ದಲಿತ ಎಂದವನಿಗೆ ಜಾನ್ವಿ ಕಪೂರ್​​ ಬಾಯ್​ಫ್ರೆಂಡ್​​​ ಶಿಖರ್​​ ಪಹಾಡಿಯಾ ಕ್ಲಾಸ್​​​; ಪೋಸ್ಟ್​ ವೈರಲ್​ | Shikhar Pahadia

dk-2025-03-18t164014242-67d954a4dab16
Published on

Shikhar Pahadia : ಬಾಲಿವುಡ್​ ನಟಿ ಜಾನ್ವಿ ಕಪೂರ್​ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಆದರೆ, ಇದೀಗ ಜಾನ್ವಿ ಜತೆ ಡೇಟಿಂಗ್ ನಲ್ಲಿರುವ ಆಕೆಯ ಗೆಳೆಯ ಶಿಖರ್​ ಪಹಾಡಿಯಾ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಬಳಕೆದಾದರೊಬ್ಬರು ಮಾಡಿದ ಕಾಮೆಂಟ್​ಗೆ ಸರಿಯಾದ ಉತ್ತರ ಕೊಟ್ಟಿದ್ದು, ಇದೀಗ ಈ ಪೋಸ್ಟ್​ ವೈರಲ್​ ಆಗುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ಸದಾ ಆಕ್ಟಿವ್​ ಆಗಿರುವ ಶಿಖರ್​ ಪಹಾಡಿಯಾಗೆ ಸೋಷಿಯಲ್​ ಮೀಡಿಯಾದ ಒಳಕೆದಾರೊಬ್ಬರಿಂದ ನೀವು ದಲಿತ ಎಂಬ ಕಾಮೆಂಟ್​ ಬಂದಿದೆ. ಸಾಮಾನ್ಯವಾಗಿ ಯಾವುದಕ್ಕೂ ಪ್ರತಿಕ್ರಿಯೆ ನೀಡದ ಶಿಖರ್​ ಈ ಬಾರಿ ಕಿಡಿ ಕಾರಿದ್ದಾರೆ. ಅಲ್ಲದೆ, ಈ ಕಾಮೆಂಟ್​ ಕುರಿತಾಗಿ ಟ್ರೋಲ್​ಗಳಿಗೂ ಪರೋಕ್ಷವಾಗಿ ಹರಿಹಾಯ್ದಿದ್ದಾರೆ. ಇದೀಗ ಈ ಕುರಿತಾಗಿ ಮಾಡಿರುವ ಪೋಸ್ಟ್​ ವೈರಲ್​ ಆಗಿದೆ.

ಅಷ್ಟಕ್ಕೂ ಆಗಿದ್ದಾರೂ ಏನು..?

ಶಿಖರ್​ ಪಹಾಡಿಯಾ ಅವರು ತನ್ನ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಸ್ಕ್ರೀನ್​ಶಾಟ್​ ಹಂಚಿಕೊಂಡಿದ್ದಾರೆ. ಅದರಲ್ಲಿ ಬಳಕೆದಾರೊಬ್ಬರು ಬರೆದಿರುವ ''ಆದರೆ, ನೀವೂ ದಲಿತ''( Lekin tu toh dalit hai) ಎಂಬ ಬರಹವನ್ನು ಹಂಚಿಕೊಂಡಿದ್ದು, '' 2025 ರಲ್ಲಿಯೂ ನಿಮ್ಮಂತಹ ಜನರು ಇನ್ನೂ ಸಣ್ಣ, ಹಿಂದುಳಿದ ಮನಸ್ಥಿತಿಯನ್ನು ಹೊಂದಿರುವುದು ನಿಜಕ್ಕೂ ಶೋಚನೀಯ. ದೀಪಾವಳಿ ದೀಪಗಳು, ಪ್ರಗತಿ ಮತ್ತು ಏಕತೆಯ ಹಬ್ಬ, ದಿವ್ಯಜ್ಞಾನಿ ಸಣ್ಣ ಮನಸ್ಸಿನ ಗ್ರಹಿಕೆಗೆ ಮೀರಿದ ಪರಿಕಲ್ಪನೆಗಳು. ಭಾರತದ ಶಕ್ತಿ ಯಾವಾಗಲೂ ಅದರ ವೈವಿಧ್ಯಮಯ ಸಂಸ್ಕೃತಿಯಲ್ಲಿದೆ, ಅದನ್ನು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ವಿಫಲರಾಗುತ್ತೀರಿ" ಎಂದಿದ್ದಾರೆ.

ಮುಂದುವರೆದು "ಬಹುಶಃ ಅಜ್ಞಾನವನ್ನು ಹರಡುವ ಬದಲು, ನೀವು ನಿಮ್ಮನ್ನು ಶಿಕ್ಷಣ ಮಾಡಿಕೊಳ್ಳುವತ್ತ ಗಮನಹರಿಸಬೇಕು ಏಕೆಂದರೆ ಇದೀಗ, ಇಲ್ಲಿ ನಿಜವಾಗಿಯೂ 'ಅಸ್ಪೃಶ್ಯ'ವಾಗಿರುವ ಏಕೈಕ ವಿಷಯವೆಂದರೆ ನಿಮ್ಮ ಆಲೋಚನಾ ಮಟ್ಟ'' ಎಂದು ಕಿಡಿಕಾರಿದ್ದಾರೆ.

ಜಾನ್ವಿ- ಪಹಾಡಿಯಾ ಡೇಟಿಂಗ್​..!

ಶಿಖರ್ ಪಹಾಡಿಯಾ ಮತ್ತು ಜಾನ್ವಿ ಕಪೂರ್ ಕೆಲ ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಹೃದಯಸ್ಪರ್ಶಿ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೆ, ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net