ಮಹಿಳೆಯರು ಆರೋಗ್ಯದ ಕಾಳಜಿ ವಹಿಸಲಿ

30 skp1
ಶಿಕಾರಿಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಹೆಣ್ಣು ಮಕ್ಕಳ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ವಿನಯ್, ಪಿ.ಆರ್.ಪವಿತ್ರಾ, ಡಾ. ಪ್ರಕಾಶ್, ಚಂದ್ರಶೇಖರ್ ಮಠದ್, ಸುಮನಾ ಕೀರ್ತಿ ಇತರರಿದ್ದರು.
Published on

ಶಿಕಾರಿಪುರ: ಪ್ರತಿಯೊಬ್ಬ ಮಹಿಳೆಯರು ವೈಯಕ್ತಿಕ ಆರೋಗ್ಯದ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ವೈದ್ಯ ವಿನಯ್ ಹೇಳಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಪೂಜಿ ಎಜುಕೇಷನಲ್ ಸೊಸೈಟಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಶ್ರಯದಲ್ಲಿ ಆಯೋಜಿಸಿದ್ದ ಹೆಣ್ಣು ಮಕ್ಕಳ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳು ಆರೋಗ್ಯದ ಬಗ್ಗೆ ನಿರ್ಲಕ್ಷೃ ತೋರಬಾರದು. ಮಹಿಳೆ ಆರೋಗ್ಯ ಉತ್ತಮವಾಗಿದ್ದರೆ ಇಡೀ ಕುಟುಂಬದ ಆರೋಗ್ಯ ಚೆನ್ನಾಗಿರುತ್ತದೆ ಎಂದು ತಿಳಿಸಿದರು.

ಬಾಪೂಜಿ ಎಜುಕೇಷನಲ್ ಸೊಸೈಟಿ ಆಡಳಿತಾಧಿಕಾರಿ ಪಿ.ಆರ್.ಪವಿತ್ರಾ ಮಾತನಾಡಿ, ಹೆಣ್ಣುಮಕ್ಕಳ ಸಂಕಲ್ಪ ಶಕ್ತಿ ಅದ್ಭುತ. ಅವರು ಅತ್ಯಂತ ಪರಿಶ್ರಮಿಗಳು ಮತ್ತು ಕುಟುಂಬದ ನಿರ್ವಹಣೆಯಲ್ಲಿ ಮಹಿಳೆ ಹೆಚ್ಚಿನ ಜವಾಬ್ದಾರಿ ವಹಿಸುತ್ತಾಳೆ. ಒತ್ತಡದ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ ಎಂದರು.

ಡಾ. ಪ್ರಕಾಶ್ ಮಾತನಾಡಿ, ಒತ್ತಡದ ಬದುಕಿನಲ್ಲಿ ಕಾಯಿಲೆಗಳು ಸಾಮಾನ್ಯ. ಅನಿಯಮಿತ ಆಹಾರ ಸೇವನೆ, ವಿಶ್ರಾಂತಿಗಳಿಂದ ಮನಸ್ಸು ಮತ್ತು ದೇಹಕ್ಕೆ ತೊಂದರೆ. ಹೆಣ್ಣು ಮಕ್ಕಳು ದಿನನಿತ್ಯದ ಕೆಲಸದ ಜತೆಯಲ್ಲಿ ಆರೋಗ್ಯದ ಬಗ್ಗೆಯೂ ಕಾಳಜಿ ಹೊಂದಬೇಕು ಎಂದು ತಿಳಿಸಿದರು.

ಪತ್ರಕರ್ತ ಚಂದ್ರಶೇಖರ್ ಮಠದ್ ಮಾತನಾಡಿ, ಕುಟುಂಬದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸಿದಂತೆ ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಜವಾಬ್ದಾರಿ ಮಹತ್ತರವಾಗಿದೆ ಎಂದರು. ನರ್ಸಿಂಗ್ ಮೇಲ್ವಿಚಾರಕಿ ಸುಮನಾ, ಕೀರ್ತಿ, ಕವನ್, ಮದನ್ ಹಾಗೂ ಬಾಪೂಜಿ ಪ್ಯಾರಾಮೆಡಿಕಲ್ ಕಾಲೇಜಿನ ತರಬೇತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net