ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸಿ

30 TTH 01
ತೀರ್ಥಹಳ್ಳಿ ಶೀಬಿನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಸಾಲಿನ ಆರಂಭೋತ್ಸವವನ್ನು ಪಪಂ ಉಪಾಧ್ಯಕ್ಷೆ ಗೀತಾ ರಮೇಶ್ ಉದ್ಘಾಟಿಸಿದರು. ಮಹಾಬಲೇಶ್ವರ ಹೆಗ್ಡೆ, ವೈ.ಗಣೇಶ್, ರತ್ನಾಕರ ಶೆಟ್ಟಿ ಇತರರಿದ್ದರು.
Published on

ತೀರ್ಥಹಳ್ಳಿ: ಉತ್ತಮ ಫಲಿತಾಂಶದಿಂದ ತೀರ್ಥಹಳ್ಳಿ ತಾಲೂಕು ಇಡೀ ರಾಜ್ಯದ ಗಮನ ಸೆಳೆದಿದ್ದು, ಇದಕ್ಕೆ ಕಾರಣರಾದ ಶಿಕ್ಷಕರ ಶ್ರಮ ಶ್ಲಾಘನೀಯ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ರಮೇಶ್ ಹೇಳಿದರು.

ಶೀಬಿನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಸಾಲಿನ ಆರಂಭೋತ್ಸವ ಮತ್ತು ಸಮವಸ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಸಮಾಜದ ಆಸ್ತಿಯಾಗಿ ರೂಪಿಸಲು ಗುಣಾತ್ಮಕ ಶಿಕ್ಷಣ ಅಗತ್ಯ. ಹಿರಿಯ ವಿದ್ಯಾರ್ಥಿಗಳು, ಪಾಲಕರು ಮತ್ತು ಸಮಾಜದ ನೆರವಿನಿಂದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಈ ಶಾಲೆ ಉತ್ತಮ ಉದಾಹರಣೆ ಎಂದು ತಿಳಿಸಿದರು.

ಬಿಇಒ ವೈ.ಗಣೇಶ್ ಮಾತನಾಡಿ, ಶಿಕ್ಷಕರ ಕೊರತೆ ಹಾಗೂ ಇತರ ಕಾರಣಗಳ ನಡುವೆಯೂ ಎಚ್ಚರಿಕೆಯಿಂದ ವರ್ಷದ ಶೈಕ್ಷಣಿಕ ವಾತಾವರಣ ರೂಪಿಸುವ ಹೊಣೆಗಾರಿಕೆ ಇದೆ ಎಂದರು. ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗ್ಡೆ ಮಾತನಾಡಿ, ಅತಿ ಕಡಿಮೆ ಸಂಖ್ಯೆಯಲ್ಲಿದ್ದ ಈ ಶಾಲೆಯಲ್ಲಿ ಪ್ರಸ್ತುತ 300 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪ್ರಾಥಮಿಕ ಹಂತದಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣುವ ಅಗತ್ಯವಿದೆ ಎಂದು ಹೇಳಿದರು.

ಪಪಂ ಸದಸ್ಯ ರತ್ನಾಕರ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಮದಾಸ ಪ್ರಭು, ಕಾರ್ಯದರ್ಶಿ ಚಾಮುಂಡೇಶ್ವರಿ ನಾಗರಾಜ್, ಮುಖ್ಯಶಿಕ್ಷಕಿ ಸಾವಿತ್ರಿ, ಪೂರ್ಣೇಶ್, ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net