More

    ಪಿಎಫ್ಐ ಬೆಂಬಲ ನೀಡುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ: ಅಶ್ವಥ್ ನಾರಾಯಣ್

    ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಇಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಮಾಜಿ ಸಚಿವ ಡಾ. ಸಿ.ಎನ್​ ಅಶ್ವಥ್​ ನಾರಾಯಣ್​, ಪಿಎಫ್ಐ ಬೆಂಬಲ ನೀಡುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಭಾರತ ಮೂಲದ ಯೂಟ್ಯೂಬರ್​ ಲಿಲ್ಲಿ ಸಿಂಗ್​ ವಾರ್ಷಿಕ ಗಳಿಕೆ ಎಷ್ಟೆಂದು ತಿಳಿದ್ರೆ ನೀವು ದಂಗಾಗೋದು ಖಚಿತ!

    ಕೆಜೆ ಹಳ್ಳಿ,ಡಿಜೆ ಹಳ್ಳಿ ಪ್ರಕರಣ ಸಂಪುಟ ಉಪಸಮಿತಿ ರಚನೆ ವಿಚಾರವಾಗಿ ಮಾತನಾಡಿದ ಅವರು, “ದುಷ್ಕರ್ಮಿಗಳು ಕಾನೂನನ್ನು ಕೈಗೆ ತೆಗೆದುಕೊಂಡಿದ್ದರು. ಶಾಸಕರ ಮನೆಗೆ ಬೆಂಕಿಯಿಟ್ಡು, ಸ್ಟೇಷನ್‌‌ಗೆ ಕಿಡಿ ಹತ್ತಿಸಿದರು. ಈ ಘಟನೆ ನಡೆದು ಈಗಾಗಲೇ 4 ವರ್ಷಗಳು ಕಳೆದಿವೆ. ಎಲ್ಲಾ ತನಿಖೆಯೂ ನಡೆದಿದೆ. ಕೆಲವರು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.

    “ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದಕ್ಕೆ ನಾವು ಬಿಡುವುದಿಲ್ಲ. ರಾಜಕೀಯವಾಗಿ ಕೂಡ ಹೋರಾಟ ಮಾಡುತ್ತೇವೆ. ಇದನ್ನು ಸಡಿಲಿಕೆ ಮಾಡಿ, ಕೇಸ್‌‌‌ನಿಂದ ಹೊರಗೆ ಕರೆದುಕೊಂಡು ಬರಲು ಬಿಡುವುದಿಲ್ಲ. ಪಿಎಫ್ಐ ಬೆಂಬಲ ನೀಡುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ” ಎಂದು ಅಶ್ವಥ್ ನಾರಾಯಣ್ ಹೇಳಿದರು.

    ಇದನ್ನೂ ಓದಿ: ಕೋಚಿಂಗ್​ ಸೆಂಟರ್​ ಶಿಕ್ಷಕನಿಗೆ ನಡುರಸ್ತೆಯಲ್ಲೇ ಇರಿದು ಪೊಲೀಸರಿಗೆ ಶರಣಾದ ವಿದ್ಯಾರ್ಥಿ..!

    “ರಾಜ್ಯಪಾಲರಿಗೆ ಬಿಜೆಪಿ ದೂರು ನೀಡುವ ವಿಚಾರ ಪಕ್ಷದ ವರಿಷ್ಠರು, ಅಧ್ಯಕ್ಷರು ನಿರ್ಧಾರ ಮಾಡುತ್ತಾರೆ. ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಡಿ.ಕೆ. ಶಿವಕುಮಾರ್ ಮೇಲೆ ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿದ್ದಾರೆ. ಅವರನ್ನು ಮಂತ್ರಿ ಮಂಡಲದಿಂದ ವಜಾಗೊಳಿಸಬೇಕು. ಡಿಕೆಶಿ ಟ್ಯಾಕ್ಸ್ ಎಂಬುದನ್ನು ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಲಿದ್ದೇವೆ. ಡಿಸಿಎಂ ಮೇಲೆ ಕೇಳಿಬಂದಿರುವ ಆರೋಪವನ್ನು ಲೋಕಯುಕ್ತಾ ತನಿಖೆಗೆ ವಹಿಸಬೇಕು ಎಂದು ರಾಜ್ಯಪಾಲರಿಗೆ ಆಗ್ರಹಿಸುತ್ತೇವೆ” ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದರು.

    ‘ತಲೈವಾ-ಶಿವಣ್ಣ’ ನಟನೆಗೆ ಫ್ಯಾನ್ಸ್​ ಫಿದಾ; 3ನೇ ದಿನಕ್ಕೆ ‘ಜೈಲರ್’ ಗಳಿಸಿದ್ದೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts