ಪತ್ರಕರ್ತರ ಸೇವೆ ಹಿರಿದು

ಪತ್ರಕರ್ತರಿಗೆ ಸನ್ಮಾನ
ಶಿರಾಳಕೊಪ್ಪದಲ್ಲಿ ಪತ್ರಕರ್ತರಾದ ಬಿ.ವಿ.ಶೇಷಗಿರಿ, ಅರುಣ್‌ಕುಮಾರ್, ನವೀನ್, ಸತೀಶ್ ಅವರನ್ನು ರೈತ ಸಂಘದಿಂದ ಸನ್ಮಾನಿಸಲಾಯಿತು. ಪ್ಯಾಟಿ ಈರಣ್ಣ, ಪುಟ್ಟನ ಗೌಡ, ಚಂದ್ರಶೇಖರ, ರಾಜಶೇಖರ್ ಇತರರಿದ್ದರು.
Published on

ಶಿಕಾರಿಪುರ: ಪ್ರತಿಫಲಾಪೇಕ್ಷೆ ಇಲ್ಲದೆ ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ ಹೇಳಿದರು.
ಶಿರಾಳಕೊಪ್ಪದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದ ಅವರು, ಬಿ.ವಿ.ಶೇಷಗಿರಿ ಅವರು, ಮೂರು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟನ ಗೌಡ ಮಾತನಾಡಿ, ಪತ್ರಕರ್ತರದು ಕೆಲಸವಲ್ಲ, ಅದೊಂದು ಸೇವೆ. ತಮ್ಮ ಸ್ವಂತ ಬದುಕನ್ನು ಬದಿಗಿಟ್ಟು ಸಮಾಜಕ್ಕಾಗಿ ಅವರ ಸೇವೆ ಸಮರ್ಪಿತವಾಗಿರುತ್ತದೆ ಎಂದು ಹೇಳಿದರು.
ಪತ್ರಕರ್ತ ಬಿ.ವಿ.ಶೇಷಗಿರಿ ಮಾತನಾಡಿ, ರೈತ ಹೋರಾಟಗಳು ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯುವಕರಿಗೆ ಹೆಚ್ಚಿನ ಮನ್ನಣೆ ನೀಡುವ ಮೂಲಕ ಸಂಘಟನೆ ಬಲಗೊಳಿಸಬೇಕು ಎಂದರು.
ತಾಲೂಕು ಅಧ್ಯಕ್ಷ ರಾಜಶೇಖರ್, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಪ್ಪ, ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಹಾಲಪ್ಪ ಗೌಡ, ಬಸವಣ್ಣಪ್ಪ, ಕರಿಬಸಪ್ಪ, ಅಕ್ಕಿ ಪ್ರಭು, ಜಗದೀಶ್, ಈರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net