ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಜನಪ್ರಿಯತೆ ಗಳಿಸಿರುವ ಬಿಗ್ ಬಾಸ್ ಸೀಸನ್ 11ರಲ್ಲಿ (BBK11) ಕಳೆದ ವಾರ ಯಾರೊಬ್ಬರು ಸಹ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗಲಿಲ್ಲ. ಆದರೆ, ಈ ವಾರ ಕೊಂಚ ಆಟದ ಗತ್ತು, ಗಮ್ಮತ್ತು ಬೇರೆ ಹಾದಿಯನ್ನೇ ಹಿಡಿದಿದ್ದು, ನೋಡುಗರಿಗೆ ಹಲವು ಅಭಿಪ್ರಾಯಗಳು ನೀಡಿತು. ಇದೆಲ್ಲದರ ನಡುವೆ ವಾರ ಪೂರ ಟಾಸ್ಕ್ಗಳಲ್ಲಿ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಿದ ಸ್ಪರ್ಧಿಗಳ ಆಟದ ವೈಖರಿ, ನಡವಳಿಕೆಯಲ್ಲಿನ ತಪ್ಪು-ಸರಿಯನ್ನು ಇಂದಿನ ‘ವಾರದ ಕಥೆ ಕಿಚ್ಚನ ಜತೆ’ ಸಂಚಿಕೆಯಲ್ಲಿ ಮಾತನಾಡಿರುವ ನಿರೂಪಕ, ನಟ ಸುದೀಪ್, ಕೆಲವರಿಗೆ ಮಾತಿನಲ್ಲೇ ಬಿಸಿ ಮುಟ್ಟಿಸಿದ್ದಾರೆ.
ಇದನ್ನೂ ಓದಿ: ಶೂನ್ಯ ಬಂಡವಾಳ ಲಕ್ಷಾಂತರ ರೂ. ಆದಾಯ: ವಿಭಿನ್ನ ಕೃಷಿ ಸಾಧಕ ನಾಗರಾಜ ಹುಲಗೂರ
ಕಳೆದ ವಾರ ಯಾರು ಬಿಗ್ ಮನೆಯಿಂದ ಹೊರ ಹೋಗದ ಹಿನ್ನಲೆ ಈ ವಾರ ಇಬ್ಬರು ಡಬಲ್ ಎಲಿಮಿನೇಷನ್ನಡಿ ಹೊರಬೀಳಲಿದ್ದಾರೆ ಎಂಬ ಗೊಂದಲಗಳು ವೀಕ್ಷಕರಲ್ಲಿ ಮೂಡಿವೆ. ಇದರ ಮಧ್ಯೆ ಮನೆಯ ಕ್ಯಾಪ್ಟನ್ ಆಗಿ ಸುರೇಶ್ ಮಿಂಚಿದರೆ, ಟಾಸ್ಕ್ ಜಟಾಪಟಿಗಿಂತಲೂ ಮಾತಿನಲ್ಲೇ ನಡೆದ ಜಟಾಪಟಿಗಳು ಸದ್ಯ ವಾರಾಂತ್ಯ ಬರುವ ಕಿಚ್ಚ ಸುದೀಪ್ ಅವರ ಕೆಲಸವನ್ನು ಕೊಂಚ ಹೆಚ್ಚಿಸಿದೆ. ಮನೆಯೊಳಗೆ ಸ್ನೇಹಿತರ ನಡುವಿನ ಬಿರುಕು ಮತ್ತು ಸದಸ್ಯರ ಮಧ್ಯೆ ಉಂಟಾದ ಕೈ-ಕೈ ಮೀಲಾಯಿಸುವ ಹಂತದ ಜಗಳ ಇದೀಗ ಸುದೀಪ್ ಅವರಿಗೆ ಕ್ಲಾಸ್ ತೆಗೆದುಕೊಳ್ಳುವಂತೆ ಮಾಡಿದೆ.
ಆತ್ಮವಿಶ್ವಾಸದಿಂದ ಆಡುವವರನ್ನು ಬೆನ್ನುತಟ್ಟಿ ಬೆಳಸುತ್ತೀವಿ ನಾವು. ಅದೇ ಆತ್ಮವಿಶ್ವಾಸ ಅತೀಯಾಗಿ ದಿಕ್ಕನ್ನು ತಪ್ಪಿದ್ರೆ ಸ್ವಲ್ಪ ತಲೆ ಮೇಲೆ ತಟ್ಟಿ ಪಕ್ಕಕ್ಕೆ ಕೂರಿಸುತ್ತೀವಿ. ಅಸಲಿಗೆ ಗುರಿಯನ್ನು ಕಳೆದುಕೊಂಡವರು ಯಾರು? ಆಟ ಮರೆತಿರುವವರು ಯಾರೆಲ್ಲಾ? ಎಂಬುದನ್ನು ಕಿಚ್ಚ ಇಂದಿನ ಸಂಚಿಕೆಯ ಆರಂಭದಲ್ಲಿಯೇ ಖಡಕ್ ಆಗಿ ಹೇಳಿದ್ದಾರೆ. ಯಾರಿಗೆಲ್ಲ ಕಿಚ್ಚನ ಕ್ಲಾಸ್ ಇರಲಿದೆ ಎಂಬುದನ್ನು ಇಂದಿನ ‘ವಾರದ ಕಥೆ ಕಿಚ್ಚನ ಜತೆ’ ಸಂಚಿಕೆಯಲ್ಲಿ ನೋಡಿ ತಿಳಿಯಬೇಕಿದೆ.
ಎರಡು ಭರ್ಜರಿ ಹಾಡು, ದುಪ್ಪಟ್ಟು ಬೇಡಿಕೆ! ‘ಕಿಸ್ಸಿಕ್’ನಿಂದ ‘ಕಿಸ್’ ಬೆಡಗಿಗೆ ಒಲಿಯಿತು ಅದೃಷ್ಟ