

ಬಿಹಾರ್: ಸರ್ಕಾರಿ ಶಿಕ್ಷಕನನ್ನು(teacher)ಬಲವಂತವಾಗಿ ಎಳೆದ್ಯೊಯ್ದುಕೊಂಡು ಹುಡುಗಿಯ ಜತೆ ಮದುವೆ ಮಾಡಿದ ಘಟನೆ ಶುಕ್ರವಾರ ಸಂಜೆ ಬಿಹಾರ್ದ ಪಾಟ್ನದಲ್ಲಿ ನಡೆದಿದೆ.
ಇತ್ತೀಚಿಗೆ ಬಿಹಾರ ಲೇಕಾಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಶಿಕ್ಷನಾಗಿದ್ದ ಅವಿನಾಶ್ ಕುಮಾರ್ ಎಂಬಾತನ್ನು ಅಪಹರಿಸಿ ಬಲವಂತದ ಮದುವೆ ಮಾಡಲಾಗಿದೆ. ಈ ಘಟನೆಯು 'ಪಕಡುವ ವಿವಾಹ'(ಬಲವಂತದ ಮದುವೆ) ಒಂದು ಕಾಲದಲ್ಲಿ ಬಿಹಾರದಲ್ಲಿ ಆಚರಣೆಯಲ್ಲಿದ್ದ ಅತಿರೇಕದ ಮದುವೆಯಾಗಿದೆ ಎಂದು ಹೇಳಲಾಗಿದೆ.
ಅವಿನಾಶ್ ಅವರು ತಾವು ಕೆಲಸ ಮಾಡುತ್ತಿದ್ದ ಶಾಲೆಗೆ ಹೋಗುತ್ತಿದ್ದಾಗ ಎರಡು ರೀಕ್ಷಾದಲ್ಲಿ ಬಂದ ಕೆಲವರು ಅಡ್ಡಗಟ್ಟಿದ್ದರು. ಬಳಿಕ ಬಂದೂಕುಗಳನ್ನು ತೋರಿಸಿ ಬಲವಂತವಾಗಿ ಅಪಹರಿಸಲಾಗಿದೆ. ಅಲ್ಲದೇ, ಈ ಘಟನೆಯೂ ನೆರೆದಿದ್ದವರನ್ನು ದಿಗ್ಭ್ರಮೆಗೊಳಿಸಿದೆ. ಈ ಘಟನೆಗೆ ಸಂಬಂದಪಟ್ಟಂತೆ ಸಾಮಾಜಿಕ ತಾಲತಾಣದಲ್ಲಿ ಇದೀಗ ವಿಡಿಯೋವೊಂದು ವೈರಲ್ ಆಗಿದೆ.
ಅವಿನಾಶ್ ಅವರನ್ನು ಅಪಹರಿಸಿದ್ದು ಅಲ್ಲದೇ, ಅವರನ್ನ ಧಳಿಸಿ ಹಲ್ಲೆ ಮಾಡಿ ಮದುವೆಗೆ ಒಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಮತ್ತೊಂದು ಕಡೆ ಅವಿನಾಶ್ ಅವರು ನನ್ನೊಂದಿಗೆ ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದನು. ಈಗ ಏಕಾಏಕಿ ಮದುವೆ ಬೇಡ ಎನುತ್ತಿದ್ದಾನೆ ಎಂದು ವಧು ಕಟುಂಬಸ್ಥರು ಆರೋಪಿಸಿದ್ದಾರೆ. ಈ ಆರೋಪಗಳನ್ನು ಅವಿನಾಶ್ ಕುಟುಂಬದವರು ತಳ್ಳಿ ಹಾಕಿದ್ದು, ಈ ಪ್ರಕರಣದಕ ಕುರಿತು ಶೀಘ್ರ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಇದೀಗ ಈ ಪ್ರಕರಣದಿಂದ ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳದ ಪ್ರಶ್ನೆ ಎದ್ದಿದೆ. ಅಲ್ಲದೆ, ಈ ಘಟನೆಯಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).