More

    IPL 2024: ಟಾಸ್ ಗೆದ್ದ ಆರ್‌ಸಿಬಿ: ಫೀಲ್ಡಿಂಗ್ ಆಯ್ಕೆ!

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನನಲ್ಲಿ ಅಬ್ಬರಿಸಲು ಸಿದ್ಧವಾಗಿದೆ. ಸಿಎಸ್​ಕೆ ವಿರುದ್ಧ ಸೋಲಿನ ಬಳಿಕ ಇದೀಗ ಆರ್​ಸಿಬಿ ತಂಡ ತವರಿನಲ್ಲಿ ಗೆಲುವಿನ ಅಭಿಯಾನ ಆರಂಭಿಸಲು ಸಜ್ಜಾಗಿದೆ. ಪಂಜಾಬ್​ ತಂಡ ಮೊದಲ ಗೆಲುವಿನ ಲಯವನ್ನು ಮುಂದುವರೆಸಲು ಸಜ್ಜಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ.

    ಇದನ್ನೂ ಓದಿ: ಲೋಕಸಮರ: ಕಾಂಗ್ರೆಸ್​ನಿಂದ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ! 5 ಅಭ್ಯರ್ಥಿಗಳ ಹೆಸರು ಪ್ರಕಟ

    ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇತ್ತ ಪಂಜಾಬ್ ತಂಡದಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಅಭಿಮಾನಿಗಳಿಂದ ಭರ್ತಿಯಾಗಿದೆ. ಎಲ್ಲೆಡೆ ಆರ್​ಸಿಬಿ, ಕೊಹ್ಲಿ ಘೋಷಣೆಗಳು ಮೊಳಗುತ್ತಿದೆ.

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡವು ಇದುವರೆಗೆ 84 ಪಂದ್ಯಗಳನ್ನಾಡಿದೆ. 39 ಮ್ಯಾಚ್‌ಗಳಲ್ಲಿ ಆರ್‌ಸಿಬಿ ಗೆದ್ದಿದೆ. ಆರ್​ಸಿಬಿ ತಂಡದ ತವರು ಮೈದಾನದಲ್ಲಿ ಎದುರಾಳಿ ತಂಡ ಕೂಡ ಶೇ.50 ರಷ್ಟು ಗೆಲುವಿನ ಸರಾಸರಿ ಹೊಂದಿದೆ.

    ಆರ್​ಸಿಬಿ ಟೀಂ 11: ಫಾಫ್ ಡುಪ್ಲಸಿಸ್(ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಕರಣ್ ಶರ್ಮಾ, ಅಲ್ಜಾರಿ ಜೊಸೆಫಿ, ಮಯಾಂಕ್ ಡಗಾರ್, ಮೊಹಮ್ಮದ್ ಸಿರಾಜ್

    ಪಂಜಾಬ್ ಪ್ಲೇಯಿಂಗ್ 11 :
    ಶಿಖರ್ ಧವನ್(ನಾಯಕ), ಜಾನಿ ಬೈರ್‌ಸ್ಟೋ, ಪ್ರಭಸಿಮ್ರನ್ ಸಿಂಗ್, ಸ್ಯಾಮ್ ಕುರನ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಹಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಾಗಿಸೋ ರಬಾಡ, ರಾಹುಲ್ ಚಹಾರ್.

    ವಯನಾಡ್: ರಾಹುಲ್​ ಗಾಂಧಿ ವಿರುದ್ಧ ಕೇರಳ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್‌ ಸ್ಪರ್ಧೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts