More

    ಕಾಳಿಕಾಂಬ ದೇವಿ ರಥೋತ್ಸವ ವೈಭವ

    ಹಿರಿಯೂರು: ನಗರದ ಇತಿಹಾಸ ಪ್ರಸಿದ್ಧ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿರುವ ಕಾಳಿಕಾಂಬ ದೇವಿ ರಥೋತ್ಸವ ಶನಿವಾರ ಅದ್ದೂರಿಯಾಗಿ ನೆರವೇರಿತು.

    ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ರಥೋತ್ಸವ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು. ದೇವಿಗೆ ವಿಶೇಷ ಅಲಂಕಾರ ಮಾಡಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮಹಾ ಮಂಗಳಾರತಿ ಮಾಡಲಾಯಿತು.

    ರಥವವನ್ನು ವಿಶೇಷವಾಗಿ ಸಿಂಗರಿಸಿ, ಕಾಳಿಕಾಂಬ ದೇವಿ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಟಾಪಿಸಿ ನಗರದ ರಾಜ ಬೀದಿಯಲ್ಲಿ ರಥವನ್ನು ಭಕ್ತರು ಎಳೆದರು.

    ರಥಕ್ಕೆ ಹಣ್ಣು-ಧವನ ಎಸೆದು ತಮ್ಮ ಹರಕೆ ಸಮರ್ಪಿಸಿ, ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ತೀರ್ಥ-ಪ್ರಸಾದ, ಮಜ್ಜಿಗೆ, ಪಾನಕ ವಿತರಿಸಲಾಯಿತು. ಮಹಿಳೆಯರಿಂದ ಆರತಿ ಸೇವೆ ಮಾಡಲಾಯಿತು.

    ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾರಾಯಣಾಚಾರ್, ಗೋಪಾಲಾಚಾರ್, ಎಲ್.ನಾರಾಯಣಾಚಾರ್, ಗೋವಿಂದಾಚಾರ್, ವಿಶ್ವನಾಥ್, ಮಂಜುನಾಥ್ ಆಚಾರ್ಯ, ರಮೇಶ್, ನಾಗರಾಜ್,ರವೀಂದ್ರನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts