More

    ರಷ್ಯಾ: ಮಾಸ್ಕೋ ಕನ್ಸರ್ಟ್ ಹಾಲ್ ದಾಳಿಯ ತಪ್ಪೊಪ್ಪಿಕೊಂಡ ಮೂವರು ಉಗ್ರರು!

    ಮಾಸ್ಕೋ: ಮಾರುವೇಷದಲ್ಲಿ ಬಂದು ಮಾಸ್ಕೋ ಸಬ್ ಅರ್ಬನ್ ಕನ್ಸರ್ಟ್ ಹಾಲ್ ನಲ್ಲಿ 137 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣರಾದ ದಾಳಿಯ ಆರೋಪ ಹೊತ್ತಿರುವ ನಾಲ್ವರು ಶಂಕಿತರ ಪೈಕಿ ಮೂವರು ರಷ್ಯಾ ನ್ಯಾಯಾಲಯದಲ್ಲಿ ತಪ್ಪಿತಸ್ಥರು ಎಂದು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಇದನ್ನೂ ಓದಿ: IPL 2024: ಟಾಸ್ ಗೆದ್ದ ಆರ್‌ಸಿಬಿ: ಫೀಲ್ಡಿಂಗ್ ಆಯ್ಕೆ! 

    ಮಾಸ್ಕೋದ ಬಾಸ್ಮಾನಿ ಜಿಲ್ಲಾ ನ್ಯಾಯಾಲಯ ಮಿರ್ಜೋಯೆವ್, ಸೈದಾಕ್ರಮಿ ರಾಚಬಲಿಜೋಡ (30), ಮುಖಮ್ಮದ್ಸೋಬಿರ್ -ಫೈಜೋವ್ (19) ಮತ್ತು ಶಂಸಿದಿನ್ -ಫೆರಿದುನಿ (25) ಅವರು ದಾಳಿಯ ರೂವಾರಿಗಳು ಎನ್ನಲಾಗಿದೆ.

    ರಷ್ಯಾ: ಮಾಸ್ಕೋ ಕನ್ಸರ್ಟ್ ಹಾಲ್ ದಾಳಿಯ ತಪ್ಪೊಪ್ಪಿಕೊಂಡ ಮೂವರು ಉಗ್ರರು!

    ತಜಕಿಸ್ತಾನದ ಪ್ರಜೆಗಳಾಗಿರುವ ಮಿರ್ಜೋಯೆವ್, ರಾಚಬಲಿಜೋಡಾ ಮತ್ತು ಶಂಸಿದಿನ್ -ಫೆರಿದುನಿ ಅವರು ಆರೋಪ ಹೊರಿಸಿದ ನಂತರ ತಪ್ಪಿತಸ್ಥರೆಂದು ಒಪ್ಪಿಕೊಂಡಿದ್ದಾರೆ. ನಾಲ್ಕನೆಯವನು -ಫೈಜೋವ್‍ನನ್ನು ಆಸ್ಪತ್ರೆಯಿಂದ ನೇರವಾಗಿ ನ್ಯಾಯಾಲಯಕ್ಕೆ ಕರೆತಂದು ವಿಚಾರಣೆ ನಡೆಸಿದ್ದಾರೆ.

    ರಷ್ಯಾ: ಮಾಸ್ಕೋ ಕನ್ಸರ್ಟ್ ಹಾಲ್ ದಾಳಿಯ ತಪ್ಪೊಪ್ಪಿಕೊಂಡ ಮೂವರು ಉಗ್ರರು!

    ದಾಳಿಕೋರರ ವಿಚಾರಣೆಯ ವೇಳೆ ಅವರಿಗೆ ಚಿತ್ರಹಿಂಸೆ ನೀಡಲಾಯಿತು ಎಂದು ರಷ್ಯಾದ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಮಧ್ಯೆ 80 ವೋಲ್ಟ್‌ ಹೊರಹಾಕುವ ಸಾಮರ್ಥ್ಯವಿರುವ TA-57 ಮಿಲಿಟರಿ ಫೀಲ್ಡ್ ಟೆಲಿಫೋನ್‌ನಿಂದ ತಂತಿಗಳಿಂದ ಅವರಿಗೆ ಹಿಂಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
    ಆರೋಪಿಗಳ ವಿಚಾರಣೆ ವೇಳೆ ಶಂಕಿತರೊಬ್ಬರ ಕಿವಿಯನ್ನು ಕತ್ತರಿಸಲಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಕನಿಷ್ಠ 137 ಜನರನ್ನು ಕೊಂದ ಉಪನಗರ ಕ್ರೋಕಸ್ ಸಿಟಿ ಹಾಲ್ ಕನ್ಸರ್ಟ್ ಸ್ಥಳದ ಮೇಲೆ ಶುಕ್ರವಾರ ನಡೆದ ದಾಳಿಯ ನಂತರ ರಷ್ಯಾ ರಾಷ್ಟ್ರೀಯ ಶೋಕಾಚರಣೆಯ ದಿನವನ್ನು ಆಚರಿಸುತ್ತಿರುವಾಗ ಈ ವಿಚಾರಣೆ ನಡೆದಿದೆ.

    ರಷ್ಯಾದ ಮಾಸ್ಕೋದ ಕ್ರಾಕಸ್ ಸಿಟಿ ಹಾಲ್​ನಲ್ಲಿ ನಡೆದ ಮುಂಬೈ ಮಾದರಿ ಉಗ್ರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 150 ಕ್ಕೂ ಜನರು ಸಾವನ್ನಪ್ಪಿದ್ದರು. ದಾಳಿಯಲ್ಲಿ 120 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ಈವರೆಗೆ ತಿಳಿದುಬಂದಿದೆ. ಘಟನೆ ಸಂಬಂಧ ಈವರೆಗೆ 11 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ರಷ್ಯಾದ ಸ್ಥಳೀಯ ಮಾಧ್ಯಮಗಳು ಉಲ್ಲೇಖಿಸಿದ್ದವು. ಬಂಧಿತರಲ್ಲಿ ನಾಲ್ವರು ದಾಳಿಯಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂದು ತನಿಖಾ ಸಮಿತಿ ತಿಳಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts