ಅಮೆರಿಕದಲ್ಲಿ ಆಗಿದ್ದೇ ಬಿಹಾರದಲ್ಲೂ ಆಗಲಿದೆ ಎಂದ ಶಿವಸೇನೆ

Sanjay Raut
Published on

ಅಮೆರಿಕದಲ್ಲಿ ಟ್ರಂಪ್​ ಅಧಿಕಾರ ಕಳೆದುಕೊಂಡಂತೆ ಬಿಹಾರದಲ್ಲಿ ಕೂಡ ಬಿಜೆಪಿ- ಜೆಡಿ (ಯು) ಅಧಿಕಾರ ಕಳೆದುಕೊಳ್ಳಲಿದೆ ಎಂದು ಶಿವಸೇನೆ ಹೇಳಿದೆ.

ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದೊಂದಿಗೆ ಬಿಹಾರ ಎಲೆಕ್ಷನ್​ನ್ನು ಹೋಲಿಸಿದೆ. ಅಷ್ಟೇ ಅಲ್ಲ, ಈ ವರ್ಷದ ಪ್ರಾರಂಭದಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ ನಮಸ್ತೆ ಟ್ರಂಪ್​ ಕಾರ್ಯಕ್ರಮವನ್ನೂ ಟೀಕಿಸಿದೆ.

ಅಮೆರಿಕದಲ್ಲಿ ಅಧಿಕಾರ ಬದಲಾವಣೆಯಾಗಿದೆ. ಟ್ರಂಪ್​ ಏನೆಲ್ಲ ಮಾಡಿದರೂ ಕೊನೆಯಲ್ಲಿ ಅಧಿಕಾರ ಹಿಡಿದಿದ್ದು ಡೆಮಾಕ್ರಟಿಕ್​ ಪಕ್ಷದ ಜೋ ಬೈಡೆನ್​ ಅವರು. ಬಿಹಾರದಲ್ಲಿಯೂ ಅದೇ ಮರುಕಳಿಸಲಿದೆ ಎಂದು ಬರೆದಿದೆ.

ನಾವು ಭಾರತೀಯರು ನಮಸ್ತೆ ಟ್ರಂಪ್​ ಎನ್ನಬಹುದು..ಆದರೆ ಅಮೆರಿಕದ ಜನರು ಟ್ರಂಪ್​ಗೆ ಬೈ-ಬೈ ಹೇಳಿದರು ಎಂದು ವ್ಯಂಗ್ಯಮಾಡಿದೆ. ಇದನ್ನೂ ಓದಿ: ಕೆಲ್ಸ ಸಿಕ್ಕಿದ ಬೆನ್ನಲ್ಲೇ ಬದಲಾಯ್ತು ಮಹಿಳಾ ಕಾನ್ಸ್​ಟೇಬಲ್​ ವರ್ತನೆ: ಕ್ವಾರ್ಟರ್ಸ್​ನಲ್ಲಿ ಶವವಾಗಿ ಪತ್ತೆ!

ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್​ ಕುಮಾರ್​ಗೆ ಯುವ ನಾಯಕ ತೇಜಸ್ವಿ ಎದುರು ನಿಲ್ಲಲು ಸಾಧ್ಯವಿಲ್ಲ. ಬಿಹಾರ ಜನರು ಮೋದಿ ಹಾಗೂ ನಿತೀಶ್ ಕುಮಾರ್​ ಎದುರು ಮಂಡಿಯೂರಲಿಲ್ಲ..ಚುನಾವಣೆಯನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ ಎಂದು ಶಿವಸೇನೆ ಬರೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net