ಕಾಶೀ ಪೀಠದಲ್ಲಿ ಶಿವರಾತ್ರಿ ಪ್ರಯುಕ್ತ ವಿವಿಧ ಕಾರ್ಯಕ್ರಮ

sduhskdhaskdh
Published on

ವಾರಣಾಸಿ: ಕಾಶಿಯಲ್ಲಿ ಸಾಕ್ಷಾತ್ ಶಿವನು ವಿಶ್ವನಾಥನಾಗಿ ನೆಲೆಸಿರುವುದರಿಂದ ಶಿವರಾತ್ರಿ ಆಚರಣೆಗೆ ಹೆಚ್ಚಿನ ಆದ್ಯತೆ ದೊರೆತಿದ್ದು, ಅದರಲ್ಲೂ ನೂತನ ವಿಶ್ವನಾಥ ಧಾಮ ಲೋಕಾರ್ಪಣೆ ನಂತರ ಇದು ಮೊದಲ ಬಾರಿಗೆ ಬಂದಿರುವ ಶಿವರಾತ್ರಿ ಆಗಿದೆ. ಹಾಗಾಗಿ ಕಾಶಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.

ಶಿವರಾತ್ರಿ ಅಂಗವಾಗಿ ಕಾಶೀ ಪೀಠದಲ್ಲಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಶುಕ್ರವಾರ ಮಾಹಿತಿ ನೀಡಿದ ಶ್ರೀಗಳು, ಶಿವರಾತ್ರಿ ಜಾತ್ರಾ ಸಂದರ್ಭದಲ್ಲಿ ಕಾಶೀ ಪೀಠದಲ್ಲಿ ಪ್ರತಿ ವರ್ಷ ವಿಧ್ವತ್ ಸಭೆ ಆಯೋಜಿಸಲಾಗುತ್ತದೆ. ಈ ಬಾರಿ ಫೆ.28ರಂದು ನಡೆಯುವ ವಿದ್ವತ್ ಸಭೆಯಲ್ಲಿ ನೂರಾರು ಪಂಡಿತರು ಪಾಲೊಳ್ಳದ್ದಾರೆ. ವಿದ್ಯಾರ್ಥಿಗಳಿಗಾಗಿ ಶಾಸ್ತ್ರಾರ್ಥ ಚರ್ಚೆ ನಡೆಯಲಿದೆ. ಶಾಸ್ತ್ರಾರ್ಥದಲ್ಲಿ ಗೆದ್ದವರಿಗೆ ಬಹುಮಾನ ಹಾಗೂ ಪಂಡಿತರಿಗೆ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ಎಂದರು.

ಇಷ್ಟಲಿಂಗ ಮಹಾಪೂಜೆ: ಮಾ.1ರಂದು ಜಗದ್ಗುರು ವಿಶ್ವಾರಾಧ್ಯರಿಗೆ ಮಹಾರುದ್ರಾಭಿಷೇಕ, ರಥೋತ್ಸವ ಹಾಗೂ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ಇದೇ ವೇಳೆ ಕಾಶೀ ಜ್ಞಾನಸಿಂಹಾಸನ ಪೀಠದ ನೂತನ ಉತ್ತರಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಪೀಠ ಪ್ರವೇಶ ಮಾಡಲಿದ್ದು, ಅವರ ನೇತೃತ್ವದಲ್ಲಿಯೇ ಎಲ್ಲ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net