ಸಾಹಿತ್ಯದ ಮುಖೇನ ಇತಿಹಾಸ ದಾಖಲು

13hos1p kasapa
ಹೊಸನಗರ ಕಸಾಪ ಏರ್ಪಡಿಸಿದ್ದ ದತ್ತಿನಿಧಿ ಕಾರ್ಯಕ್ರಮದಲ್ಲಿ ಡಾ. ಶಾಂತರಾಮ ಪ್ರಭು ಉಪನ್ಯಾಸ ನೀಡಿದರು. ಅಂಬ್ರಯ್ಯಮಠ, ಗಣೇಶಮೂರ್ತಿ ನಾಗರಕೊಡಿಗೆ, ವಿನಾಯಕ ಉಡುಪ ಇದ್ದರು.
Published on

ಹೊಸನಗರ: ಇತಿಹಾಸ, ಸಾಹಿತ್ಯ ಎರಡು ಒಂದಕ್ಕೊಂದು ಪೂರಕ. ಸಾಹಿತ್ಯವೇ ಇತಿಹಾಸ ಮತ್ತು ಇತಿಹಾಸವು ಸಾಹಿತ್ಯದಿಂದಲೇ ದಾಖಲಿಸಲ್ಪಟ್ಟಿದೆ ಎಂದು ನಿವೃತ್ತ ಉಪನ್ಯಾಸಕ ಡಾ. ಶಾಂತಾರಾಮಪ್ರಭು ಹೇಳಿದರು.

ತಾಲೂಕು ಕಸಾಪದಿಂದ ಆಯೋಜಿಸಿದ್ದ ದತ್ತಿನಿಧಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಎಲ್ಲ ಕಾವ್ಯ ಪ್ರಕಾರ, ಗ್ರಂಥಗಳು ಇತಿಹಾಸದ ನಿದರ್ಶನವಾಗಿವೆ. ಇತಿಹಾಸದ ರಾಜರು ಸಾಹಿತ್ಯ ಪೋಷಕರಾಗಿದ್ದರು. ಕವಿರಾಜಮಾರ್ಗದಲ್ಲಿ ಬರುವ ಕಾವೇರಿಯಿಂದ ಗೋದಾವರಿವರೆಗಿರ್ದ ಕರ್ನಾಟಕ ಎಂಬ ಸಾಲು ಅನೇಕ ಐತಿಹಾಸಿಕ ಸಂಶೋಧನೆಗೆ ಮುನ್ನುಡಿಯಾಯಿತು. ಸಾಹಿತ್ಯ ಪರಂಪರೆಗೆ ವೀರಕಾವ್ಯ ಎನ್ನಲಾಗಿದೆ. ವ್ಯಕ್ತಿ ಕೇಂದ್ರಿತ ಹಾಗೂ ಘಟನಾಧಾರಿತ ಕಾವ್ಯ ಎಂಬ ಎರಡು ಪ್ರಕಾರಗಳಿವೆ ಎಂದು ತಿಳಿಸಿದರು.

ನಗರದ ಸಾಹಿತ್ಯ ಆಸಕ್ತರು ಗೀತಾಗಾಯನ ನಡೆಸಿಕೊಟ್ಟರು. ದತ್ತಿದಾನಿ ವಿನಾಯಕ ಉಡುಪ ಹಾಗೂ ಅಂಬ್ರಯ್ಯಮಠ ಅವರಿಗೆ ಗೌರವ ಸಮರ್ಪಿಸಲಾಯಿತು. ಕಸಾಪ ನಿಕಟಪೂರ್ವ ಅಧ್ಯಕ್ಷ ತ.ಮ.ನರಸಿಂಹ, ತಾಲೂಕು ಕಸಾಪ ಅಧ್ಯಕ್ಷ ಗಣೇಶಮೂರ್ತಿ ನಾಗರಕೊಡಿಗೆ, ಅಶ್ವಿನಿ ಪಂಡಿತ್, ಶ್ರೀಧರ್ ಶೆಟ್ಟಿ, ವಸುಧಾ ಚೈತನ್ಯ, ಕೆ.ಜಿ.ನಾಗೇಶ್, ಕುಬೇಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net