More

    ಬಾಬರ್​​ ಆಝಮ್​ರನ್ನು ವಿರಾಟ್​ ಜತೆ ಹೋಲಿಸುವುದು ಸರಿಯಲ್ಲ… ‘ರನ್​ ಮಷಿನ್​’ ಬಗ್ಗೆ ಹಫೀಜ್​ ಗುಣಗಾನ

    ಟೀಂ ಇಂಡಿಯಾದ ‘ರನ್​ ಮಷಿನ್’​, ಕ್ರಿಕೆಟ್​ ಲೋಕದ ಮಾಂತ್ರಿಕ, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್​ ಆಝಮ್​ ಜತೆಗೆ ಹೋಲಿಕೆ ಮಾಡುವುದು ಸರಿಯಲ್ಲ, ಅದಕ್ಕೆ ಇನ್ನು ಸಮಯವಿದೆ ಎಂದು ಪಾಕ್​ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್​ ಹಾಗೂ ಕ್ರಿಕೆಟ್​ ಬೋರ್ಡ್​ನ ನಿರ್ದೇಶಕ ಮೊಹಮ್ಮದ್​ ಹಫೀಜ್​ ಅಭಿಪ್ರಾಯಿಸಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​ ಪಕ್ಷ ಮೊದಲಿನಂತಿಲ್ಲ ಸಮುದಾಯವನ್ನು ನಿರ್ಲಕ್ಷಿಸುತ್ತಿದೆ: ಹಿರಿಯ ಮುಸ್ಲಿಂ ನಾಯಕ ಆಕ್ರೋಶ

    ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಹಫೀಜ್​, ತಮಗೆ ಕೇಳಲಾದ ಒಂದು ಪ್ರಶ್ನೆಗೆ ಉತ್ತರಿಸುವಾಗ, ವಿರಾಟ್​ ಕೊಹ್ಲಿ ಮತ್ತು ಬಾಬರ್​ ಆಝಮ್​ ನಡುವೆ ಹೋಲಿಕೆ ಬೇಡ, ಅದು ಇನ್ನು ದೂರದ ಮಾತು ಎಂದು ಹೇಳಿದರು.

    “ಟೀಂ ಇಂಡಿಯಾಗೆ ವಿರಾಟ್​ ಅವರ ಕೊಡುಗೆ ಅಪಾರ. ಪ್ರಸ್ತುತ ದಿನಗಳಲ್ಲಿ ಕೊಹ್ಲಿ ಮತ್ತು ಬಾಬರ್​ ಆಝಮ್​ ಇಬ್ಬರೂ ಸಹ ಉತ್ತಮ ಬ್ಯಾಟ್ಸ್​ಮನ್​ಗಳು ಎಂಬ ಮಾತು ಕ್ರಿಕೆಟ್ ಲೋಕದಲ್ಲಿ ಕೇಳಿಬಂದಿದೆ. ಅದು ನಿಜವೇ. ತಮ್ಮ ತಂಡಕ್ಕೆ ರನ್​ ಗಳಿಸುವಲ್ಲಿ ಇಬ್ಬರು ಯಶಸ್ವಿ ಪ್ರದರ್ಶನ ನೀಡುತ್ತಾರೆ. ಹಾಗಂತ ವಿರಾಟ್​ ಜತೆಗೆ ಬಾಬರ್​ ಅವರನ್ನು ಹೋಲಿಕೆ ಮಾಡುವುದು ಅಷ್ಟು ಸರಿಯಲ್ಲ” ಎಂದರು.

    ಇದನ್ನೂ ಓದಿ: ಹೆಲಿಕಾಪ್ಟರ್ ಹತ್ತುವ ವೇಳೆ ಕಾಲು ಜಾರಿ ಬಿದ್ದ ಸಿಎಂ ಮಮತಾ ಬ್ಯಾನರ್ಜಿ

    “ಸತತವಾಗಿ ತಮ್ಮ ತಂಡಗಳಿಗೆ ರನ್​ ತಂದುಕೊಡುವಲ್ಲಿ ಈ ಇಬ್ಬರು ಉತ್ತಮ ಆಟಗಾರರೇ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ಗಳಿಸಿರುವ ಹೆಸರು, ಸಾಧನೆ ಅಪಾರ. ಇದೆಲ್ಲವನ್ನೂ ಬಾಬರ್​ ಇನ್ನು ಸಾಧಿಸಬೇಕಿದೆ. ಸದ್ಯಕ್ಕೆ ಅದು ದೂರದ ಮಾತು. ಬಾಬರ್ ಆಝಮ್​​ಗೆ ಈ ಸಾಧನೆ ಮಾಡಲು ಇನ್ನೂ ಹೆಚ್ಚಿನ ಕಾಲಾವಕಾಶವಿದೆ. ಹಾಗಾಗಿ ಹೋಲಿಕೆ ಮಾಡುವ ಅಗತ್ಯವಿಲ್ಲ” ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

    ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಆರತಿ ಸಿಂಗ್! ಕೃಷ್ಣ-ಕಾಶ್ಮೀರ ದಂಪತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

    ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts