ರಾಜ್ಯಕ್ಕೆಲ್ಲ ಹೋಮಿಯೋಪಥಿ ಔಷಧ ಹಂಚಿದ ಗುಜರಾತ್​; ಆಯುಷ್​ ಚಿಕಿತ್ಸೆ ಪಡೆದವರಲ್ಲಿ ಸೋಂಕು ದೂರ...!

Homeopathy
Published on

ನವದೆಹಲಿ: ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ಹಾಗೂ ರೋಗ ನಿರೋಧಕವಾಗಿ ರಾಜ್ಯದ ಅರ್ಧದಷ್ಟು ಜನಕ್ಕೆ ಹೋಮಿಯೋಪಥಿ ಔಷಧ ನೀಡಲಾಗಿದೆ. ಈ ರೀತಿ ಔಷಧ ಪಡೆದವರಲ್ಲಿ ಶೇ.99.6 ಜನರು ಕರೊನಾ ಸೋಂಕಿಗೆ ಒಳಗಾಗಿಲ್ಲ...!

ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲಾದ ಪ್ರಾತ್ಯಕ್ಷಿಕೆಯಲ್ಲಿ ಗುಜರಾತ್​ ಸರ್ಕಾರ ಈ ಮಾಹಿತಿ ನೀಡಿದೆ. ರಾಜ್ಯದ 6.6 ಕೋಟಿ ಜನಸಂಖ್ಯೆ ಪೈಕಿ ಅರ್ಧದಷ್ಟು ಅಂದರೆ 3.48 ಕೋಟಿ ಮಂದಿಗೆ ಹೋಮಿಯೋಪಥಿ ಔಷಧ ನೀಡಲಾಗಿದೆ. ಜತೆಗೆ, ಆಯುಷ್​ (ಆಯುರ್ವೇದ, ಯುನಾನಿ, ಸಿದ್ಧ, ಯೋಗ, ನ್ಯಾಚುರೋಪಥಿ ಸೇರಿ ಭಾರತೀಯ ವೈದ್ಯ ಪದ್ಧತಿ) ಔಷಧವನ್ನು ರೋಗ ನಿರೋಧಕವಾಗಿ ಪಡೆದವರಲ್ಲಿ ಶೇ.99.69 ಮಂದಿ ಕರೊನಾ ನೆಗೆಟಿವ್​​ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕ್ವಾರಂಟೈನ್​ನಲ್ಲಿದ್ದ 33,268 ಜನರಿಗೆ ಆಯುಷ್​ ಪದ್ಧತಿ ಔಷಧೋಪಚಾರ ನೀಡಲಾಗುತ್ತಿತ್ತು. ಇವರಲ್ಲಿ ಅರ್ಧದಷ್ಟು ಮಂದಿಗೆ ಹೋಮಿಯೋಪಥಿ ಔಷಧವಾದ ಅರ್ಸೆನಿಕಮ್​ ಅಲ್ಬಮ್​-30 ನೀಡಲಾಗಿತ್ತು. ಇವರೆಲ್ಲರೂ ಕರೊನಾ ಸೋಂಕಿನ ವರದಿ ನೆಗೆಟಿವ್​ ಬಂದಿತ್ತು ಎಂದು ಗುಜರಾತ್​ನ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯಂತಿ ರವಿ ಹೇಳಿದ್ದಾರೆ.

ಇನ್ನುಳಿದ ಶೇ.0.03 ಜನರಲ್ಲೂ ಕರೊನಾ ಸೋಂಕಿನ ಅಲ್ಪ ಲಕ್ಷಣಗಳಷ್ಟೇ ಕಂಡುಬಂದಿದ್ದವು ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಕಳೆದ ಮಾರ್ಚ್​ನಿಂದ 3.48 ಕೋಟಿ ಡೋಸ್​ನಷ್ಟು ಹೋಮಿಯೋಪಥಿ ಔಷಧ ವಿತರಣೆ ಮಾಡಲಾಗಿದೆ. ಇದು ಎಂದೂವರೆ ತಿಂಗಳನಿಂದ ಎರಡು ತಿಂಗಳವರೆಗೆ ಪರಿಣಾಮಕಾರಿಯಾಗಿರುತ್ತದೆ ಎಮದು ಹೇಳಲಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ವರದಿ ತಿಳಿಸಿದೆ.

ಇಷ್ಟೇ ಮುಖ್ಯವಾದ ಇನ್ನೊಂದು ಸಂಗತಿ ಎಂದರೆ ಇದು ಕರೊನಾ ವಿರುದ್ಧವೂ ಪರಿಣಾಮಕಾರಿಯೇ ಎಂಬುದರ ಬಗ್ಗೆ ನಡೆಸಲಾಗುತ್ತಿರುವ ಕ್ಲಿನಿಕಲ್​ ಟ್ರಯಲ್​ನಲ್ಲಿ ಸ್ಪಷ್ಟ ಫಲಿತಾಂಶ ಸಿಗುತ್ತಿಲ್ಲ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net