More

    ಇರಾಕ್, ಸಿರಿಯಾದ ಉಗ್ರ ನೆಲೆಗಳ ಮೇಲೆ ಅಮೆರಿಕಾ ವೈಮಾನಿಕ ದಾಳಿ!

    ವಾಷಿಂಗ್ಟನ್: ಇರಾನ್ ಮತ್ತು ಸಿರಿಯಾದಲ್ಲಿನ ಉಗ್ರರ 85 ನೆಲೆಗಳ ಮೇಲೆ ಅಮೆರಿಕಾ ವೈಮಾನಿಕ ದಾಳಿ ನಡೆಸಿದೆ. ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಮತ್ತು ಅಂಗಸಂಸ್ಥೆ ಸೇನಾ ಗುಂಪುಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದಾಗಿ ಯುನೈಟೆಡ್ ಸ್ಟೇಟ್ಸ್ ಘೋಷಿಸಿದೆ.

    ಇದನ್ನೂ ಓದಿ:ವಾರದಲ್ಲಿ 3ನೇ ಬಾರಿಗೆ ಇಮ್ರಾನ್​ಗೆ ಜೈಲು ಶಿಕ್ಷೆ: ಮದುವೆ ‘ಇದ್ದತ್​’ ಕೇಸ್​ ಹೂಡಿರುವುದೇಕೆ ಪತ್ನಿಯ ಮಾಜಿ ಪತಿ!

    ಕಳೆದ ಭಾನುವಾರ ಜೋರ್ಡಾನ್‌ನಲ್ಲಿರುವ ಅಮೇರಿಕನ್ ಸೇನಾ ನೆಲೆಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಮೂವರು ಸೈನಿಕರು ಸಾವನ್ನಪ್ಪಿದ್ದರು. 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆಯನ್ನು ಅಮೆರಿಕಾ ಗಂಭೀರವಾಗಿ ಪರಿಗಣಿಸಿತ್ತು.

    ಇರಾನ್ ಪರ ನಿಂತಿರುವ ಉಗ್ರರ ಗುಂಪುಗಳಲ್ಲಿ ಗುರುತಿಸಿಕೊಂಡಿರುವ ಉಗ್ರರು ಇದಕ್ಕೆ ಹೊಣೆಗಾರರಾಗಿದ್ದಾರೆ ಎಂದು ಅಮೆರಿಕಾ ಆರೋಪಿಸಿದ್ದು, ಪ್ರತೀಕಾರ ತೀವ್ರವಾಗಿರುತ್ತದೆ ಎಂದು ಎಚ್ಚರಿಸಿದೆ.

    ಶುಕ್ರವಾರ ಅಮೆರಿಕದಿಂದ ಹೊರಟ ಬಿ1-ಲಾಂಗ್ ರೇಂಜ್ ಬಾಂಬರ್ ವಿಮಾನಗಳು ಇರಾನ್‌ನ ಗಡಿ ಪಟ್ಟಣವಾದ ಅಲ್-ಕೈಮ್‌ನಲ್ಲಿ ನೆಲೆಗೊಂಡಿರುವ ಇರಾನ್ ಪರವಾದ ಹಮ್ದ್ ಅಲ್-ಶಬಿ ಮತ್ತು ಕಟೈಬ್ ಹೆಜ್ಬೊಲ್ಲಾಹ್ ಸಂಘಟನೆಗಳ ನೆಲೆಗಳನ್ನು ದ್ವಂಸಗೊಳಿಸಿದೆ. ಒಟ್ಟು 85 ನೆಲೆಗಳ ಮೇಲೆ ಬಾಂಬ್‌ಗಳೊಂದಿಗೆ ದಾಳಿ ನಡೆಸಿದ್ದು, ಎಲ್ಲ ನೆಲೆಗಳು ನೆಲಸಮವಾಗಿವೆ ಎಂದು ಅಧ್ಯಕ್ಷ ಬಿಡೆನ್ ಹೇಳಿದ್ದಾರೆ.

    ಉರಗ ಪ್ರಿಯೆ ಈ ನಟಿ..ಅಬ್ಬಬ್ಬಾ ಹೆಬ್ಬಾವಿಗೆ ಚುಂಬಿಸ್ತಾಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts