More

    ರಷ್ಯಾ ಸರ್ಕಾರದಿಂದ ತಯಾರಾಯ್ತು ಮತ್ತೊಂದು ಕರೊನಾ ಲಸಿಕೆ; ಮಾನವ ಬಳಕೆಗೆ ಸುರಕ್ಷಿತ

    ನವದೆಹಲಿ: ರಷ್ಯಾದ ಮೊದಲ ಕರೊನಾ ನಿಗ್ರಹ ಲಸಿಕೆ ಸ್ಪುಟ್ನಿಕ್​-ವಿ ಈಗಾಗಲೇ ನೋಂದಣಿಯಾಗಿ ರಷ್ಯನ್​ರ ಬಳಕೆಗೆ ಮುಕ್ತವಾಗಿದೆ. ಜತೆಗೆ, ಸರ್ಕಾರಿ ಸ್ವಾಮ್ಯದ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ವಿಶ್ವ ಮಾನ್ಯತೆಗೆ ಪರಿಗಣಿಸುವಂತಾಗಲು ಮೂರನೇ ಹಂತದಲ್ಲಿ 30 ಸಾವಿರಕ್ಕೂ ಅಧಿಕ ಜನರ ಮೇಲೆ ಪ್ರಯೋಗಿಸಲಾಗುತ್ತಿದೆ.

    ಇನ್ನೊಂದೆಡೆ, ರಷ್ಯಾದ ಇನ್ನೊಂದು ಲಸಿಕೆ ಕೂಡ ಮಾನವ ಬಳಕೆಗೆ ಸುರಕ್ಷಿತ ಎಂದು ಸಾಬೀತಾಗಿದೆ. ಎರಡನೇ ಲಸಿಕೆ ಒಂದನೆಯದಕ್ಕಿಂತ ತುಂಬ ಭಿನ್ನವಾಗಿದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ; ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?

    ಈ ಲಸಿಕೆಯನ್ನು ಎಪಿವ್ಯಾಕ್​ಕರೊನಾ (EpiVacCorona) ಎಂದು ಹೆಸರಿಸಲಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ ಎಂದು ರಷ್ಯಾದ ಮಾನವ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

    ಎಪಿವ್ಯಾಕ್​ಕರೊನಾದ ಕ್ಲಿನಿಕಲ್​ ಟ್ರಯಲ್​ಗಳು ಸೆಪ್ಟೆಂಬರ್​ ವೇಳೆಗೆ ಪೂರ್ಣಗೊಳ್ಳಲಿವೆ. ಇದನ್ನು ಕೂಡ ಸರ್ಕಾರಿ ಸ್ವಾಮ್ಯದ ಸ್ಟೇಟ್​ ರಿಸರ್ಚ್​ ಸೆಂಟರ್​ ಆಫ್​ ವೈರಾಲಜಿ ಆ್ಯಂಡ್​ ಬಯೋಟೆಕ್ನಾಲಜಿ (ವೆಕ್ಟರ್​) ಸಂಸ್ಥೆ ಅಭಿವೃದ್ಧಿಪಡಿಸಿದೆ.

    ಇದನ್ನೂ ಓದಿ; ದಾವೂದ್​ ತನ್ನ ನೆಲದಲ್ಲಿಯೇ ಇದ್ದಾನೆಂದು ಒಪ್ಪಿಕೊಂಡ ಪಾಕ್​; ಆರ್ಥಿಕ ದಿಗ್ಬಂಧನದಿಂದ ಪಾರಾಗಲು ತಂತ್ರ…? 

    14 ಹಾಗೂ 21 ದಿನಗಳ ಅಂತರದ್ಲಲಿ ಎರಡು ಬಾರಿ ಲಸಿಕೆ ನೀಡಿದಾಗ ದೇಹದಲ್ಲಿ ಪ್ರತಿರೋಧ ಶಕ್ತಿ ಬೆಳವಣಿಗೆಯಾಗುತ್ತಿರುವುದು ಗೊತ್ತಾಗಿದೆ. ಆದರೆ, ಈವರೆಗೆ ಒಬ್ಬ ವ್ಯಕ್ತಿಗೆ ಮಾತ್ರ ಎರಡು ಬಾರಿ ಈ ಲಸಿಕೆ ನೀಡಲಾಗಿದೆಯಂತೆ.

    ಲಸಿಕೆ ನೀಡಲಾದ ಎಲ್ಲ 57 ಜನರು ಆರೋಗ್ಯದಿಂದ ಇದ್ದಾರೆ. ಇದರಲ್ಲಿ 14 ಜನರಿಗಷ್ಟೇ ಲಸಿಕೆ ನೀಡಲಾಗಿದ್ದರೆ, ಇನ್ನುಳಿದವರಿಗೆ ಡಮ್ಮಿ ಚುಚ್ಚುಮದ್ದು ನೀಡಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.

    ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts