

ನವದೆಹಲಿ: ಆಗಸ್ಟ್ 5ರಂದು ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಅದರ ನಿಮಿತ್ತ ಆಗಸ್ಟ್ 4ರಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ತಮ್ಮ ನಿವಾಸದಲ್ಲಿ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಮಲನಾಥ್ ಅವರ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ಇದೀಗ ಅಂದಿನ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವಿಚಾರವನ್ನಿಟ್ಟುಕೊಂಡು ಕಮಲನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಾಬ್ರಿ ಮಸೀದಿ ಧ್ವಂಸದ ತೀರ್ಪು ಸೆ.30 ರೊಳಗೆ ನೀಡಿ; ಸುಪ್ರೀಂ ಸೂಚನೆ; ಏನಾಗುತ್ತೆ ಅಡ್ವಾಣಿ, ಜೋಶಿ, ಕಲ್ಯಾಣ್ ಸಿಂಗ್ ಭವಿಷ್ಯ?
ಹನುಮಾನ್ ಚಾಲೀಸಾ ಪಠಣ ಭಕ್ತರಿಗೆ ಅನುಗ್ರಹಿಸುತ್ತದೆ ಹೊರತು ದೆವ್ವಗಳಿಗೆ ಅಲ್ಲ ಎಂದು ಕಿಡಿಕಾರಿದ್ದಾರೆ. ಬಳಿಕ ಸ್ಪಷ್ಟನೆ ನೀಡಿದ್ದ ಕಮಲನಾಥ್ ಅವರು, ನಾನು ಹನುಮಾನ್ ಚಾಲೀಸಾ ಪಠಣ ಮಾಡಿದ್ದಕ್ಕೂ, ಭೂಮಿಪೂಜೆಗೂ ಯಾವುದೇ ಸಂಬಂಧವಿಲ್ಲ. ನಾನು ಈ ಕಾರ್ಯಕ್ರಮ ಮಾಡಿದ್ದು ಮಧ್ಯಪ್ರದೇಶದ ಅಭಿವೃದ್ಧಿ, ಒಳಿತಿಗಾಗಿ ಎಂದು ಹೇಳಿದ್ದರು.
ಇದೀಗ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರತಿಕ್ರಿಯೆ ನೀಡಿ, ಕಮಲನಾಥ್ ಅವರು ರಾಮಮಂದಿರ ಭೂಮಿ ಪೂಜೆಯ ಮುನ್ನಾದಿನ ಹನುಮಾನ ಚಾಲೀಸಾ ಪಠಿಸಿದ್ದಾರೆ. ಆದರೆ ಹನುಮಾನ ಚಾಲೀಸಾ ಪಠಣ ಭಕ್ತರಿಗೆ ಒಳಿತು ಮಾಡುತ್ತದೆ ಹೊರತು ದೆವ್ವಗಳಿಗೆ ಅಲ್ಲ ಎಂದಿದ್ದಾರೆ. (ಏಜೆನ್ಸೀಸ್)