ಜ.21ರಿಂದ ಶಿಕಾರಿಪುರ ಮಾರಿಕಾಂಬೆ ಜಾತ್ರೆ

skp marikambe
ಶಿಕಾರಿಪುರ ಶ್ರೀ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಗೋಣಿ ಪ್ರಕಾಶ್ ಅವರನ್ನು ಸಮಿತಿ ಸದಸ್ಯರು ಸನ್ಮಾನಿಸಿದರು. ಪಾರಿವಾಳದ ಶಿವಶಂಕರಪ್ಪ, ಶಿವನ ಗೌಡ, ರಾಜಪ್ಪ, ಅಶೋಕ, ಚಿಕ್ಕಣ್ಣ ಇತರರಿದ್ದರು.
Published on

ಶಿಕಾರಿಪುರ: ಕ್ಷೇತ್ರದ ಶ್ರೀ ಮಾರಿಕಾಂಬಾ ದೇವಿ ಜಾತ್ರೋತ್ಸವ 2025ರ ಜ.21 ಮತ್ತು 22ರಂದು ನೆರವೇರಿಸಲು ನಿರ್ಧರಿಸಲಾಗಿದೆ ಎಂದು ಶ್ರೀ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಗೋಣಿ ಪ್ರಕಾಶ್ ಹೇಳಿದರು.

ಜಾತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಾತ್ರೋತ್ಸವಕ್ಕೆ ನಾಡಿನ ಎಲ್ಲೆಡೆಯಿಂದ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷದಂತೆ ಈ ಸಲವೂ ಶಾಸ್ತ್ರೋಕ್ತವಾಗಿ ಮತ್ತು ವಿಜೃಂಭಣೆಯಿಂದ ನಡೆಸಲು ಎಲ್ಲರ ಸಹಾಯ, ಸಹಕಾರ, ಮಾರ್ಗದರ್ಶನದ ಅಗತ್ಯವಿದೆ ಎಂದರು.

ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ ಮಾತನಾಡಿ, ಎಲ್ಲರೂ ಒಂದಾಗಿ, ಎಲ್ಲರ ಸಲಹೆ ಪಡೆದು ದೇವಿ ಜಾತ್ರೆಯನ್ನು ನಡೆಸೋಣ. ಒಮ್ಮಸ್ಸಿನಿಂದ ತಾಯಿಯ ಸೇವೆ ಮಾಡೋಣ. ಜಾತ್ರೋತ್ಸವ ನಡೆಸುವುದು ನಮ್ಮ ಸೌಭಾಗ್ಯ. ನಾಡಿನ ಬೇರೆ ಬೇರೆ ಮಾರಿಕಾಂಬಾ ಜಾತ್ರೆಗಳಂತೆ ಈ ಜಾತ್ರೆಯೂ ಅತ್ಯಂತ ಯಶಸ್ವಿಯಾಗಿಸೋಣ ಎಂದು ಸಲಹೆ ನೀಡಿದರು.

ದೇಗುಲ ಸಮಿತಿ ಅಧ್ಯಕ್ಷತೆ: ಪ್ರತಿ ವರ್ಷ ದೇವಸ್ಥಾನ ಸಮಿತಿ ಜತೆಗೆ ಜಾತ್ರೆ ಉಸ್ತುವಾರಿ ಸಮಿತಿ ರಚಿಸಲಾಗುತ್ತದೆ. ಅದಕ್ಕೆ ಪೂರಕವಾಗಿ ಈ ಬಾರಿಯೂ ಜಾತ್ರಾ ಸಮಿತಿ ರಚಿಸಬೇಕು ಎನ್ನುವಾಗ ಎಂಟು ಜನ ಆಕಾಂಕ್ಷಿಗಳಿದ್ದರು. ಈ ಕಾರಣದಿಂದ ಯಾವುದೇ ಮನಸ್ತಾಪ ಇಲ್ಲದಂತೆ ದೇವಸ್ಥಾನ ಸಮಿತಿ ಅಧ್ಯಕ್ಷತೆಯಲ್ಲೇ ನಡೆಸಲು ತೀರ್ಮಾನಿಸಲಾಯಿತು.

ಶ್ರೀ ಮಾರಿಕಾಂಬಾ ದೇವಸ್ಥಾನದ ಉಪಾಧ್ಯಕ್ಷ ಪರಮೇಶ್ವರಪ್ಪ, ಕಾರ್ಯದರ್ಶಿ ಹೊಲಗಾವಲು ಚಿಕ್ಕಣ್ಣ, ನಿಕಟಪೂರ್ವ ಜಾತ್ರಾ ಸಮಿತಿ ಅಧ್ಯಕ್ಷ ಮಹೇಶ್ ಹುಲ್ಮಾರ್, ಪ್ರಮುಖರಾದ ಗೋಣಿ ಮಾಲತೇಶ್, ಭದ್ರಾಪುರ ಹಾಲಪ್ಪ, ಶಿವನ ಗೌಡ, ಪಾತ್ರೆ ಹಾಲಪ್ಪ, ಪ್ರಶಾಂತ್ ಸಂದಿಮನಿ, ಪಾರಿವಾಳದ ಶಿವಶಂಕರಪ್ಪ, ಅಶೋಕಣ್ಣ, ಪ್ರಶಾಂತ್ ತಳವಾರ್, ಶ್ರೀಕಾಂತ್, ಪ್ರಶಾಂತ್ ಜೀನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net