

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಸಮತಟ್ಟುಗೊಳಿಸುವಾಗ 5 ಅಡಿ ಎತ್ತರದ ಶಿವಲಿಂಗ ಪತ್ತೆಯಾಗಿರುವುದರಿಂದ ಶಿವನಿಗೂ ಅಲ್ಲಿ ಪೂಜನೀಯ ಸ್ಥಾನ ದೊರಕಬೇಕು ಎಂಬ ಆಶಯ ಶಿವಭಕ್ತರಲ್ಲಿ ಮೂಡಿದೆ.
ಶ್ರೀರಾಮ ಕೂಡ ಶಿವಭಕ್ತ. ಶ್ರೀರಾಮನಿಂದಲೇ ರಾಮೇಶ್ವರ ನಿರ್ಮಾಣವಾಗಿದೆ ಎನ್ನುವುದಕ್ಕೆ ಪೌರಾಣಿಕ ಹಾಗೂ ಐತಿಹಾಸಿಕ ದಾಖಲೆಗಳಿವೆ. ಶ್ರೀರಾಮನ ಜನ್ಮಸ್ಥಳ ಎನ್ನಲಾಗಿರುವ ಜಾಗದಲ್ಲೇ ಶಿವಲಿಂಗ ಪತ್ತೆಯಾಗಿದೆ. ಕುಬೇರಟೀಲಾ ಸಮತಟ್ಟುಗೊಳಿಸುವ ವೇಳೆ ಸುಮಾರು 5 ಅಡಿ ಎತ್ತರದ ಶಿವಲಿಂಗ ಮತ್ತು ಮರಳುಗಲ್ಲಿನಲ್ಲಿ ದೇವರ ಚಿತ್ರಗಳನ್ನು ಕೆತ್ತಲಾಗಿರುವ ಹಲವು ಪಿಲ್ಲರ್ಗಳು ದೊರೆತಿವೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಮೇ 21ರಂದು ಶಿವಲಿಂಗ ದೊರೆತಿರುವ ವಿಷಯವನ್ನು ಬಹಿರಂಗಪಡಿಸಿದ್ದರು. ಕ್ಷತ್ರಿಯ ರಾಜಕುಮಾರನಾಗಿ ಜನಿಸಿದ ಶ್ರೀರಾಮ ಮನುಷ್ಯ ಸಹಜವಾಗಿ ಮಹಾಶಿವನ ಪರಮಭಕ್ತನಾಗಿದ್ದು ಪುರಾಣಗಳಲ್ಲಿ ಉಲ್ಲೇಖವಾಗಿದೆ.
ಅಲ್ಲದೆ, ಶ್ರೀರಾಮ ಶಿವಲಿಂಗ ಪೂಜೆಮಾಡುತ್ತಿದ್ದ ಎಂಬುದಾಗಿ ಅನೇಕ ಪುರಾಣ, ಐತಿಹಾಸಿಕ, ಪುರಾತತ್ವ ಅಧ್ಯಯನ ನಡೆಸಿದ ಪಂಡಿತರು ಈ ಹಿಂದೆಯೇ ಪ್ರತಿಪಾದಿಸಿದ್ದಾರೆ. ರಾಮ ಜನ್ಮಭೂಮಿ ಪ್ರದೇಶದಲ್ಲಿಯೇ ಶಿವಲಿಂಗ ದೊರೆತಿರುವುದರಿಂದ ಅದೇ ಪ್ರಾಂಗಣದಲ್ಲಿ ಶಿವನಿಗೂ ಪೂಜನೀಯ ಸ್ಥಾನ ಲಭ್ಯವಾಗಬೇಕು. ಅಲ್ಲಿ ಶಿವಮಂದಿರ ಸ್ಥಾಪನೆಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಚಿಂತಿಸಬೇಕು ಎಂಬುದು ಬಹುಸಂಖ್ಯಾತ ಶಿವಭಕ್ತರ ಒತ್ತಾಸೆ ಹಾಗೂ ಮನವಿಯಾಗಿದೆ. ಇದರಿಂದ ಶ್ರೀರಾಮನ ಆರಾಧ್ಯದೇವನಿಗೂ ಸೂಕ್ತ ಸ್ಥಾನ ಒದಗಿಸಿದಂತಾಗುತ್ತದೆ. ಈ ಸಂಬಂಧ ಚಿಂತನೆ ನಡೆಸುವುದು ಸೂಕ್ತ ಎನ್ನುವುದು ಶೈವ ಸಮುದಾಯದ ಮಹದಾಸೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿಗೆ ಡಾ.ವಿಜಯ ಸಂಕೇಶ್ವರ ಪತ್ರ ಶಿವಲಿಂಗ ಪತ್ತೆಯಾದ ವಿಷಯ ಪ್ರಧಾನಿ ನರೇಂದ್ರ ಮೋದಿ ಅವರ ಗಮನದಲ್ಲಿದ್ದರೂ ಪವಿತ್ರ ಕ್ಷೇತ್ರದಲ್ಲಿ ಶಿವನಿಗೆ ಗೌರವಯುತ ಸ್ಥಾನ ಸಿಗುವಂತಾಗಲು ಕ್ರಮ ತೆಗೆದುಕೊಳ್ಳುವಂತೆ ಕೋರಿ ಹಿರಿಯ ಉದ್ಯಮಿ, ಮಾಜಿ ಸಂಸದ ಡಾ.ವಿಜಯಸಂಕೇಶ್ವರ ಅವರು ಮೋದಿ ಅವರಿಗೆ ಪತ್ರ ಬರೆಯಲಿದ್ದಾರೆ. ಭಾರತೀಯ ಧರ್ಮ, ಸಂಸ್ಕೃತಿ ಉಳಿವಿಗಾಗಿ ಶ್ರಮಿಸುತ್ತಾ ಅಯೋಧ್ಯೆ ಅಭಿವೃದ್ಧಿಗೆ ಕಂಕಣ ತೊಟ್ಟಿರುವ ಪ್ರಧಾನಿ ಅವರು ಶ್ರೀರಾಮನ ಭಕ್ತರಿಗಾಗಿ ಪ್ರಶಸ್ತ ಸ್ಥಳದಲ್ಲಿ ಶಿವನ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಿದ್ದಾರ
| ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಶ್ರೀಶೈಲ ಪೀಠ
| ವಿ.ಜಿ.ಪಾಟೀಲ ಹಿರಿಯ ನ್ಯಾಯವಾದಿ ಹುಬ್ಬಳ್ಳಿ