ಮೆಗಾಸ್ಟಾರ್ ಮನೆಯಲ್ಲಿ ಶಿವಣ್ಣಗೆ ಡಿನ್ನರ್​: ಡಾ.ರಾಜ್​ ಕುಟುಂಬ ಜತೆಗಿನ ಒಡನಾಟದ ಮೆಲಕು ಹಾಕಿದ ಚಿರು..

chiru-shivanna
Published on

ಹೈದರಾಬಾದ್​: ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗಕ್ಕೆ ನೀಡಿದ ಸೇವೆಗಾಗಿ ಇತ್ತೀಚೆಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದಕ್ಕೆ ರಾಜಕಾರಣಿಗಳು, ಚಿತ್ರರಂಗದವರು, ಅಭಿಮಾನಿಗಳು ಮತ್ತು ಸೆಲಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅದೇ ರೀತಿ ಕನ್ನಡದ ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್ ಸಹ ಮೆಗಾಸ್ಟಾರ್ ಚಿರಂಜೀವಿಗೆ ಅಭಿನಂದನೆ ಸಲ್ಲಿಸಿದರು.

ಇಷ್ಟಕ್ಕೂ ಶಿವಣ್ಣ ಮೊಬೈಲ್​ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆ ಸಲ್ಲಿಸಿದ್ದು ಅಲ್ಲ. ಬೆಂಗಳೂರಿನಿಂದ ಹೈದರಾಬಾದ್‌ಗೆ ಬಂದ ಶಿವಣ್ಣ ಅವರನ್ನು ಚಿರಂಜೀವಿ ಆತ್ಮೀಯವಾಗಿ ಸ್ವಾಗತಿಸಿದರು. ಮೆಗಾಸ್ಟಾರ್ ಚಿರಂಜೀವಿ ತಮ್ಮ ಎಕ್ಸ್ (ಟ್ವಿಟ್ಟರ್) ವೇದಿಕೆಯಲ್ಲಿ ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಪೋಸ್ಟ್​ ಮಾಡಿದ್ದಾರೆ.

ನನ್ನ ಆತ್ಮೀಯ ಗೆಳೆಯ ಶಿವಣ್ಣ ನನಗಾಗಿ ಬಂದಿದ್ದಕ್ಕೆ ತುಂಬಾ ಖುಷಿಯಾಗಿದೆ. ಶಿವಣ್ಣ ಮಾಡಿದ ಕೆಲಸದಿಂದ ನಾನು ಸಂತುಷ್ಠನಾಗಿದ್ದೇನೆ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಮೆಗಾಸ್ಟಾರ್ ಜೊತೆ ಶಿವಣ್ಣ ಲಂಚ್: ಇಬ್ಬರೂ ಒಟ್ಟಿಗೆ ಊಟ ಮಾಡಿ ಬಹಳ ಹೊತ್ತು ಹರಟೆ ಹೊಡೆದೆವು. ಖ್ಯಾತ ನಟ ರಾಜ್ ಕುಮಾರ್ ಮತ್ತು ಅವರ ಕುಟುಂಬದೊಂದಿಗಿನ ಒಡನಾಟವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಹಲವು ನೆನಪುಗಳನ್ನು ಮಾಡಿಕೊಂಡಿದ್ದೇವೆ’ ಕೆಲವು ಕ್ಷಣ ಭಾವುಕರಾದೆವು ಎಂದು ಚಿರಂಜೀವಿ ತಿಳಿಸಿದ್ದಾರೆ.

ಜೊತೆಗೆ ಶಿವಣ್ಣ ಜೊತೆಗಿನ ಊಟದ ಫೋಟೋಗಳನ್ನೂ ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿ ಜನ ಖುಷಿಯಾಗಿದ್ದಾರೆ. ನಿಮ್ಮಿಬ್ಬರನ್ನು ಹೀಗೆ ನೋಡಲು ಎರಡು ಕಣ್ಣು ಸಾಲದು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net