

ತಮಿಳುನಾಡು: ಕಾಲಿವುಡ್ನ ಸ್ಟಾರ್ ನಟ ಶಿವಕಾರ್ತಿಕೆಯನ್ ಅವರ ಸಿಕ್ಸ್ ಪ್ಯಾಕ್ ಲುಕ್ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಫೋಟೋ ನೋಡಿದ ನಟನ ಅಭಿಮಾನಿಗಳು ಶಾಕ್ ಆಗಿದ್ದು, ಇದು ಮುಂದಿನ ಚಿತ್ರದ ಸ್ಟಿಲ್ ಇರಬಹುದೇ? ಯಾವ ಚಿತ್ರವಿದು ಎಂಬ ಹತ್ತು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಇದು ಅಸಲಿಯೋ? ಅಥವಾ ನಕಲಿಯೋ? ಎಂಬ ಅನೇಕರ ಪ್ರಶ್ನೆಗೆ ಇದೀಗ ಚಿತ್ರತಂಡ ಉತ್ತರ ನೀಡಿದೆ.
ಇದನ್ನೂ ಓದಿ: ಜ್ಞಾನ ವಿಕಾಸದಿಂದ ಸ್ತ್ರೀಯರಿಗೆ ಅನುಕೂಲ
ಇತ್ತೀಚಿಗೆ ಲಭ್ಯವಾದ ಮಾಹಿತಿ ಅನುಸಾರ, ತಮಿಳಿನ ಸ್ಟಾರ್ ಹೀರೋ ಶಿವಕಾರ್ತಿಕೇಯನ್, ರಾಜ್‌ಕುಮಾರ್ ಪೆರಿಯಾಸ್ವಾಮಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಎಸ್ಕೆ 21' ಚಿತ್ರದ ಚಿತ್ರೀಕರಣದಲ್ಲಿ ನಿರತಾಗಿದ್ದಾರೆ. ಆದ್ರೆ, ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಅವರು ಜಿಮ್ಗೆ ತೆರಳಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದು, ಅದಕ್ಕೆ ತಕ್ಕಂತೆ ಒಂದು ಫೋಟೋ ಕೂಡ ವೈರಲ್ ಆಗಿದೆ. ನಟನ ಲುಕ್ ನೋಡಿ ಆಶ್ಚರ್ಯಚಕಿತರಾದ ಫ್ಯಾನ್ಸ್, ಇದು ನಿಜವಾ? ಯಾವ ಚಿತ್ರ, ಅದ್ಭುತ ಮೈಕಟ್ಟು ಎಂದೆಲ್ಲಾ ಕಮೆಂಟ್ ಮಾಡುವ ಮೂಲಕ ಚರ್ಚೆ ಮಾಡಿದ್ದಾರೆ.
ವೈರಲ್ ಆದ ಫೋಟೋ ಕುರಿತು ಇದ್ದ ಗೊಂದಲಗಳಿಗೆ ಇದೀಗ ಚಿತ್ರತಂಡ ತೆರೆ ಎಳೆದಿದೆ. ಚಿತ್ರ ತಯಾರಕರು ಸ್ನ್ಯಾಪ್ ನಕಲಿ ಎಂದು ಖಚಿತಪಡಿಸಿದ್ದು, ಅಭಿಮಾನಿಗಳಲ್ಲಿ ಯಾರೋ ಒಬ್ಬರು ಫೋಟೋಶಾಪ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಶಿವ ಕಾರ್ತಿಕೆಯನ್ 'ಎಸ್ಕೆ 21' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಈ ಚಿತ್ರದ ಫಸ್ಟ್ ಲುಕ್ ಆಗಸ್ಟ್ 15 ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).