಿದ್ದಾರೆ.
    ಇಲಾಖೆಯು ಪ್ರಕರಣದ ಕುರಿತು ಮಾಹಿತಿ ಪಡೆದಿದ್ದು, ಮಗುವಿನ ಸಾವಿನ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಕುಟುಂಬದವರು ಮಗುವಿನ ಶವ ಸಂಸ್ಕಾರ ಮಾಡಿದ್ದಾರೆ . ಶವ ಸಂಸ್ಕಾರ ಮಾಡಿರದಿದ್ದರೆ ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ಕಾರಣ ಕಂಡುಹಿಡಿಯಬಹುದಿತ್ತು” ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

    ಇದನ್ನೂ ಓದಿ:  ರಾಜ್ಯಕ್ಕೆಲ್ಲ ಹೋಮಿಯೋಪಥಿ ಔಷಧ ಹಂಚಿದ ಗುಜರಾತ್​; ಆಯುಷ್​ ಚಿಕಿತ್ಸೆ ಪಡೆದವರಲ್ಲಿ ಸೋಂಕು ದೂರ…!

    ಹಸಿವಿನಿಂದಾಗಿಯೇ ನಾಲ್ಕು ವರ್ಷಗಳ ಹಿಂದೆ ಆಕೆಯ ಮಗ ಸಾವಿಗೀಡಾದ್ದ. ಆಕೆ ಪತಿ ಕ್ಷಯರೋಗ ಪೀಡಿತನಾಗಿದ್ದು, ಹಾಸಿಗೆ ಹಿಡಿದಿದ್ದಾನೆ. ತನ್ನ ಗಂಡನಿಗೆ ಔಷಧಿ, ಚಿಕಿತ್ಸೆ ಒದಗಿಸಲು ಸಾಧ್ಯವಾಗದ ಕಾರಣ ಶೀಲಾ, ಹಸಿವು ಮತ್ತು ಆರೋಗ್ಯ ರಕ್ಷಣೆಯ ಕೊರತೆಯಿಂದಾಗಿ ಆತನನ್ನು ಕಳೆದುಕೊಳ್ಳುವ ಭಯವಿದೆ ಎಂದಿದ್ದಾಳೆ. 

    ಹೊಸ ಕಾರು ತಂದು ಅದರಲ್ಲೇ ವೈದ್ಯೆಯನ್ನು ಕೊಲೆ ಗೈದ ಆರೋಪಿ ವೈದ್ಯನಿಗೀಗ ಪಾಪಪ್ರಜ್ಞೆಯಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts