

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕಾರ ಕಾರ್ಯಕ್ರಮ ಕರೊನಾ, ಲಾಕ್ಡೌನ್ನಿಂದಾಗಿ ಮುಂದೂಡಲ್ಪಡುತ್ತಿದೆ.
ಅನೇಕ ನಿರ್ಬಂಧಗಳಿಗೆ ಸರ್ಕಾರ ಸಡಿಲಿಕೆ ನೀಡಿದ್ದರೂ ಪ್ರತಿ ಭಾನುವಾರ ಸಂಪೂರ್ಣ ಲಾಕ್ಡೌನ್ ವಿಧಿಸಿರುವ ಕಾರಣ ಡಿಕೆಶಿ ಅಧಿಕಾರ ಸ್ವೀಕಾರಕ್ಕೆ ಮತ್ತೊಮ್ಮೆ ಅಡ್ಡಿಯಾಗಿದೆ. ಡಿಕೆಶಿ ಮಂಗಳವಾರ ಖುದ್ದು ಈ ವಿಷಯ ಬಹಿರಂಗಪಡಿಸಿದ್ದು, ಪಕ್ಷದ ಅಧ್ಯಕ್ಷನಾಗಿ ಮೇ 31ಕ್ಕೆ ಅಧಿಕಾರ ಸ್ವೀಕರಿಸಬೇಕೆಂದಿದ್ದೆ. ಭಾನುವಾರ ರಜಾ ದಿನವಾದ ಕಾರಣ ಸಂಚಾರ ದಟ್ಟಣೆ ಇರುವುದಿಲ್ಲ ಎಂಬ ಕಾರಣಕ್ಕೆ ಆ ದಿನ ನಿಗದಿಪಡಿಸಿದ್ದೆ.
ಇದನ್ನೂ ಓದಿ VIDEO ] ಅನಾಹುತಕಾರಿ ಅಂಫಾನ್!
ಪ್ರತಿ ಭಾನುವಾರಗಳಂದು ಕರ್ಫ್ಯೂ ಘೋಷಿಸಿ ಬಿಟ್ಟಿದ್ದಾರೆ. ಹೀಗಾಗಿ ಬೇರೊಂದು ದಿನ ಸಾಂಕೇತಿಕವಾಗಿ ಪದಗ್ರಹಣ ಮಾಡಬೇಕೆಂದಿರುವೆ ಎಂದರು. ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞೆ ಸ್ವೀಕರಿಸಿ, ಪಕ್ಷದ ಧ್ವಜ ಸ್ವೀಕರಿಸುವ ಕಾರ್ಯಕ್ರಮ ಸಾಂಕೇತಿಕ, ಸರಳವಾಗಿದ್ದರೂ ವಿನೂತನವಾಗಿರಲಿದೆ.
ಆ ದಿನ ರಾಜ್ಯದೆಲ್ಲೆಡೆ ಪ್ರತಿ ಗ್ರಾ.ಪಂ., ವಾರ್ಡ್ ಮಟ್ಟದಲ್ಲೂ ಜ್ಯೋತಿ ಬೆಳಗಿಸುವ ಮೂಲಕ ವಿಶಿಷ್ಟವಾಗಿ ನೆರವೇರಿಸಲಿದ್ದು, ಮೇ 31ರ ಬಳಿಕ ಪದಗ್ರಹಣ ದಿನಾಂಕ ತಿಳಿಸಲಾಗುವುದು ಎಂದರು.