ಸರ್ವ ಕ್ಷೇತ್ರದಲ್ಲೂ ಮಹಿಳೆಯರು ಯಶಸ್ವಿ

17 skp1
ಮಹಿಳೆಯರಿಗೆ ಸನ್ಮಾನ
Published on

ಶಿಕಾರಿಪುರ: ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಗ್ರಾಪಂ ಆಡಳಿತದಿಂದ ಹಿಡಿದು ರಾಷ್ಟ್ರಪತಿ ಹುದ್ದೆವರೆಗೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪ್ರಕೃತಿ ಚಿಕಿತ್ಸಾಲಯ, ಐಶ್ವರ್ಯ ಹೋಮಿಯೋಕೇರ್ ಫಾರ್ಮಸಿ, ಸೃಷ್ಟಿ ಟ್ರಸ್ಟ್, ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ಆಯೋಜಿಸಿದ್ದ ಮಂಡಿ ನೋವಿನ ಉಚಿತ ಚಿಕಿತ್ಸೆ ಶಿಬಿರದಲ್ಲಿ ಮಾತನಾಡಿ, ವಿದ್ಯೆ ಜತೆಗೆ ಸಂಸ್ಕಾರ ಬೆಳೆಸಿಕೊಂಡಿರುವ ಮಹಿಳೆಯರು ದೇಶ ಮುನ್ನಡೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ವಕೀಲೆ ಜ್ಯೋತಿ ಗೌಡ ಮಾತನಾಡಿ, ಮಹಿಳೆಯರು ಜನಿಸಿದ ಕ್ಷಣದಿಂದಲೇ ರಕ್ಷಣೆ ಒದಗಿಸಲು ಕಾನೂನುಗಳಿವೆ ಎಂದರು. ಶಾಂತಮ್ಮ ಸುರಗಿಹಳ್ಳಿ, ಡಾ. ವಿಜಯಲಕ್ಷ್ಮೀ ನಾಡಿಗ್, ಸುಷ್ಮಾ ದೀಕ್ಷಿತ್, ಡಾ. ಅಶ್ವಿನಿ, ಜ್ಯೋತಿ ಗೌಡ, ಶೈಲಾ ಮಡ್ಡಿ ಅವರನ್ನು ಸನ್ಮಾನಿಸಲಾಯಿತು. ಡಾ. ನಾಗವೀಣಾ ಪಾಟೀಲ್, ಹೋಮಿಯೋಪಥಿ ವೈದ್ಯ ಮಾಲತೇಶ ರೇವಣಸಿದ್ದೇಶ್ವರ, ಶಿಕ್ಷಕಿ ಅನುಷಾ ಮಹೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net