More

    ವಾರದಲ್ಲಿ 3ನೇ ಬಾರಿಗೆ ಇಮ್ರಾನ್​ಗೆ ಜೈಲು ಶಿಕ್ಷೆ: ಮದುವೆ ‘ಇದ್ದತ್​’ ಕೇಸ್​ ಹೂಡಿರುವುದೇಕೆ ಪತ್ನಿಯ ಮಾಜಿ ಪತಿ!

    ಇಸ್ಲಾಮಾಬಾದ್: ಭ್ರಷ್ಟಾಚಾರ ಮತ್ತು ಅಧಿಕೃತ ರಹಸ್ಯಗಳನ್ನು ಬಹಿರಂಗಪಡಿಸಿದ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಜೈಲು ಸೇರಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಬಾನ್ ಗೆ ಹೆಗಲೇರಿರುವ ಸಂಕಷ್ಟಗಳು ಬಿಡುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚೆಗೆ ಅವರು ಮತ್ತೊಂದು ಹಿನ್ನಡೆ ಅನುಭವಿಸುತ್ತಿದ್ದಾರೆ.

    ಇದನ್ನೂ ಓದಿ:ಚಿಲಿಯಲ್ಲಿ ಬಾನೆತ್ತರಕ್ಕೆ ಎದ್ದಿದೆ ಕಾಡ್ಗಿಚ್ಚು: 46 ಜನರ ದಾರುಣ ಸಾವು – ಸಾವಿರಾರು ಮಂದಿಗೆ ಗಾಯ!

    ಪಾಕಿಸ್ತಾನದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಶನಿವಾರ ಇಸ್ಲಾಂ ಧರ್ಮದ ನಿಯಮಗಳಿಗೆ ವಿರುದ್ಧವಾದ ‘ನಿಕಾಹ್’ ಪ್ರಕರಣದಲ್ಲಿ ಇಮ್ರಾನ್ (ಟಿಎಸ್) ಮತ್ತು ಬುಪ್ರಾ ಬೀಬಿ (49) ದಂಪತಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.

    ರಾವಲ್ಪಿಂಡಿಯ ಅಡಿಯಾಲ ಜೈಲಿನ ಆವರಣದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದಾಗ ನ್ಯಾಯಾಲಯದ ಮುಂದೆ ಇಮ್ರಾನ್ ದಂಪತಿಗಳಿಬ್ಬರೂ ಇದ್ದರು. ಇದೇ ತಿಂಗಳ 8ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇಂತಹ ಸಮಯದಲ್ಲಿ ಇಮ್ರಾನ್‌ ಖಾನ್​ರನ್ನು ಸತತವಾಗಿ ಜೈಲಿಗಟ್ಟುತ್ತಿರುವುದರಿಂದ ಅವರ ನಾಯಕತ್ವದ ‘ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್’ (ಪಿಟಿಐ) ಪಕ್ಷಕ್ಕೆ ಪ್ರಬಲ ಹಿನ್ನಡೆಯಾಗುವ ಲಕ್ಷಣ ಕಂಡುಬರುತ್ತಿದೆ.

    ಇಸ್ಲಾಮಿಕ್ ನಿಯಮಗಳ ಪ್ರಕಾರ, ಗಂಡನ ಮರಣದ ನಂತರ ಅಥವಾ ಪತಿಯಿಂದ ವಿಚ್ಛೇದನದ ನಂತರ ಮರುಮದುವೆಗೆ ನಿಗದಿತ ಮಧ್ಯಂತರ (ಇದ್ದತ್) ಇರಬೇಕು. ಸಾಮಾನ್ಯವಾಗಿ ಇದು ಮೂರು ತಿಂಗಳವರೆಗೆ ಇರುತ್ತದೆ. ಈ ನಿಬಂಧನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಫರೀದ್ ತನ್ನ ಮಾಜಿ ಪತ್ನಿ ಬುಪ್ರಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೇಲಾಗಿ ಬುಪ್ರಾ ಮೊದಲಿನಿಂದಲೂ. ಇಮ್ರಾನ್ ನಡುವೆ ವಿವಾಹೇತರ ಸಂಬಂಧ ಮುಂದುವರಿದಿತ್ತು ಎನ್ನಲಾಗಿದೆ.

    ಉರಗ ಪ್ರಿಯೆ ಈ ನಟಿ..ಅಬ್ಬಬ್ಬಾ ಹೆಬ್ಬಾವಿಗೆ ಚುಂಬಿಸ್ತಾಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts