More

    ಮಕ್ಕಳಿಗೆ ಇಲಿ ಪಾಷಾಣ ನೀಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಕೋರ್ಟ್ ನೀಡಿದ ಪರಿಹಾರವೇನು?

    ಅಹಮದಾಬಾದ್: ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ನಂತರ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಗೆ ಗುಜರಾತ್ ಹೈಕೋರ್ಟ್ ಆಕೆಯ ವಿರುದ್ಧದ ಎಫ್‌ಐಆರ್ ಅನ್ನು ರದ್ದುಪಡಿಸಿದ್ದಲ್ಲದೆ ಭಾರಿ ಪರಿಹಾರ ನೀಡಿದೆ.
    ಮಹಿಳೆ ಹತಾಶೆಯಿಂದ ಬಳಲಿದ್ದು ಮತ್ತು ಆಕೆಯ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯಿಂದಾಗಿ ಆತ್ಮಹತ್ಯೆಗೆ ಮತ್ತು ತನ್ನ ಮಕ್ಕಳಿಗೆ ವಿಷ ನೀಡಲು ಮುಂದಾಗಿದ್ದಾಳೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
    ಮಹಿಳೆಗೆ ಜೀವನೋಪಾಯ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.  ವಜ್ರ ವ್ಯಾಪಾರದ ದಲ್ಲಾಳಿಯ ಪತ್ನಿ ಲತಾ ಲಾಥಿಯಾ ಜೂನ್‌ನಲ್ಲಿ, ಲಥಿಯಾ ತನ್ನ 13 ವರ್ಷದ ಮಗಳು ಮತ್ತು 7 ವರ್ಷದ ಮಗನಿಗೆ ಹಾಲಿನಲ್ಲಿ ಇಲಿ ಪಾಷಾಣ ಬೆರೆಸಿ ಅವರಿಗೆ ಕುಡಿಯಲು ನೀಡಿ ನಂತರ ಆತ್ಮಹತ್ಯೆಗೆ ಯತ್ನಿಸಿದಳು. ಆದರೆ ಅದೃಷ್ಟವಶಾತ್ ಮೂವರೂ ಅಪಾಯದಿಂದ ಪಾರಾದರು.

    ಇದನ್ನೂ ಓದಿ:  ಗಂಡ ಭೇಟಿಯಾಗಲು ಬರಲಿಲ್ಲವೆಂದು ಒಂಟಿತನದಿಂದ ನೊಂದು ನೇಣಿಗೆ ಶರಣಾದ ಪತ್ನಿ


    ನಂತರ, ಲತಾ ತನ್ನ ಮಕ್ಕಳನ್ನು ಕೊಲ್ಲಲು ಯತ್ನಿಸಿದ್ದಕ್ಕಾಗಿ ಪತಿ ಜಿತೇಶ್ ಸೂರತ್‌ನ ಅಮ್ರೋಲಿ ಪೊಲೀಸ್ ಠಾಣೆಯಲ್ಲಿ ಪತ್ನಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
    ಕೌಟುಂಬಿಕ ಕಲಹದಿಂದಾಗಿ ಜಿತೇಶ್ ಮತ್ತು ಲಾಥಿಯಾ ಕಳೆದ 18 ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ, ನಂತರ ಇಬ್ಬರೂ ಹೇಗೋ ಒಂದು ತೀರ್ಮಾನಕ್ಕೆ ಬಂದರು. ಪತಿಯೊಂದಿಗೆ ಹೊಂದಾಣಿಕೆಯಿಂದಿರುವುದಾಗಿ ಹೇಳಿ ತನ್ನ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಲಾಥಿಯಾ ಗುಜರಾತ್ ಹೈಕೋರ್ಟ್‌ಗೆ ಮೊರೆಹೋದರು.
    ಲಥಿಯಾ ಹತಾಶೆಯಿಂದ ತೀವ್ರ ಹೆಜ್ಜೆ ಇಟ್ಟಿದ್ದಾರೆ ಎಂದು ನ್ಯಾಯಾಲಯಕ್ಕೆ ಅಭಿಪ್ರಾಯಪಟ್ಟಿತು. ಕುಟುಂಬ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಂಡಿದೆಯಾದ್ದರಿಂದ ಮಹಿಳೆಯನ್ನು ಅಪರಾಧಿ ಎಂದು ಹೇಳುವ ಅಗತ್ಯವಿಲ್ಲ ಎಂದು ತೀರ್ಮಾನಿಸಿ ನ್ಯಾಯಾಲಯ ಬುಧವಾರ ಎಫ್‌ಐಆರ್ ರದ್ದುಪಡಿಸಿದೆ.
    ಹತಾಶೆ ಮತ್ತು ಕೌಟುಂಬಿಕ ವಿವಾದದಿಂದಾಗಿ ಮಹಿಳೆ ತೀವ್ರ ಹೆಜ್ಜೆ ಇಟ್ಟಿದ್ದು, ಆಕೆಗೆ ಯಾವುದೇ ಆದಾಯದ ಮೂಲವಿಲ್ಲ ಮತ್ತು ಪತಿ ಅವಳಿಗೆ ಯಾವುದೇ ಜೀವನ ನಿರ್ವಹಣೆ ನೀಡುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ತಾಯಿ- ಮಗಳ ಲವ್ವರ್ ಆ ಕೊಲೆ ಮಾಡಿದ್ದೇಕೆ? ರೀಲು ಬಿಟ್ಟ ತಾಯಿ.. ಕಥೆಯಲ್ಲಿದೆ ರೋಚಕ ಟ್ವಿಸ್ಟ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts