ಸಂಭಾಲ್​ನಲ್ಲಿ ಒತ್ತುವರಿ ತೆರವುಗೊಳಿಸುವಾಗ 1978ರಲ್ಲಿ ಮುಚ್ಚಲಾಗಿದ್ದ ಶಿವನ ದೇವಸ್ಥಾನ, ಬಾವಿ ಪತ್ತೆ!

by (16)
Published on

ಉತ್ತರಪ್ರದೇಶ: ಸಂಭಾಲ್​​ ಜಿಲ್ಲೆಯಲ್ಲಿ ಅಧಿಕಾರಿಗಳು ಅತಿಕ್ರಮಣ ತೆರುವುಗೊಳಿಸುವ ವೇಳೆ ಶಿವನ ದೇವಾಲಯ ಮತ್ತು ದೇವಸ್ಥಾನದ ಅಣತಿ ದೂರದಲ್ಲಿ ಬಾವಿಯೊಂದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

42 ವರ್ಷಗಳ ಬಳಿಕ ಈ ದೇವಸ್ಥಾನ ಇಂದು ಪತ್ತೆಯಾಗಿದೆ ಎಂದು ಸಂಭಾಲ್​ ಜಿಲ್ಲಾಡಳಿತ ಧೃಢಪಡಿಸಿದ್ದು, ವಿವಿಧ ಕಾರಣಗಳಿಂದ 1978ರಲ್ಲಿ ಈ ದೇವಸ್ಥಾನ ಮುಚ್ಚಲಾಗಿದೆ ಎಂದು ಅಂದಾಜಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

42 ವರ್ಷಗಳ ಬಳಿಕ ಮತ್ತೆ ಸಾರ್ವಜನಿಕರ ದರ್ಶನಕ್ಕೆ ದೇವಸ್ಥಾನವನ್ನು ಶುದ್ಧಿಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿದ್ಯುತ್​ ಕಳ್ಳತನ ಮಾಡುತ್ತಿರುವವರ ವಿರುದ್ಧ ಅಧಿಕಾರಿಗಳು ಅಭಿಯಾನ(ಕಾರ್ಯಚರಣೆ) ಮಾಡುತ್ತಿದ್ದಾಗ, ದೇವಸ್ಥಾನ ಅತಿಕ್ರಮದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಅಧಿಕಾರಿಗಳು ಜಿಲ್ಲಾಧಿಕಾರಿ ರಾಜೇಂದ್ರ ಪೆಸಿಯಾ ಅವರಿಗೆ ಮಾಹಿತಿ ತಿಳಿಸಲಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಕೂಡಲೇ ಒತ್ತುವರಿಯನ್ನು ತೆರವುಗೊಳಿಸಿ ಮುಚ್ಚಿದ್ದ ದೇವಸ್ಥಾನ ಬಾಗಿಲು ತೆರೆಯಲಾಗಿದೆ. ಇದು ಭಸ್ಮ ಶಂಕರ ದೇವಸ್ಥಾನವಾಗಿದ್ದು, ಹನುಮಾನ್​​ ಮತ್ತು ಶಿವನ ವಿಗ್ರಹ ದೊರೆತಿದೆ ಎಂದು ತಿಳಿಸಿದ್ದಾರೆ.

ಮೊಘಲರ ಕಾಲದ ಶಾಹಿ ಜಾಮಾ ಮಸೀದಿಯ ಸರ್ವೆಗಾಗಿ ಇದೇ ನ.24 ರಂದು ಸಂಭಾಲ್‌ನಲ್ಲಿ ಹಿಂಸಾಚಾರ ನಡೆದಿತ್ತು. ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದರು. ಸಂಭಾಲ್‌ನ ಮತ್ತೊಂದು ಮಸೀದಿಯ ಇಮಾಮ್‌ಗೆ ಶುಕ್ರವಾರ ಹೆಚ್ಚಿನ ಧ್ವನಿಯಲ್ಲಿ ಧ್ವನಿವರ್ಧಕವನ್ನು ಬಳಸಿದ್ದಕ್ಕಾಗಿ 2 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net